Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯದ ಬಗ್ಗೆ ಅರಿವು ಅಗತ್ಯ

ವ್ಯಕ್ತಿಯು ಆರೋಗ್ಯದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಅರಿವು ಪಡೆದುಕೊಳ್ಳಬೇಕೆಂದು ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ನಾರಾಯಣ ಪಟಾಲಿ ಹೇಳಿದರು.

ಮಂಡ್ಯ ನಗರದ ತಮಿಳು ಕಾಲೋನಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೊಸಳ್ಳಿ ಇವರ ವತಿಯಿಂದ ನಡೆದ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.

ಆರೋಗ್ಯವೇ ಭಾಗ್ಯ ಎಂಬ ಮಾತಿದೆ, ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಬಹುತೇಕ ಆರೋಗ್ಯದ ಬಗ್ಗೆ ಗಮನಹರಿಸುತ್ತಿಲ್ಲ, ಆದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗಮನಹರಿಸಬೇಕು. ಮೂಢನಂಬಿಕೆ, ಬಾಲ್ಯ ವಿವಾಹ ಇವುಗಳಿಂದಾಗುವ ಅನಾಹುತಗಳ ಬಗ್ಗೆ ತಿಳಿದುಕೊಳ್ಳಬೇಕೆಂದರು.

ರೋಟರಿ ಶಾಲೆ ಪ್ರಾಂಶುಪಾಲ ಮೃತ್ಯುಂಜಯ, ಒಕ್ಕೂಟದ ಅಧ್ಯಕ್ಷೆ ರಮ್ಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶೋಭಾ ವಲಯ ಮೇಲ್ವಿಚಾರಕಿ ಗೌರಮ್ಮ, ಸೇವಾ ಪ್ರತಿನಿಧಿ ನಾಗವೇಣಿ ಉಪಸ್ಥಿತರಿದ್ದರು

ಸೌಹಾರ್ದ ಸಾಂಸ್ಕೃತಿಕ ಕಲಾ ಸಂಘದಿಂದ ಬೀದಿ ನಾಟಕ ಜನಪದ ಹಾಗೂ ಜಾಗೃತಿ ಗೀತೆಗಳನ್ನು ಹಾಡುವುದರ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು. ಕಲಾಸಂಘದ ಕಾರ್ಯದರ್ಶಿ ಹನಿಯಂಬಾಡಿ ಎನ್.ಶೇಖರ್, ಕಲಾವಿದರಾದ ಸಂತೆಕಸಲಗೆರೆ ಬಸವರಾಜ ಕೊಡಿಯಾಲ ಬಂದೇಶ್, ಹೆಚ್.ಬಿ.ರಾಮಕೃಷ್ಣ ರೋಸ್ ಮೇರಿ, ವೈರಮುಡಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!