Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಅಕ್ರಮ ಭೂ ಕಬಳಿಕೆ ತಪ್ಪಿಸ್ಥರಿಗೆ ಶಿಕ್ಷೆ ಗ್ಯಾರಂಟಿ: ನರೇಂದ್ರಸ್ವಾಮಿ

ಅಕ್ರಮ ಭೂ ಕಬಳಿಕೆ ಸಂಬಂಧ ಸಮಗ್ರ ತನಿಖೆ ನಡೆಯುತ್ತಿದ್ದು, ಯಾವ ಪಕ್ಷದವರೇ ಆಗಲಿ, ನನ್ನ ಸ್ವಂತ ಕುಟುಂಬದ ಸದಸ್ಯರಾದರೂ ಕೂಡ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ, ಕೊನೆಯದಾಗಿ ಜಮೀನು ಖರೀದಿ ಮಾಡಿದ್ದವರಿಗೆ ತಕ್ಕ ಶಿಕ್ಷೆಯಾಗುವುದು ಗ್ಯಾರಂಟಿ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಹೇಳಿದರು.

ಮಳವಳ್ಳಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈಗಾಗಲೇ 206 ಎಕರೆಯನ್ನು ಸರ್ಕಾರ ವಾಪಸ್ ಪಡೆಯುವುದರ ಜೊತೆಗೆ ಸದ್ಯದಲ್ಲಿಯೇ ಭೂ ಅಕ್ರಮ ಬಗ್ಗೆ ಸತ್ಯ ಹೊರ ಬರಲಿದೆ ಎಂದರು.

ಮಳವಳ್ಳಿ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಭೂ ಅಕ್ರಮ ಪರಭಾರೆಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಅದರಂತೆ ತನಿಖೆ ಮುಂದುವರಿಯುತ್ತಿದೆ, ಯಾವ ಪಕ್ಷದವರೇ ಆಗಲಿ, ನನ್ನ ಸ್ವಂತ ಕುಟುಂಬದ ಸದಸ್ಯರಾದರೂ ಕೂಡ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ, ಕೊನೆಯದಾಗಿ ಜಮೀನು ಖರೀದಿ ಮಾಡಿದ್ದವರ ಮನೆ ಆಳಾಗುವುದು ಗ್ಯಾರಂಟಿ ಎಂದರು.

ಭೂ ಅಕ್ರಮ ಬಗ್ಗೆ ತನಿಖೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೆಲ ಮಾಧ್ಯಮ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿವೆ, ಪತ್ರಿಕೆಗಳಲ್ಲಿ ಬರೆದ ಬರವಣಿಗೆ ದಾಖಲೆಯಾಗುವುದರಿಂದ ಮುಂದಿನ ದಿನಗಳಲ್ಲಿ ತನಿಖೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗಬಹುದು, ಸಾಮಾಜಿಕ ಜಾಲತಾಣದಲ್ಲಿ ಸಲ್ಲದ ಪದಬಳಕೆ ಮಾಡಲಾಗಿದೆ,ಸೂಕ್ತ ಸಮಯದಲ್ಲಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಸ್ವಷ್ಟಪಡಿಸಿದರು.

ಯಾರು ಭೂ ಅಕ್ರಮದಲ್ಲಿ ಭಾಗಿಯಾಗಿದ್ದರೋ ಅವರೇ ಅಕ್ರಮದಂದೆ ನಡೆಯುತ್ತಿದೆ ಎಂದು  ಮಾತನಾಡು ತ್ತಿರುವುದರ ಮೂಲಕ ಗೂಬೆ ಕೂರಿಸುವ ತಂತ್ರ ಕ್ಷೇತ್ರದಲ್ಲಿ ನಡೆಯುತ್ತಿದೆ, ಕಾನೂನು ಸುವ್ಯವಸ್ಥೆ ಹಾಳು ಮಾಡಲು ಒಂದು ತಂಡ ಸಕ್ರೀಯವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಈಗಗಲೇ ತಪ್ಪು ಮಾಡಿರುವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ, ಜೊತೆಗೆ ಮತ್ತೊಬ್ಬ ಅಧಿಕಾರಿಯ ತಲೆದಂಡವೂ ಆಗಲಿದೆ, ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಿ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಜೂಜು, ಅಕ್ರಮ ಮದ್ಯಮಾರಾಟ, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈಗಗಲೇ ತನ್ನ ವಿವೇಚನೆಗೆ ತಕ್ಕಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಅಕ್ರಮಗಳಿಗೆ ಇತಿಶ್ರೀ ಹೇಳಲಾಗುವುದು,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!