Thursday, September 19, 2024

ಪ್ರಾಯೋಗಿಕ ಆವೃತ್ತಿ

ಹನಿಟ್ಯ್ರಾಪ್ `ಬ್ಲಾಕ್ ಮೇಲ್’ ಗೆ ಹೆದರಿ ಸ್ವಾಮೀಜಿ ಆತ್ಮಹತ್ಯೆ


  • ಕಂಚುಕಲ್ ಬಂಡೆ ಮಠದ ಬಸವಲಿಂಗಶ್ರೀ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

  • ಅಶ್ಲೀಲ ವಿಡಿಯೋವನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ ನಾಲ್ವರು ಆರೋಪಿಗಳು

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಂಚುಕಲ್ ಬಂಡೆ ಮಠದ ಬಸವಲಿಂಗಶ್ರೀ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.  45 ವರ್ಷ ವಯಸ್ಸಿನ ಲಿಂಗಾಯಿತ ಸ್ವಾಮೀಜಿ ಅವರನ್ನು ಹನಿಟ್ರ್ಯಾಪ್ ಮಾಡಲಾಗಿದ್ದು, ಅದರ ಅಶ್ಲೀಲ ವಿಡಿಯೋವನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಆತ್ಮಹತ್ಯೆ ಪತ್ರದಲ್ಲಿರುವ ಎರಡು ಹೆಸರುಗಳು ಮಠದೊಂದಿಗೆ ಸಂಪರ್ಕ ಹೊಂದಿವೆ” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸ್ವಾಮೀಜಿಯೊಂದಿಗೆ ಸಂಪರ್ಕದಲ್ಲಿದ್ದ ಮಹಿಳೆ ಯಾರು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಖಾಸಗಿ ಕ್ಷಣಗಳನ್ನು ಮಹಿಳೆ ತನ್ನ ಫೋನ್‌ನ ಚಿತ್ರಿಸಿಕೊಂಡಿದ್ದರು, ಈ ವಿಡಿಯೋವನ್ನು ಬಳಸಿ ಅವರನ್ನು ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

“ಅಪರಿಚಿತ ಮಹಿಳೆಯೊಬ್ಬರು ನನಗೆ ತೊಂದರೆ ನೀಡುತ್ತಿದ್ಧಾರೆ” ಎಂದು ಆತ್ಮಹತ್ಯೆ ಮಾಡಿಕೊಳ್ಳವ ಮುನ್ನ ಬರೆದ ಪತ್ರದಲ್ಲಿನ ಒಂದು ಸಾಲು ತಿಳಿಸುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಕರ್ನಾಟಕದ ರಾಮನಗರ ಜಿಲ್ಲೆಯ ಕಂಚುಗಲ್ ಬಂಡೆ ಮಠದಲ್ಲಿ ಬಸವಲಿಂಗ ಸ್ವಾಮಿ ತಮ್ಮ ಪ್ರಾರ್ಥನಾ ಕೊಠಡಿಯ ಕಿಟಕಿ ಗ್ರಿಲ್‌ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಆತ್ಮಹತ್ಯಾ ಪತ್ರದಲ್ಲಿ ” ತಮ್ಮನ್ನು ಸ್ವಾಮೀಜಿ ಸ್ಥಾನದಿಂದ ತೆಗೆದುಹಾಕಲು ಬಯಸಿದ ಕೆಲವರು” ಬ್ಲ್ಯಾಕ್‌ಮೇಲ್ ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.

“ಮಹಿಳೆ ಮತ್ತು ಇತರರು ನಾಲ್ಕು ಅಶ್ಲೀಲ ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಸ್ವಾಮೀಜಿಗೆ ಬೆದರಿಕೆ ಹಾಕಿದ್ದರು ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದು, ಅವರು ಯಾರೆಂಬುದನ್ನು ಪತ್ತೆ ಹಚ್ಚಲು ನಮಗೆ ಸಾಕಷ್ಟು ಸುಳಿವುಗಳು ಲಭ್ಯ ಇವೆ ಅವರು ಹೇಳಿದ್ದಾರೆ.

“ಮಠದ ಒಳಗೆ ಮತ್ತು ಹೊರಗೆ ರಾಜಕೀಯ ಇರಬಹುದು. ಕೆಲವು ವ್ಯಕ್ತಿಗಳು ರಾಜಕಾರಣಿಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ. ಆದರೆ ಆತ್ಮಹತ್ಯೆ ಪತ್ರದಲ್ಲಿ ಯಾವುದೇ ರಾಜಕಾರಣಿಗಳ ಉಲ್ಲೇಖವಿಲ್ಲ. “ನಾವು ಸಾಧ್ಯವಿರುವ ಪ್ರತಿಯೊಂದು ಕೋನದಲ್ಲಿಯೂ ತನಿಖೆ ಮಾಡುತ್ತಿದ್ದೇವೆ” ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ. “ನಾಲ್ಕು ವೀಡಿಯೊಗಳು ಲಭ್ಯವಿದ್ದು, ಈ ವೀಡಿಯೊಗಳು ಅಶ್ಲೀಲ ಸ್ವರೂಪವನ್ನು ಹೊಂದಿವೆ. ಮಹಿಳೆ ಯಾರೆಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

1997 ರಲ್ಲಿ 20 ನೇ ವಯಸ್ಸಿನಲ್ಲಿ 400 ವರ್ಷಗಳಷ್ಟು ಹಳೆಯದಾದ ಮಠದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಸವಲಿಂಗಶ್ರೀ ಅವರು, ಇತ್ತೀಚೆಗೆ ರಜತ ಮಹೋತ್ಸವವನ್ನು ಆಚರಿಸಿದ್ದರು.

ಇತ್ತಿಚೇಗೆ ಚಿಲುಮೆ ಮಠದ ಮುಖ್ಯಸ್ಥ ಬಸವಲಿಂಗ ಸ್ವಾಮಿ ಕೂಡ ಇದೇ ಮಾದರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಆರೋಗ್ಯ ಹದಗೆಟ್ಟಿದ್ದರಿಂದ ಮನನೊಂದು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿದ್ದವು.

ಅತ್ಯಾಚಾರ ಆರೋಪದಲ್ಲಿ ಪ್ರಸ್ತುತ ಜೈಲಿನಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ನಾಲ್ವರು ಅಪ್ರಾಪ್ತ ಬಾಲಕಿಯರನ್ನು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಬಳಸಿಕೊಂಡಿದ್ದಾರೆ ಎಂಬ ಆರೋಪವಿದ್ದು, ಸದ್ಯ ಪೋಕ್ಸೊ ಕಾಯ್ದೆಯಡಿ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕರ್ನಾಟಕ ಮತ್ತು ಕೆಲವು ನೆರೆಯ ರಾಜ್ಯಗಳಲ್ಲಿ ಹಲವಾರು ಮಠಗಳನ್ನು ಹೊಂದಿರುವ ಲಿಂಗಾಯತ ಸಮುದಾಯವು ಕರ್ನಾಟಕದಲ್ಲಿ ಶೇ.17 ರಷ್ಟು ಜನಸಂಖ್ಯೆಯನ್ನು ಹೊಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!