Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದ ಹರ್ಡೀಕರ್

ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಪ್ರಯತ್ನಗಳಲ್ಲಿ ಡಾ. ನಾರಾಯಣರಾವ್ ಸುಬ್ಬರಾವ್ ಹರ್ಡೀಕರ್ ಅವರ ಕೊಡಗೆ ಅಪಾರ ಎಂದು ಭಾರತ ಸೇವಾ ದಳ ಜಿಲ್ಲಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಜಿ.ಎನ್.ನಾಗರಾಜು ಹೇಳಿದರು.

ಮಂಡ್ಯ ನಗರದಲ್ಲಿರುವ ಸೇವಾಕಿರಣ ಸಭಾಂಗಣದಲ್ಲಿ ಭಾರತ ಸೇವಾ ದಳ ಜಿಲ್ಲಾ ಸಮಿತಿ ಆಯೋಜಿಸಿದ್ದ ಸೇವಾದಳ ಸಂಸ್ಥಾಪಕ ಪದ್ಮಭೂಷಣ ಡಾ. ನಾ.ಸು.ಹರ್ಡೀಕರ್ ಅವರ ಪುಣ್ಯಸ್ಮರಣೆ ಅಂಗವಾಗಿ ವೃದ್ಧಾಶ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಮಹಾತ್ಮಗಾಂಧಿಜೀ ಅವರೊಂದಿಗೆ ಹೋರಾಟಗಳನ್ನೂ ರೂಪಿಸಿ, ಭಾರತಸೇವಾ ದಳ ಸ್ಥಾಪಿಸಿ ಹೋರಾಟಗಾರರಲ್ಲಿ ಶಿಸ್ತು, ಸಂಯಮ ಬೆಳೆಸಿ, ಚಳುವಳಿಗೆ ಹೊಸದಿಕ್ಕು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

1923 ರಲ್ಲಿ ಸಮಸ್ತ ಭಾರತದಲ್ಲಿ ಹಿಂದೂಸ್ತಾನಿ ಸೇವಾ ಮಂಡಲ ರಚಿಸಿ ಅಹಿಂಸೆಯಿಂದ ಸ್ವಾತಂತ್ರ್ಯ ಪಡೆಯಲು ಮಹಾತ್ಮಗಾಂದೀಜಿ ಅವರೊಂದಿಗೆ ಜೊತೆಗೂಡಿ ಚಳುವಳಿಯಲ್ಲಿ ಪಾಲ್ಗೊಳ್ಳುವ ಹೋರಾಟಗಾರರಿಗೆ ಶಿಸ್ತು ಬೋಧನೆ ಮಾಡಿ ಯಶಸ್ಸಿಗೆ ಕಾರಣರಾದರು ಎಂದು ಸ್ಮರಿಸಿದರು.

ಸಮಸ್ತ ಭಾರತಕ್ಕೆ ಅವರು ನೀಡಿದ ಸೇವಾಭಾವ ಕೊಡುಗೆ ಗಮನಿಸಿದ ಭಾರತ ಸರಕಾರ ಅವರಿಗೆ 1958 ರಲ್ಲಿ ಭಾರತದ “ಪದ್ಮಭೂಷಣ” ಗೌರವ ಪ್ರಶಸ್ತಿ ಪದಕ ನೀಡಿ ಗೌರವಿಸಿತು,.ಅವರು ಸೇವಾನಿರತ ಕಾರ್ಯದಲ್ಲಿರುವಾಗಲೇ 26 ಆಗಷ್ಟ್ 1975 ರಲ್ಲಿ ವಿಧಿವಶರಾದರು ಎಂದು ತಿಳಿಸಿದರು.

ಭಾರತ ಸೇವಾದಳವು ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ರಾಷ್ಟ್ರಗೀತೆ, ರಾಷ್ಟ್ರಧ್ವಜ ಸಂಹಿತೆಗಳ ಬಗ್ಗೆ ತರಬೇತಿ ನೀಡುತ್ತ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಹೆಚ್ಚಿಸುವಲ್ಲಿ ಸೇವೆ ನೀಡುತ್ತಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಜಾನಪದ ಗಾಯಕ ಬಂದೇಶ್ ಮತ್ತು ತಂಡದವರು ಗೀತಗಾಯನ ನಡೆಸಿದರು. ವೃದ್ಧರಿಗೆ ಹಣ್ಣು-ಹಂಪಲು, ಸಿಹಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಸಿ.ಶಿವಾನಂದ, ಉಪಾಧ್ಯಕ್ಷ ಬಿ.ಎನ್.ರಾಜು, ಖಜಾಂಚಿ ಶಿವಪ್ರಕಾಶ್‌ಬಾಬು, ಸಂಘಟಕ ಗಣೇಶ್,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!