Friday, September 20, 2024

ಪ್ರಾಯೋಗಿಕ ಆವೃತ್ತಿ

ಇಡೀ ಜಗತ್ತಿಗೆ ಮಾನವೀಯತೆ ಸಾರಿದ ಬುದ್ದ: ಸತ್ಯಾನಂದ ಮೂರ್ತಿ

ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬ ಭಗವಾನ್ ಬುದ್ಧರವರು ಜ್ಞಾನದ ಅರಿವನ್ನು ಬೋಧಿವೃಕ್ಷದ ಕೆಳಗೆ ಕುಳಿತು ತಪಸ್ಸು ಮಾಡುವ ಸಂದರ್ಭದಲ್ಲಿ ತಮ್ಮ ಜ್ಞಾನದ ಅರಿವನ್ನು ಅರಿತುಕೊಂಡು ತತ್ವ, ಅಹಿಂಸ, ಮಾನವೀಯತೆಯ ಸಂಕೇತಗಳನ್ನು ಇಡೀ ಜಗತ್ತಿಗೆ ಸಾರಿ ಹೋಗಿದ್ದಾರೆಂದು ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಸತ್ಯಾನಂದ ಮೂರ್ತಿ ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಗಾಂಧಿನಗರ ಅಭಿವೃದ್ಧಿ ಸಂಘದ ವತಿಯಿಂದ ಭಗವಾನ್ ಬುದ್ಧ ರವರ 2568 ನೇ ಜಯಂತಿ ಕಾರ್ಯಕ್ರಮದಲ್ಲಿ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಭಗವಾನ್ ಬುದ್ಧರ ಆದರ್ಶಗಳು ಇವತ್ತಿನ ಯುವ ಪೀಳಿಗೆ ಜೀವನಕ್ಕೆ ಅಳವಡಿಸಿಕೊಳ್ಳಬೇಕು, ಬುದ್ಧರ ಆಶಯದಂತೆ ಎಲ್ಲರೂ ಸಮಾನತೆ, ದಯೆ, ಪ್ರೀತಿ ವಿಶ್ವಾಸದಿಂದ ಒಬ್ಬರನ್ನೊಬ್ಬರು ಅರಿತು ಸಹಬಾಳ್ವೆಯಿಂದ ಬದುಕಬೇಕು, ಯಾವುದೇ ಮೌಢ್ಯ ನಂಬಿಕೆಗಳಿಗೆ ನಂಬಿ ಯಾವುದೇ ಪ್ರಾಣಿ ಹಿಂಸೆಯನ್ನು ಮಾಡಬಾರದೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಕೆ ಟಿ ರಘುನಾಥ್, ಸಂಘದ ಅಧ್ಯಕ್ಷ ಎಚ್ ಲೋಕೇಶ್ವರ್, ಪ್ರಧಾನ ಕಾರ್ಯದರ್ಶಿ ಎಂ.ಎಲ್.ತುಳಸಿಧರ್, ಖಜಾಂಚಿ ಎಮ್. ಎಚ್. ತಮ್ಮಣ್ಣರಾಜು, ನಿರ್ದೇಶಕರಾದ ಸಿ.ಗೋಪಾಲ್, ಜಗದೀಶ್, ರಾಚಯ್ಯ ಹಾಗೂ ನಿಂಗನ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!