Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಗ್ಯಾರಂಟಿ| ತೆಲಂಗಾಣದಲ್ಲೂ ಮಹಿಳೆಯರಿಗೆ ಇಂದಿನಿಂದ ಉಚಿತ ಬಸ್‌ ಪ್ರಯಾಣ

ಅಧಿಕಾರಕ್ಕೆ ಬಂದ ಎರಡೇ ದಿನಕ್ಕೆ ತೆಲಂಗಾಣದ ಕಾಂಗ್ರೆಸ್ ಸರ್ಕಾರ ತನ್ನ ಆರು ಚುನಾವಣಾ ಗ್ಯಾರಂಟಿಗಳ ಪೈಕಿ ಎರಡನ್ನು ಜಾರಿಗೊಳಿಸಲು ಮುಂದಾಗಿದೆ. ಇಂದಿನಿಂದ ‘ಮಹಾಲಕ್ಷಿ’ ಯೋಜನೆಯಡಿ ಟಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ‘ರಾಜೀವ್ ಆರೋಗ್ಯ ಶ್ರೀ’ ಯೋಜನೆಯಡಿ 10 ಲಕ್ಷ ರೂಪಾಯಿ ವಿಮೆ ಯೋಜನೆ ಅನುಷ್ಠಾನಗೊಳ್ಳಲಿದೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟಿಎಸ್‌ಆರ್‌ಟಿಸಿ ಎಂ.ಡಿ ವಿಸಿ ಸಜ್ಜನರ್, “ಮುಖ್ಯಮಂತ್ರಿ ರೇವಂತ್ ರೆಡ್ಡಿ ಇಂದು (ಶನಿವಾರ) ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಯ ಬಳಿಕ ರಾಜ್ಯಾಧ್ಯಂತ ಮಹಿಳೆಯರು ಟಿಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಟಿಕೆಟ್‌ ಪಡೆಯದೆ ಪ್ರಯಾಣಿಸಬಹುದು” ಎಂದು ತಿಳಿಸಿದ್ದಾರೆ.

“ಮಹಿಳೆಯರು, ವಿದ್ಯಾರ್ಥಿನಿಯರು, ತೃತೀಯ ಲಿಂಗಿಗಳು ಉಚಿತ ಪ್ರಯಾಣ ಮಾಡಬಹುದು. ಹೈದರಾಬಾದ್‌ ನಗರದಲ್ಲಿ ಸಾಮಾನ್ಯ ಬಸ್‌ಗಳು ಮತ್ತು ಮೆಟ್ರೋ ಸೇವಾ ಬಸ್‌ಗಳಲ್ಲಿ ಈ ಸೌಲಭ್ಯವಿದೆ. ರಾಜ್ಯದ ಇತರೆಡೆಗಳಲ್ಲಿ ಎಕ್ಸ್‌ಪ್ರೆಸ್‌ ಮತ್ತು ಗ್ರಾಮೀಣ ಸಾರಿಗೆ(ಪಲ್ಲೆ ವೆಲುಗು) ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು” ಎಂದು ವಿ.ಸಿ ಸಜ್ಜನರ್‌ಮಾಹಿತಿ ನೀಡಿದ್ದಾರೆ.

“>

“ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ 7,200 ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಇದರ ಪ್ರಮಾಣ ಶೇ. 40ರಷ್ಟಿದೆ. ಇದನ್ನು ಶೇ.55ಕ್ಕೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಉಚಿತ ಪ್ರಯಾಣಕ್ಕೆ ಶೂನ್ಯ ವೆಚ್ಚದ ಟಿಕೆಟ್ ನೀಡಲಾಗುವುದು. ಮಹಿಳೆಯರು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸಬಹುದು” ಎಂದು ವಿ.ಸಿ ಸಜ್ಜನರ್‌ ಹೇಳಿದ್ದಾರೆ.

ಮಹಿಳೆಯರ ಉಚಿತ ಬಸ್‌ ಪ್ರಯಾಣ ಯೋಜನೆಯಿಂದ ವಾರ್ಷಿಕವಾಗಿ ರಾಜ್ಯ ಸರ್ಕಾರಕ್ಕೆ 3 ಸಾವಿರ ಕೋಟಿ ರೂಪಾಯಿ ಆರ್ಥಿಕ ಹೊರೆಯಾಗಲಿದೆ ಎಂದು ತಿಳಿದು ಬಂದಿದೆ.

ಮಹಾಲಕ್ಷ್ಮಿ, ರೈತ ಭರೋಸಾ, ಗೃಹ ಜ್ಯೋತಿ, ಇಂದಿರಮ್ಮ ಇಂಡ್ಲು, ಯುವ ವಿಕಾಸಂ, ಚೇಯುತ ಈ 6 ಗ್ಯಾರಂಟಿಗಳನ್ನು ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿತ್ತು. ಈ ಪೈಕಿ ಮಹಾಲಕ್ಷಿ ಮತ್ತು ಚೇಯುತ ಯೋಜನೆಗಳು ಇಂದಿನಿಂದ ಜಾರಿಗೆ ಬರುತ್ತಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!