Friday, September 20, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯಲ್ಲಿ ಹಲವೆಡೆ ಮಳೆ ಆರ್ಭಟ: ಜನತೆ ಕಂಗಾಲು

ಜಿಲ್ಲೆಯ ಹಲವು ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಂಡಿದೆ. ಮಳೆಯಿಂದ ಹಲವೆಡೆ ಮನೆಗಳು ಕುಸಿದು ಬಿದ್ದಿವೆ.ಹಲವೆಡೆ ಬೆಳೆಗಳು ಕೊಚ್ಚಿ ಹೋಗಿದ್ದರೆ,ಮತ್ತೆ ಕೆಲವೆಡೆ ಮಳೆಯ ನೀರು ಜಮೀನಿಗೆ ನುಗ್ಗಿ ಬೆಳೆ ಕೊಳೆಯಲಾರಂಭಿಸಿ ರೈತರು ಕಂಗಾಲಾಗುವಂತೆ ಮಾಡಿದೆ.

ಶ್ರೀರಂಗಪಟ್ಟಣ ವರದಿ

ಧಾರಾಕಾರ ಮಳೆಗೆ ಶ್ರೀರಂಗಪಟ್ಡಣದ ವಿವಿಧ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳು ಕುಸಿದಿವೆ. ತಾಲೂಕಿನಲ್ಲಿ ಹರಿಯುವ ಲೋಕಪಾವನಿ ನದಿ ಮಳೆಯಿಂದ. ಉಕ್ಕಿ ಹರಿದು, ನದಿ ಪ್ರವಾಹಕ್ಕೆ ತಾಲೂಕಿನ ಹಲವೆಡೆ ರೈತರ ಜಮೀನುಗಳಿಗೆ ನೀರು ನುಗ್ಗಿ ತೋಟಗಳು ಜಲಾವೃತವಾಗಿವೆ.

ತಾಲೂಕಿನ ಚಿಂದಗಿರಿಕೊಪ್ಪಲು, ಕೆ.ಶೆಟ್ಟಹಳ್ಳಿ, ಕೂಡಲ ಕುಪ್ಪೆಯಲ್ಲಿ  ರೈತರ ಜಮೀನು ಜಲಾವೃತವಾಗಿ‌ ಬೆಳೆಗಳು ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ.

ಲೋಕಪಾವನಿ ನದಿ ಪಾತ್ರದ ಹಲವು ಮನೆಗಳ ಗೋಡೆ ಬಿರುಕು ಕಾಣಿಸಿಕೊಂಡಿವೆ,  ಜಲಾವೃತಗೊಂಡು ಹಾನಿಗೊಳಗಾದವರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ

ನಾಗಮಂಗಲ ವರದಿ

ನಾಗಮಂಗಲ ಕೆ ಎಸ್‍ ಆರ್‌ ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದೆ. ಸತತ ಮಳೆಗೆ ಬಸ್ ನಿಲ್ದಾಣವೇ ಕೆರೆಯಂತಾಗಿದೆ. ಸುಮಾರು ನಾಲ್ಕು ಅಡಿಗಳಷ್ಟು ನೀರು ತುಂಬಿದ್ದು,20ಕ್ಕೂ ಅಧಿಕ ಬಸ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಡಿಪೋದಲ್ಲಿರೋ ಕೆಎಸ್‍ಆರ್‌ಟಿಸಿ ಕಚೇರಿಯೂ ಮುಳುಗಡೆಯಾಗಿದ್ದು, ಸಿಬ್ಬಂದಿ ತೆಪ್ಪದಲ್ಲಿ ಕಡತಗಳನ್ನು ಹೊತ್ತು ತಂದಿದ್ದಾರೆ.

ಮದ್ದೂರು ವರದಿ

ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಂಷಾ ನದಿ ಭೋರ್ಗರೆದು ಹರಿಯುತ್ತಿದೆ. ನದಿಯ ಭೋರ್ಗರೆತಕ್ಕೆ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನ ಮುಂಭಾಗವಿರುವ ಮಧ್ವ ವನ ಕೊಚ್ಚಿ ಹೋಗಿದೆ.ವನದ ಸುತ್ತ ಹಾಕಲಾಗಿದ್ದ ತಡೆಗೋಡ ಇದೀಗ ಮತ್ತಷ್ಟು ಭಾಗ ಕುಸಿಯುವ ಭೀತಿಯಲ್ಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!