Friday, November 20, 2026

ಪ್ರಾಯೋಗಿಕ ಆವೃತ್ತಿ

ನಾಳೆ ಮಂಡ್ಯದಲ್ಲಿ ‘ನನ್ನ ತೇಜಸ್ವಿ’ ನಾಟಕ ಪ್ರದರ್ಶನ

ರಾಷ್ಟ್ರಕವಿ ಕುವೆಂಪು 121ನೇ ಜನ್ಮ ದಿನಾಚರ ಣೆ ಅಂಗವಾಗಿ ಮಂಡ್ಯದ ನೆಲ ದನಿ ಬಳಗ ಆಯೋಜಿಸಿರುವ ನನ್ನ ತೇಜಸ್ವಿ ನಾಟಕ ಪ್ರದರ್ಶನ ಡಿ.30ರಂದು ಸಂಜೆ 6.15ಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಅಧ್ಯಕ್ಷ ಎಂ.ಸಿ.ಲಂಕೇಶ್ ತಿಳಿಸಿದರು.

ಬಿ.ಎಂ.ಗಿರಿರಾಜ್ ಅವರು ರಂಗರೂಪ ನೀಡಿ ನಿರ್ದೇಶಿಸಿರುವ ಈ ನಾಟಕವನ್ನು ಬೆಂಗಳೂರಿನ ಕಲಾ ಮಾಧ್ಯಮ ತಂಡವರು ಅಭಿನಯಿಸುವರು. ವಿದೇಶದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಕನ್ನಡ ನಾಟಕ ಮಂಡ್ಯ ದಲ್ಲಿ ಪ್ರದರ್ಶನಗೊಳ್ಳುತ್ತಿದೆ ಎಂದು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ನೆಲದನಿ ಬಳಗದ ಪೋಷಕಿ ರುಕ್ಷ್ಮಿಣಿ ವಹಿಸ ಲಿದ್ದು, ಉದ್ಘಾಟನೆಯನ್ನು ಸಂಗೀತ ನಿರ್ದೇಶಕ ಮತ್ತು ಗೀತ ರಚನೆಕಾರ ಪೂರ್ಣಚಂದ್ರ ತೇಜಸ್ವಿ ನೆರವೇರಿಸಲಿದ್ದಾರೆ ಎಂದರು.

ನನ್ನ ತೇಜಸ್ವಿ ನಾಟಕ ಕುರಿತು ಪರಿಚಯ
ಪ್ರಕೃತಿಯ ಅಗಾಧತೆ ಮತ್ತು ಮನುಷ್ಯನ ಸಂಕಲ್ಪವನ್ನು ತಮ್ಮ ಬರಹದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವಷ್ಟು ಸಮರ್ಪಕವಾಗಿ ಯಾರೂ ಹಿಡಿದಿಲ್ಲ. ಕನ್ನಡ ನಾಡಿಗೆ ಅವರ ಕರ್ವಾಲೋ, ಜುಗಾರಿಕ್ರಾಸ್, ಚಿದಂಬರ ರಹಸ್ಯ, ಪರಿಸರದ ಕತೆ, ನ ಕತೆ, ಅಣ್ಣನ ನೆನಪು, ಮಹಾಪಲಾಯನ ಮೊದಲಾದ ಕೃತಿಗಳು ಬದುಕನ್ನು ನೋಡಲು ಇರುವಂತಹ ಗ್ರೇಡ್. ತೇಜಸ್ವಿ ಎನ್ನುವ ವ್ಯಕ್ತಿ ಈ ನಾಡಿನ ಎಲ್ಲ ಸತ್ವವ ಹೀರಿ ಅನಂತಕ್ಕೆ ಕೈಚಾಚಿ ಕೊ ನೆಗೆ ಕಾಡೊಳಗೆಯೇ ವಿಶ್ವಮಾನವನಾದ ಒಂದು ಚೈತನ್ಯ. ನನ್ನ ತೇಜಸ್ಥಿಕೆ.ಪಿ.ಪೂರ್ಣ ಚಂದ್ರ ತೇಜಸ್ವಿ-ರಾಜೇಶ್ವರಿ ಜೇಶ್ವರಿ ಏಜಸ್ವಿ ಅವರ ಚೆಂದದ ದಾಂಪತ್ಯ ಕಾವ್ಯ. ಬದುಕನ್ನು ಪ್ರೀತಿಸಲುಪ್ರೇರೇಪಿಸುವಂತಹರೋಮಿಯೋ -ಜ್ಯೂಲಿಯಟ್, ರಾಧಾ-ಕೃಷ್ಣರಿಗಿಂತ ಗಿಲಾದ ಪ್ರೇಮಕಥೆ. ಈ ಪ್ರೇಮಕಥೆಯ ಸೋನೆ ಮಳೆಯಲ್ಲಿ ತೊಯ್ಯಲು ಕಲಾಮಾಧ್ಯಮ ತಂಡ ಆಹ್ವಾನಿಸುತ್ತಿದೆ ಎಂದು ಎಂ.ಸಿ.ಲಂಕೇಶ್ ವಿವರಿಸಿದರು.

ಇದೇ ವೇಳೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ.ಬಿ.ಎನ್.ಪ್ರಭಾವತಿ, ಕೀನ್ಯಾದ ನೈರೋಬಿಯಲ್ಲಿರುವ ಲೇಖಕಿ ಡಾ.ಸುಕನ್ಯಾ ಸೂನಗಹಳ್ಳಿ ಅವರನ್ನು ರೈತ ನಾಯಕಿ ಸುನಂದಾ ಹಾಗೂ ಅಂತಾ ರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಅಭಿನಂದಿಸುವರು ಎಂದರು.

ಮೂಳೆ ಮತ್ತು ಕೀಲುರೋಗ ತಜ್ಞ ಡಾ. ಎಚ್.ಎಸ್.ರವಿಕು ಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ ಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಬಿಡಿಎ ಆರಕ್ಷಕ ವೃತ್ತ ನಿರೀಕ್ಷಕ ಸಿ.ಸತೀಶ್, ನೇಗಿಲಯೋಗಿ ಸಮಾಜಸೇವಾಟ್ರಸ್ಟ್ ಅಧ್ಯಕ್ಷಎ.ಸಿ.ರಮೇಶ್, ನಿವೃತ್ತ ಸಹ ಪ್ರಾಧ್ಯಾಪಕ ಮರೀಗೌಡ, ಮಹಿ ಳಾ ಮುನ್ನಡೆಯ ಬಿ.ಎಸ್.ಶಿಲ್ಪ ಭಾಗವಹಿಸು ವರು ಎಂದರು. ರುಕ್ಷ್ಮಿಣಿ, ಮಹಾಲಕ್ಷ್ಮಿ, ಸುಬ್ರಹ್ಮಣ್ಯ, ಟಿ.ಎನ್.ರಕ್ಷಿತ್‌ರಾಜ್, ಟಿ. ಎಸ್.ಮಂಜು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ