ಮಂಡ್ಯದ ಸಾತನೂರಿನಲ್ಲಿ ಶ್ರೀ ಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಅದ್ದೂರಿಯಾಗಿ ಇಂದು ನೆರವೇರಿತು.
ಬೆಳಿಗ್ಗೆ ದೇವರಿಗೆ ಪಂಚಾಮೃತಾಭಿಷೇಕ, ನಿತ್ಯಹೋಮ ನಿತ್ಯಬಲಿಹರಣ ರಥಪ್ರತಿಷ್ಠೆ, ರಥಾಂಗಾ ಹೋಮ, ರಥಬಲಿ ಯಾತ್ರಾದಾನ ಪೂರ್ವಕ ಮುಂತಾದ ಪೂಜಾ ವಿಧಾನದ ಮೂಲಕ, ರಾಜಮಾರ್ಯಾದೆಯಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವವು ಶ್ರೀ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿ, ಸಾತನೂರು ಮತ್ತು ಮುಜರಾಯಿ ಶಾಖೆ ಮಂಡ್ಯ ಮತ್ತು ಸಾತನೂರಿನ ಗ್ರಾಮಸ್ಥರು, ಅಕ್ಕ ಪಕ್ಕದ ಗ್ರಾಮಸ್ಥರ ನೆರವಿನೊಂದಿಗೆ ಇಂದು ಯಶಸ್ವಿಯಾಗಿ ಜರುಗಿತು.
ಇದೇ ಮೊದಲನೇ ವರ್ಷದ ರಥೋತ್ಸವವು ಇದಾಗಿದ್ದು, ಮುಂದೆ ಪ್ರತಿವರ್ಷವು ಬ್ರಹ್ಮರಥೋತ್ಸವು ನಡೆಯುತ್ತದೆ. ಸಾತನೂರಿನ ಶ್ರೀ ಕಂಬದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಜೊತೆಗೆ ಬ್ರಹ್ಮರಥೋತ್ಸವವನ್ನು ಪ್ರತಿಷ್ಠಾಪಿಸಿದ್ದು ವಿಶೇಷವಾಗಿತ್ತು. ಇದೇ ತಿಂಗಳ 11ರಿಂದ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ 18ನೇ ತಾರೀಖಿನವರೆಗೆ ನಡೆಯುತ್ತಿದೆ.
ಈ ಜಾತ್ರೆಯಲ್ಲಿ ಬಾರಿ ದನಗಳ ಜಾತ್ರೆಯನ್ನು ಏರ್ಪಡಿಸಿದ್ದರು. ಜಾತ್ರೆಯಲ್ಲಿ ಭಕ್ತಾಧಿಗಳಿಗೆ ಬೇಕಾಗುವ ಪೂಜಾ ಸಾಮಾಗ್ರಿಗಳ, ತಿಂಡಿ ತಿನಿಸುಗಳ ಮತ್ತಿತ್ತರ ಅಂಗಡಿ ಮುಗ್ಗಟುಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ರಥೋತ್ಸವ ಇರುವುದರಿಂದ ಇದೇ ಮೇ 19ರವರೆಗೆ ದೇವಸ್ಥಾನದ ಆವರಣದಲ್ಲಿ ಮದುವೆ, ಯಾವುದೇ ರೀತಿಯ ಕಾರ್ಯಕ್ರಮಗಳು ಮತ್ತು ಮಾಂಸದ ಊಟವನ್ನು ನಿಷೇದಿಸಲಾಗಿದೆ.
ಇದೇ ತಿಂಗಳ 18ರಂದು ದೇವರಿಗೆ ಮಹಾ ಕುಂಭಾಭಿಷೇಕಾ, ದ್ವಾದಶಾರಾಧನೆ, ಮೂಕ ಬಲಿ, ಶಯನೋತ್ಸವ, ಮಹಾ ಮಂಗಳರಾತಿಯೊಂದಿಗೆ ಉತ್ಸವವು ಅಂತಿಮಗೊಳ್ಳುತ್ತದೆ.
ಈ ಬ್ರಹ್ಮರಥೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು.