Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ವಾತಂತ್ರ್ಯ ಹರಿಕಾರ ಟಿಪ್ಪುವಿನ ಜನ್ಮದಿನ ಇಂದು

ಮೈಸೂರು ಹುಲಿ ಎಂದೇ ಪ್ರಸಿದ್ಧರಾಗಿದ್ದ ಟಿಪ್ಪು ಸುಲ್ತಾನ್ ಅವರ ಜನ್ಮ ದಿನ ಇಂದು. ಆದರೆ ಇಂತಹ ಅಪ್ರತಿಮ ದೇಶ ಭಕ್ತನ ಜನ್ಮದಿನವನ್ನು, ಆತನ ನೈಜ್ಯ ಇತಿಹಾಸ ಗೊತ್ತಿರುವ ಕೆಲವೇ ಕೆಲವು ಮಂದಿ ಮಾತ್ರ ಆಚರಣೆ ಮಾಡಿದ್ದಾರೆ.

ಟಿಪ್ಪು ಅಪ್ರತಿಮ ದೇಶ ಭಕ್ತ, ದೇಶ ಪ್ರೇಮಿ, ರಾಷ್ಟ್ರೀಯವಾದಿ, ಬ್ರಿಟಿಷ್ ವಶಹತುಶಾಹಿ ವಿರುದ್ಧ ಹೋರಾಡಿ, ತನ್ನ ಮಕ್ಕಳನ್ನು ಒತ್ತೆ ಇಟ್ಟರು. ಆದರೆ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದರೆ ಹೊರತು, ಎಂದಿಗೆ ತನ್ನ ರಾಜ್ಯವನ್ನು ಬಿಟ್ಟು ಕೊಡಲಿಲ್ಲ. ಈ ಪ್ರಕ್ರಿಯೆಯಲ್ಲಿ ಅಕ್ಕಪಕ್ಕದ ರಾಜ್ಯಗಳ ರಾಜರನ್ನು ಸಂಘಟಿಸಲು ಪ್ರಯತ್ನಿಸಿ, ದೇಶದ ಬಗ್ಗೆ ಹುಚ್ಚು ಅಭಿಮಾನವನ್ನು ತೋರಿಸಿದ್ದ. ತನಗೆ ಜೊತೆಗಾರರಿಲ್ಲದಿದ್ದರೂ ಒಬ್ಬಂಟಿಯಾಗಿಯೇ ಹೋರಾಡಿ ವೀರ ಮರಣ ಹೊಂದಿದ. ಅದು ಕೂಡ ತನ್ನ ದಂಡನಾಯಕ ಮೀರ್ ಸಾದಿಕಿನ ಒಳ ಸಂಚಿನಿಂದ.

ಬ್ರಿಟಿಷ್ ಸಾಮ್ಯಾಜ್ಯವು ಬೇರೆ ಪ್ರಾಂತ್ಯಗಳ ಮೇಲೆ ಒಂದೆರಡು ಯುದ್ದಗಳನ್ನು ಮಾಡಿ ಜಯಿಸಿದರೆ, ಮೈಸೂರಿನ ವಿರುದ್ದ ಸತತ ನಾಲ್ಕು ಆಂಗ್ಲೋ ಮೈಸೂರು ಯುದ್ದಗಳನ್ನು ಮಾಡಿ ಪ್ರಯಾಸದ ಗೆಲುವು ಪಡೆಯಬೇಕಾಯಿತು ಎಂಬುದು ಇತಿಹಾಸ.

ಕೇವಲ 25-30 ವರ್ಷಗಳಲ್ಲಿ ಹೈದರಾಲಿ ಹಾಗೂ ಟಿಪ್ಪು ಅವರು ಸತತ ನಾಲ್ಕು ಯುದ್ಧಗಳನ್ನು ಎದುರಿಸಿ ಪ್ರಾಣ ತೆತ್ತರು. ನಮ್ಮ ಕೊನೆಯ ಕ್ಷಣದವರೆಗೂ ಹೈದರಾಲಿ, ಟಿಪ್ಪು ಅವರು ಬ್ರಿಟಿಷರಿಗೆ ಮಣಿಯಲಿಲ್ಲ. ಒಂದು ಸಂದರ್ಭದಲ್ಲಿ ಟಿಪ್ಪು ಒಬ್ಬನನ್ನು ಮಣಿಸಿದರೆ ನಾವು ಇಡೀ ಹಿಂದೂಸ್ತಾನವನ್ನು ಜಯಿಸಿದಂತೆಯೇ ಎಂದು ಬ್ರಿಟಿಷರು ಅಂದು ಕೊಂಡಿದ್ದರು. ಆದರೆ ಬ್ರಿಟಿಷರು ಹಿಂದೂಸ್ತಾನದ ಯಾವ ರಾಜನೊಂದಿಗೆ ಇಷ್ಟೊಂದು ಹಠಕ್ಕೆ ಬಿದ್ದು ಗೆಲ್ಲಲು ಪ್ರಯಾಸ ಪಡಲಿಲ್ಲ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!