Thursday, September 19, 2024

ಪ್ರಾಯೋಗಿಕ ಆವೃತ್ತಿ

ಎನ್ಎಸ್ಎಸ್ ಶಿಬಿರಗಳಿಂದ ಶಿಸ್ತು – ಮೌಲ್ಯಗಳ ಕಲಿಕೆ

ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳಲ್ಲಿ ಹೊಂದಾಣಿಕೆ, ಸಮಯಪ್ರಜ್ಞೆ, ಶಿಸ್ತು ಹಾಗೂ ಮೌಲ್ಯಗಳನ್ನು ಕಲಿಸುವಲ್ಲಿ ಸಹಕಾರಿಯಾಗಿವೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಹೇಳಿದರು.

ಪಾಂಡವಪುರ ತಾಲೂಕಿನ ಕುಂತಿಬೆಟ್ಟದಲ್ಲಿ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇಕು ಎನ್ನುವ ಕೊಳ್ಳು ಬಾಕುತನ ನಮ್ಮನ್ನು ಹಾಗೂ ನಮ್ಮ ಬದುಕನ್ನು ನಾಶಪಡಿಸಿಕೊಳ್ಳುತ್ತಿದೆ, ಬೇಕುಗಳಿಗೆ ತಡೆ ಹಾಕದಿದ್ದರೆ ಮನುಷ್ಯ ಉದ್ದಾರವಾಗುವುದು ಅಸಾಧ್ಯ. ಗಾಂಧಿ ಪ್ರಣೀತ ಎನ್‌ಎಸ್‌ಎಸ್‌ನಲ್ಲಿ ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಗಳಿಸಿಕೊಳ್ಳಬಹುದು. ಇತ್ತೀಚಿಗೆ ಗಾಂಧಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಹಾಗೂ ತಪ್ಪು ಸಂದೇಶಗಳನ್ನು ಹರಿಯಬಿಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಗಾಂಧಿವಾದಿ ಬಿ.ಸುಜಯ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಸಮಯವನ್ನು ಗೌರವಿಸಿದರೆ ಎಲ್ಲವನ್ನೂ ಸಂಪಾದಿಸಲು ಸಾಧ್ಯವಾಗುತ್ತದೆ. ಜತೆಗೆ ಅನ್ನದ ಬೆಲೆ ತಿಳಿಯುವುದು ಕೂಡ ಅತಿಮುಖ್ಯ. ಸಮಾಜದಲ್ಲಿ ಮೌಲ್ಯಗಳು ಶಾಶ್ವತ. ಹೀಗಾಗಿ ಪ್ರತಿಯೊಬ್ಬರೂ ಮಾಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಮನುಷ್ಯರಾಗಿ ಮುನ್ನಡೆಯಬೇಕು ಎಂದು ಹೇಳಿದರು.

ಮನಸ್ಸಿನ ನಿಗ್ರಹಕ್ಕೆ ಪ್ರಾರ್ಥನೆ ಅಗತ್ಯ. ಸಹಬಾಳ್ವೆಗೆ ಶಿಸ್ತು ಅವಶ್ಯಕ, ಹೀಗಾಗಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಾರ್ಥನೆ ಮತ್ತು ಶಿಸ್ತು ರೂಪಿಸಿಕೊಳ್ಳಬೇಕು. ನಮ್ಮ ಕೆಲಸ ಬೇರೆಯವರ ಕೈಯಲ್ಲಿ ಮಾಡಿಸಿದರೆ ಅಂದಿನಿಂದಲೇ ಶೋಷಣೆ ಆರಂಭವಾಗಲಿದೆ. ಹೀಗಾಗಿ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಎನ್.ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ಶ್ರೀ ಶಂಕರಾನಂದ ಭಾರತಿ ವಿದ್ಯಾಪೀಠದ ಅಧ್ಯಕ್ಷ ಎಚ್.ಎಲ್.ನಂಜೇಗೌಡ, ಗೌರವ ಕಾರ್ಯದರ್ಶಿ ಸಿ.ಎಂ.ಚನ್ನೇಗೌಡ, ನಿರ್ದೇಶಕ
ಡಾ.ಎಂ.ಮಾಯಿಗೌಡ, ಕಲರ್ ಟೋನ್ ಟೆಕ್ಸ್ ಟೈಲ್ಸ್ ಪ್ರೈ,ಲಿ ಸಂಪನ್ಮೂಲ ವ್ಯಕ್ತಿ ಜಿ.ಬಿ.ಪ್ರಶಾಂತ್, ಕಾಲೇಜಿನ ಸದಸ್ಯ ವೀರಭದ್ರಯ್ಯ, ಪ್ರಾಂಶುಪಾಲೆ ಎನ್.ಅರ್ಚನಾಸ್ವಾಮಿ ಹಾಗೂ ಕಾಲೇಜಿನ ಉಪನ್ಯಾಸಕರು ಉಪನ್ಯಾಸಕೇತರರು ಇತರರಿದ್ದರು. ಇದೇ ವೇಳೆ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!