Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಯ ಪಶುಪಾಲಕರಿಗೆ ಶಾಪವಾಗಲಿದೆಯೇ ವಂದೇ ಭಾರತ್ ರೈಲು !

ಚೆನೈ – ಮೈಸೂರು ನಡುವೆ ನವೆಂಬರ್ 10ರಂದು ಉದ್ಘಾಟನೆ ಆಗಲಿರುವ ವಂದೇ ಭಾರತ್ ರೈಲು ಮಂಡ್ಯ ಜಿಲ್ಲೆಯ ಪಶುಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಚೆನೈ- ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲು ಮಂಡ್ಯ ಜಿಲ್ಲೆಯಲ್ಲಿ ನಿಡಘಟ್ಟ ಬಳಿಯಿಂದ ನಗುನಹಳ್ಳಿ ತನಕ ಸಂಚಾರಿಸುತ್ತದೆ.

ಈ ರೈಲು ಹಾದುಹೋಗುವ ಹಳಿಗಳ ಬಳಿ ಮಂಡ್ಯ ಜಿಲ್ಲೆಯ ರೈತಾಪಿ ಸಮುದಾಯ ದನ, ಕರು, ಎಮ್ಮೆಗಳನ್ನು ಮೇಯಿಸಲು ಬಿಡುವುದು ಸಹಜವಾಗಿದ್ದು, ಆಕಸ್ಮಿಕವಾಗಿ ದನಕರುಗಳು ವಂದೇ ಭಾರತ್ ರೈಲಿಗೆ ಸಿಲುಕಿದರೆ, ಆರ್.ಪಿ.ಎಫ್ ಪೋಲಿಸ್ ನವರು ರೈತರ ಮೇಲೆ ಪ್ರಕರಣ ದಾಖಲಿಸುವ ಸಾಧ್ಯತೆಗಳು ನಿಶ್ಚಿತವಾಗಿದೆ.

ಈ ಹಿಂದೆ ಮಹಾರಾಷ್ಟದ ಮುಂಬೈನಿಂದ ಗುಜರಾತ್ ನ ಗಾಂಧಿನಗರಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲು, ಜಾನುವಾರುಗಳಿಗೆ ಗುದ್ದಿ, ತನ್ನ ಮೂತಿಯನ್ನು ಕಿತ್ತು ಕೊಂಡಿತ್ತು. ಈ ಸಂಬಂಧ ರೈಲ್ವೇ ಪೊಲೀಸರು ಜಾನುವಾರುಗಳ ಮಾಲೀಕರ ಮೇಲೆ ಕೇಸು ದಾಖಲಿಸಿದ್ದರು. ಇಲ್ಲೂ ಕೂಡ ರೈಲಿಗೆ ಅಡ್ಡ ಬಂದರೆ ಪಶುಪಾಲಕರ ಮೇಲೆ ಕೇಸು ಬೀಳುವುದು ಖಚಿತ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!