Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಆ.21ರಂದು ಜನಪದ ಸಾಹಿತ್ಯ ಚರಿತ್ರೆ ಪುಸ್ತಕ ಬಿಡುಗಡೆ

ಕ್ಯಾತನಹಳ್ಳಿ ರಾಮಣ್ಣ ಅಭಿಮಾನಿಗಳ ಬಳಗದ ವತಿಯಿಂದ ಕ್ಯಾತನಹಳ್ಳಿ ರಾಮಣ್ಣ ಅವರ ಜನಪದ ಸಾಹಿತ್ಯ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಭರತನಾಟ್ಯ ಕಾರ್ಯಕ್ರಮವನ್ನು ಆಗಸ್ಟ್ 21ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ.ಜಿ.ಟಿ.ವೀರಪ್ಪ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವ್ಯ, ಗಾದೆ, ಒಗಟು ,ಯಕ್ಷಗಾನ ಸೇರಿದಂತೆ ಹಲವಾರು ಪ್ರಕಾರಗಳು ಜನಪದ ಸಾಹಿತ್ಯದಲ್ಲಿದೆ. ಇವೆಲ್ಲವುಗಳ ಬಗ್ಗೆ ಒಂದೇ ಪುಸ್ತಕದಲ್ಲಿ ಮಾಹಿತಿ ದೊರೆಯುವಂತೆ ಸತತ 8 ವರ್ಷಗಳ ಅಧ್ಯಯನದಿಂದ ಕ್ಯಾತನಹಳ್ಳಿ ರಾಮಣ್ಣ ಅವರು ಜನಪದ ಚರಿತ್ರೆ ಸಂಪಾದಿಸಿದ್ದಾರೆ ಎಂದರು.

ಜನಪದ ತಜ್ಞ ಕ್ಯಾತನಹಳ್ಳಿ ರಾಮಣ್ಣ ಮಾತನಾಡಿ, ಸುಮಾರು 2300 ಪುಸ್ತಕಗಳ ಅಧ್ಯಯನ ಮಾಡಿ, ಈ ಜನಪದ ಚರಿತ್ರೆಯನ್ನು ಸಂಪಾದಿಸಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಇಂತಹ ಸಮಗ್ರ ಜನಪದ ವಿಷಯಗಳನ್ನೊಳಗೊಂಡ ಕೃತಿ ರಚನೆಯಾಗಿಲ್ಲ ಎಂಬ ಕೊರಕಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ ಎಂದರು.

ಅಂದಿನ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಮಧು ಜಿ ಮಾದೇಗೌಡ ಅಧ್ಯಕ್ಷತೆ ವಹಿಸುವರು.  ಶಾಸಕದರ್ಶನ್ ಪುಟ್ಟಣ್ಣಯ್ಯ ಸಮಾರಂಭ ಉದ್ಘಾಟಿಸುವರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ ಎಂ ಭಾಸ್ಕರ್ ಪುಸ್ತಕ ಬಿಡುಗಡೆ ಮಾಡುವರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಪ್ರಥಮ ಪ್ರತಿ ಸ್ವೀಕರಿಸಲಿದ್ದು ,ಕೃತಿ ಕುರಿತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ ಪ್ರೇಮ ಕುಮಾರ ಮಾತನಾಡುವರು ಎಂದರು.

ಇದೇ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯ ಜೊತೆಗೆ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು  ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಲಿದೆ.ತಾಯಿ ಮಕ್ಕಳು ಒಟ್ಟಿಗೆ ಸೇರಿ ಭರತನಾಟ್ಯ ಆಡಿರುವುದು ಇಡೀ ರಾಜ್ಯದಲ್ಲಿ ನಡೆದಿಲ್ಲ. ಈ ಕಾರ್ಯಕ್ರಮ ಪ್ರಪ್ರಥಮ ಬಾರಿಗೆ ಮಂಡ್ಯದಲ್ಲಿ ನಡೆಯುತ್ತಿದೆ ಎಂದರು.

ಗೋಷ್ಠಿಯಲ್ಲಿ ಕೃಷ್ಣೆಗೌಡ ಕೀಲಾರ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!