Thursday, September 19, 2024

ಪ್ರಾಯೋಗಿಕ ಆವೃತ್ತಿ

ಚನ್ನಪಟ್ಟಣದಲ್ಲಿ ಸಂಭ್ರಮದಿಂದ ನಡೆಯಿತು ಅಂಬೇಡ್ಕರ್ ಹಬ್ಬ

ನಿನ್ನೆ ಶನಿವಾರ ಚನ್ನಪಟ್ಟಣ ಅಕ್ಷರಶಃ ನೀಲಿಯಾಗಿತ್ತು. ಎಲ್ಲಿ ನೋಡಿದರೂ ನೀಲಿ‌ ಬಣ್ಣವೇ ತುಂಬಿ ಹೋಗಿತ್ತು. ಯಾಕಂತೀರಾ…

ಹೌದು,ಏಪ್ರಿಲ್ 23 ರಂದು ಶನಿವಾರ ಚನ್ನಪಟ್ಟಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹಬ್ಬ ಅಚರಣಾ ಸಮಿತಿ ಆಯೋಜಿಸಿದ್ದ ಭಾರತ ರತ್ನ,ಸಂವಿಧಾನ‌ ಶಿಲ್ಪಿ ಬಾಬಾ ಸಾಹೇಬ್ ಡಾ.ಭೀಮ್ ರಾವ್ ಅಂಬೇಡ್ಕರ್ ರವರ 131ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ

“ಸ್ವಾಭಿಮಾನದ ಅಂಬೇಡ್ಕರ್ ಹಬ್ಬ -2022” ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಸಹಸ್ರಾರು ಅಂಬೇಡ್ಕರ್ ಅಭಿಮಾನಿಗಳೊಂದಿಗೆ ಸಡಗರ, ಸಂಭ್ರಮದಿಂದ ನಡೆಯಿತು. ಪೂಜಾ ಕುಣಿತ,ಡೊಳ್ಳು ಕುಣಿತ ಮೊದಲಾದ ಕಲಾ ತಂಡಗಳು ಮೆರವಣಿಗೆಯೊಂದಿಗೆ ಸಾಗಿದವು. ಡೊಳ್ಳು ಕುಣಿತದ ಸದ್ದಿಗೆ ಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬೃಹತ್ ವೇದಿಕೆಯಲ್ಲಿ ಬಾಬಾ ಸಾಹೇಬರ ಮೊಮ್ಮಗ ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಪೂಜ್ಯ ಅಯುಷ್ಮಾನ್ “ಭೀಮ್ ರಾವ್ ಯಶವಂತ ಅಂಬೇಡ್ಕರ್ ಸಾಹೇಬರ” ಘನ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮ ಅದ್ಭುತವಾಗಿ ಯಶಸ್ವಿಯಾಯಿತು.

ಈ ಅದ್ಬುತ ಯಶಸ್ವಿ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಭೀಮನ ಮಕ್ಕಳ ಹೋರಾಟದ ಸಂದೇಶ ಸ್ಪಷ್ಟವಾಗಿ ರವಾನೆಯಾಯಿತು.

ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಆಯೋಜಕರಿಗೆ ಭೀಮನ ಮಕ್ಕಳು ಅಭಿನಂದನೆ ಸಲ್ಲಿಸಿದರೆ, ಕಾರ್ಯಕ್ರಮದ ಯಶಸ್ವಿಯಾಗಲು ಕಾರಣರಾದ ಚನ್ನಪಟ್ಟಣದ ಜನತೆಗೆ, ಹಲವಾರು ಗ್ರಾಮಗಳಿಂದ ಬಂದಿದ್ದ ಅಂಬೇಡ್ಕರ್ ಅನುಯಾಯಿಗಳಿಗೆ ಮತ್ತು ಸಮಸ್ತ ಜನತೆಗೆ ಭೀಮ ವಂದನೆಗಳನ್ನು ಅಂಬೇಡ್ಕರ್ ಸಮಿತಿ ಸದಸ್ಯರು ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!