Sunday, May 19, 2024

ಪ್ರಾಯೋಗಿಕ ಆವೃತ್ತಿ

ಪುಲ್ವಾಮಾ ದಾಳಿ | 2019ರ ಚುನಾವಣೆಯನ್ನು ನಮ್ಮ ಸೈನಿಕರ ಮೃತದೇಹಗಳ ಮೇಲೆ ನಡೆಸಲಾಯಿತು ; ಸತ್ಯಪಾಲ್ ಮಲಿಕ್

ನಮ್ಮ ಸೈನಿಕರ ಶವಗಳ ಮೇಲೆ 2019ರ ಲೋಕಸಭೆ ಚುನಾವಣೆ ನಡೆಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಪುನರುಚ್ಚರಿಸುವ ಮೂಲಕ ಸರ್ಕಾರದ ಮೇಲೆ ಮತ್ತೊಮ್ಮೆ ವಾಗ್ಧಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಸೋಮವಾರ ಪುಲ್ವಾಮಾ ದಾಳಿಯ ವಿಷಯದ ಬಗ್ಗೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು 2019 ರ ಲೋಕಸಭೆಯ ಚುನಾವಣೆಯನ್ನು ”ನಮ್ಮ ಸೈನಿಕರ ಮೃತದೇಹಗಳ ಮೇಲೆ ನಡೆಸಲಾಯಿತು” ಎಂದು ಹೇಳಿದ್ದಾರೆ.

”ಆ ಘಟನೆ ನಡೆದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ಅವರು ನನಗೆ ಮೌನವಾಗಿರಲು ಹೇಳಿದರು. ಆಗಲೇ ತನಿಖೆ ನಡೆಸಿದ್ದರೆ ಅಂದಿನ ಗೃಹ ಸಚಿವರು ರಾಜೀನಾಮೆ ನೀಡಬೇಕೇತ್ತು” ಎಂದರು.

”2019ರ ಲೋಕಸಭೆ ಚುನಾವಣೆಯನ್ನು ನಮ್ಮ ಸೈನಿಕರ ಶವಗಳ ಮೇಲೆ ನಡೆಸಿದರು. ಆ ಬಗ್ಗೆ ಯಾವುದೇ ತನಿಖೆಯನ್ನು ಮಾಡಲಿಲ್ಲ. ಒಂದು ವೇಳೆ ತನಿಖೆ ನಡೆಸಿದ್ದರೆ, ಆಗಿನ ಗೃಹ ಸಚಿವ (ರಾಜನಾಥ್ ಸಿಂಗ್) ರಾಜೀನಾಮೆ ನೀಡಬೇಕಾಗಿತ್ತು, ಅನೇಕ ಅಧಿಕಾರಿಗಳು ಜೈಲು ಪಾಲಾಗುತ್ತಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು” ಎಂದು ಅಲ್ವಾರ್ ಜಿಲ್ಲೆಯ ಬನ್ಸೂರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಲಿಕ್ ಹೇಳಿದ್ದಾರೆ.

ಲಡಾಖ್ ಮತ್ತು ಜಮ್ಮು-ಕಾಶ್ಮೀರದ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಾಜ್ಯವನ್ನು ವಿಭಜಿಸುವ ಮೊದಲು, ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿದ್ದರು, ಅಲ್ಲಿ ಅವರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದರು.

12019ರ ಫೆಬ್ರವರಿ 14, ಭಾನುವಾರ ಪುಲ್ವಾಮಾ ದಾಳಿ ನಡೆಯಿತು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರೀಕರಣಕ್ಕಾಗಿ ಚಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿದ್ದರು. ಅಲ್ಲಿಂದ ಅವರು ಬಂದ ಮೇಲೆ ನನಗೆ ಕರೆ ಮಾಡಿದರು. ನಮ್ಮ ಸೈನಿಕರು ಬಲಿಯಾಗಿದ್ದಾರೆ. ನಮ್ಮ ತಪ್ಪಿನಿಂದಾಗಿ ಅವರು ಬಲಿಯಾಗುವಂತಾಯಿತು ಎಂದು ಹೇಳಿದೆ. ಆದರೆ, ಅವರು ಈ ಬಗ್ಗೆ ಮಾತನಾಡಬೇಡಿ, ಸುಮ್ಮನಿರುವಂತೆ ಸೂಚಿಸಿದರು ಎಂದು ಸತ್ಯಪಾಲ್ ಮಲಿಕ್ ಅವರು ಹೇಳಿದರು.

ಆಗಸ್ಟ್ 23, 2018 ರಿಂದ ಅಕ್ಟೋಬರ್ 30, 2019 ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ವಿಮಾ ಯೋಜನೆಯ ಫೈಲ್‌ಗಳನ್ನು ತೆರವುಗೊಳಿಸಲು 300 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಲಾಯಿತು ಎಂಬ ಅವರ ಹೇಳಿಕೆಯ ಬಗ್ಗೆ ಸಿಬಿಐ ಇತ್ತೀಚೆಗೆ ಮಲಿಕ್ ಅವರನ್ನು ಪ್ರಶ್ನಿಸಿದೆ.

ಇದೇ ವೇಳೆ ಮೋದಿ ಮತ್ತು ಅದಾನಿ ವಿಚಾರವನ್ನು ಪ್ರಸ್ತಾಪಿಸಿದ ಮಲಿಕ್, ”ಅದಾನಿ ಕೇವಲ ಮೂರು ವರ್ಷಗಳಲ್ಲಿ ಸಾಕಷ್ಟು ಹಣವನ್ನು ಗಳಿಸಿದ್ದಾರೆ. ಅವರು ಅಷ್ಟು ಕಡಿಮೆ ಅವಧಿಯಲ್ಲಿ ಅಷ್ಟು ಶ್ರೀಮಂತರಾಗಲು ಸಾಧ್ಯವೇ?” ಎಂದು ಅಲ್ಲಿದ್ದ ಜನರನ್ನು ಕೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!