Wednesday, July 24, 2024

ಪ್ರಾಯೋಗಿಕ ಆವೃತ್ತಿ

ನಾನು ಮಂಡ್ಯ ಬಿಟ್ಟು ಹೋಗಲ್ಲ…ನನ್ನ ಮಂಡ್ಯ ಬಿಡಲ್ಲ

ನಾನು ಮಂಡ್ಯ ಬಿಡುವ ಹಗಲುಗನಸನ್ನು ಕೆಲವರು ಕಾಣುತ್ತಿದ್ದಾರೆ.ನಾನು ಯಾವ ಕಾರಣಕ್ಕೂ ಮಂಡ್ಯ ಬಿಟ್ಟು ಹೋಗುವುದಿಲ್ಲ.

ನನಗೆ ರಾಜಕೀಯ ಅನಿವಾರ್ಯವೂ ಅಲ್ಲ ಎಂದು ಲೋಕಸಭಾ ಸದಸ್ಯೆ ಸುಮಲತಾ ವಿರೋಧಿಗಳಿಗೆ ತಿರುಗೇಟು ನೀಡಿದರು.
ದಿಶಾ ಸಭೆಯ ಹಿನ್ನಲೆಯಲ್ಲಿ ಮಂಡ್ಯ ನಗರಕ್ಕೆ ರೈಲಿನಲ್ಲಿ ಆಗಮಿಸಿದ ಸಂಸದೆ ಸುಮಲತಾ ನಿಲ್ದಾಣದಲ್ಲಿ ಮಾಧ್ಯಮಗಳೊಙದುಗೆ ಮಾತನಾಡಿದರು.

ನನ್ನ ರಾಜಕೀಯ ವಿರೋಧಿಗಳು ಮಂಡ್ಯ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಮಂಡ್ಯ ಹಾಗೂ ಮಂಡ್ಯದ ಜನತೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ.ಮಂಡ್ಯ ಜನರ ಋಣವನ್ನು ತೀರಿಸಲು ನಾನು ರಾಜಕೀಯದಲ್ಲಿ ಇದ್ದೀನಿ.ನಾನು ಮಂಡ್ಯ ಬಿಟ್ಟು ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ ಎಂದು ಟಾಂಗ್ ನೀಡಿದರು.

ನಾನು ಮಂಡ್ಯ ಬಿಡುವ ಕನಸು ಯಾವತ್ತೂ ನನಸು ಆಗಲ್ಲ.
ನಾನು ಎಂದಿಗೂ‌ ಮಂಡ್ಯದಲ್ಲೇ ಇರುತ್ತೇನೆ. ವಿಧಾನಸಭಾ ಚುನಾವಣೆ ಹತ್ತಿರ ಬರ್ತಾ ಇದ್ಯಲ್ಲ ಅದಕ್ಕೆ ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ.ಈ ರೀತಿಯ ಚೀಪ್ ಗಿಮಿಕ್‌ಗಳನ್ನು ಹೀಗಲಾದರೂ ಬಿಡಬೇಕು ಎಂದರು. ಮಂಡ್ಯ ಅಭಿವೃದ್ಧಿ ಕಡೆಗೆ ಗಮನವರಿಸೋಣ,
ನಂಗೆ ಅಧಿಕಾರದ ಆಸೆ ಇಲ್ಲ, ಹೀಗಾಗಿ ಯಾವುದೇ ಭಯ ನಂಗೆ ಇಲ್ಲ.

ಜನರ ಆಶೀರ್ವಾದ ಇದ್ರೆ ನಾವು, ಆಶೀರ್ವಾದ ಇಲ್ಲ ಅಂದ್ರೆ ಇಲ್ಲ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದು ಉತ್ತರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!