ಜಗತ್ತಿನೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡ ಬಂಧುಗಳಿಗೆ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ ಹಾಗೂ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯರು, ಗುರು ಸಮಾನರೂ ಆಗಿರುವ ಶ್ರೀ ಗೊ.ರು.ಚನ್ನಬಸಪ್ಪನವರಿಗೆ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ ಎಂದು ಮಂಡ್ಯ ಸಂಸದರೂ ಆದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನಕ್ಕೆ ಗೈರಿನ ಹಿನ್ನೆಲೆಯಲ್ಲಿ ನಾಡಿನ ಜನತೆ ಸಂದೇಶ ನೀಡಿರುವ ಅವರು, ವಿಶೇಷವಾಗಿ ಕನ್ನಡ ನೆಲದ ಸೊಗಡಿನ ತವರು ಮನೆ, ಪ್ರತಿಶತ ನೂರಕ್ಕೆ ನೂರರಷ್ಟು ಕನ್ನಡವನ್ನೇ ಮಾತನಾಡುವ ಜನರಿರುವ, ಜಾನಪದ ಸಮೃದ್ಧತೆಯ ನೆಲೆವೀಡು, ಮಾನವೀಯತೆ, ಮಾತೃತ್ವ ಸೆಲೆಯ ಮೇರುಸೃಷ್ಟಿ ಪುಣ್ಯಕೋಟಿ ಪದ್ಮದ ಪುಣ್ಯನೆಲ, ಸಕ್ಕರೆನಾಡು. ನಾನು ಪ್ರತಿನಿಧಿಸುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂಭ್ರಮದ ಸಂಗತಿಯೇ ಹೌದು ಎಂದಿದ್ದಾರೆ.
ಮಂಡ್ಯ ಜಿಲ್ಲೆಯ ನನ್ನ ಜನರಷ್ಟೇ ಅಲ್ಲ. ಎಲ್ಲೆಗಳನ್ನು ಮೀರಿ ಜಗತ್ತಿನ ಉದ್ದಗಲಕ್ಕೂ ನೆಲೆಸಿ ಕನ್ನಡದ ಕಂಪು ಹರಡುತ್ತಿರುವ ಎಲ್ಲ ಕನ್ನಡಿಗರು ಈ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ನನ್ನ ಕಳಕಳಿಯ ಮನವಿಬನ್ನಿ, ಬೃಹತ್ ಸಂಖ್ಯೆಯಲ್ಲಿ ಭಾಗಿಯಾಗೋಣ, ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಪನ್ನಗೊಳ್ಳಲಿ ಎಂದು ಅವರು ಸಂದೇಶ ನೀಡಿದ್ದಾರೆ.




