Saturday, July 13, 2024

ಪ್ರಾಯೋಗಿಕ ಆವೃತ್ತಿ

ಚಂಡಮಾರುತ

✍🏿 ಮಂಜುಳಾ ಭದ್ರಸ್ವಾಮಿ

ಸೈಕ್ಲೋನ್ ವಾರ್ಧಾ ಕರಾವಳಿ ತೀರವ ಅಪ್ಪಳಿಸುವುದಂತೆ
ಯಾರೂ ಕಡಲಿಗಿಳಿಯಬಾರದಂತೆ!
ಹವಾಮಾನ ವರದಿ ಪ್ರಕಟಣೆ
ಮೀನುಗಾರರಿಗೆ ವಿಶೇಷ ಸೂಚನೆ

ಎಂದಿನಂತೆ ಬಲೆ ಬೀಸಿ ಮೀನು ಹಿಡಿಯ ಹೊರಟ ಬೀರ ಸುದ್ದಿ ಕೇಳಿ ಹೌಹಾರಿದ್ದ
ಆ ಮಳೆ ಗಾಳಿಯಲ್ಲೂ ಸಣ್ಣಗೆ ಬೆವತ್ತಿದ್ದ!
ಮೀನು ಮಾರಿ ತಂದ ಹಣ ಮಗನ ಶಾಲೆಗೆಂದು ಬಗೆದಿದ್ದ
ಸೈಕ್ಲೋನ್ ಹಾವಳಿಯಿಂದ ತತ್ತರಿಸಿದ

ಕಡಲಿನ ಮಕ್ಕಳು ಅಲೆಗೆ ಅಂಜುವುದುಂಟೆ
ಸಾವಿಗೆ ಹೆದರಲುಂಟೆ!
ಬಿರಬಿರನೆ ನಡೆದು ಹಾಯಿ ದೋಣಿಗೆ ಪಟವ ಕಟ್ಟಿದ್ದ
ಪುಟ್ಟ ದೋಣಿಯ ಕಡಲಿಗಿಳಿಸಿಬಿಟ್ಟಿದ್ದ

ಬಡವನಾದರೇನಂತೆ ಛಲಕ್ಕಿಲ್ಲ ಕೊರತೆ
ಅವನಲಿತ್ತು ಶ್ರಮದ ಒರತೆ!
ಜೀವನವನೆದುರಿಸುವ ಸಿದ್ಧತೆ
‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಕ್ಷಮತೆ

Related Articles

1 COMMENT

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!