Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ಪರ್ಧಾತ್ಮಕ ಪರೀಕ್ಷೆಗೆ ಶ್ರದ್ಧೆ ಬಹಳ ಮುಖ್ಯ: ಡಾ. ಹೆಚ್. ಎಲ್. ನಾಗರಾಜು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಸಾಧಿಸುವ ಛಲ ಹಾಗೂ ಶ್ರದ್ಧೆ ಬಹಳ ಮುಖ್ಯ. ಅದರ ಜೊತೆಗೆ ವಿವೇಚನೆಯೂ ಬೇಕಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು ತಿಳಿಸಿದರು.

ಮಂಡ್ಯದ‌ ಕೃಷಿಕ್ ಸರ್ವೋದಯ ಟ್ರಸ್ಟ್ ನ ವತಿಯಿಂದ ನಡೆದ ಯು.ಪಿ.ಎಸ್.ಸಿ‌ ಹಾಗೂ ಕೆ.ಪಿ.ಎಸ್.ಸಿ ಪರೀಕ್ಷೆಗಳ ಬುನಾದಿ ತರಬೇತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಮೊದಲನೆಯ ಹಂತ ದಾಟಿ, ಎರಡನೆಯ ಹಂತದಲ್ಲಿ ಅನುತ್ತೀರ್ಣ ಆಗುತ್ತಾರೆ. ಆದರೆ ಪ್ರಯತ್ನವನ್ನು ಎಂದಿಗೂ ಬಿಡಬಾರದು ಮರು ಪ್ರಯತ್ನ ಮಾಡಬೇಕು. ಆಗ ಮಾತ್ರ ಯಶಸ್ಸು ಸಿಗುವುದು ಸಾಧ್ಯ ಎಂದರು.

nudikarnataka.com

ಕರ್ನಾಟಕ ಸರ್ಕಾರದ ಪರಿಸರ ಇಲಾಖೆಯ ವಿಶ್ರಾಂತ ಕಾರ್ಯದರ್ಶಿ ಎಂ.ಸಿ. ಲಕ್ಷ್ಮಣರವರು ಮಾತನಾಡಿ, ಗುರಿಯನ್ನು ತಲುಪುವ ಹಾದಿಯಲ್ಲಿ ಅಡಚಣೆಗಳು ಬರುತ್ತವೆ. ಅವುಗಳನ್ನು ಸರಿಸಿ ಗುರಿಯನ್ನು ತಲುಪಬೇಕು ಎಂದರು.

9 ಮಾರ್ಗಗಳನ್ನು ಇಟ್ಟುಕೊಂಡಿರಬೇಕು. ಸೋಲು ಬಂದಾಗ ಬೇರೆ ಮಾರ್ಗವನ್ನು ಅನುಸರಿಸಬೇಕು. ಆ ಮಾರ್ಗದ ಮುಖಾಂತರ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.

ಯಾವುದು ಸುಲಭವಾಗಿ ದೊರಕುವುದಿಲ್ಲ. ಆದ್ದರಿಂದ ಕಷ್ಟ ಪಟ್ಟರೆ ಅದು ಸುಲಭವಾಗಿ ಸಿಗುತ್ತದೆ. ಯಶಸ್ಸನ್ನು ಪಡೆಯಬೇಕಾದರೆ ಹೆಚ್ಚು ಪರಿಶ್ರಮ ಹಾಕಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿಕ ಸರ್ವೋದಯ ಟ್ರಸ್ಟ್ ನ ಅಧ್ಯಕ್ಷರಾದ ಟಿ. ತಿಮ್ಮೇಗೌಡ, ಕಾರ್ಯದರ್ಶಿ ಎ.ಎಂ ಅಣ್ಣಯ್ಯ, ಕಾರ್ಯಾಧ್ಯಕ್ಷರಾದ ಡಾ. ರಾಮಲಿಂಗಯ್ಯ, ಸಂಚಾಲಕರಾದ ಡಾ. ಕೆ ಬಿ ಬೋರಯ್ಯ , ಜಂಟಿ ಕಾರ್ಯದರ್ಶಿ ಡಾ. ಎಸ್ ಟಿ ರಾಮಚಂದ್ರ, ಟ್ರಸ್ಟ್ ಗಳಾದ ಎಸ್ ಲೋಕೇಶ್, ಸಂಪನ್ಮೂಲ ವ್ಯಕ್ತಿ ಡಾ.ಬಿ. ಎಂ.ರಾಮಚಂದ್ರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!