Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತದ ಆಧುನಿಕ ದಂತಚಿಕಿತ್ಸೆಯ ಪಿತಾಮಹ ಯಾರು ಗೊತ್ತೇ ?

ಡಾ.ರಫಿಯುದ್ದೀನ್ ಅಹ್ಮದ್ (24 ಡಿಸೆಂಬರ್ 1890 – 9 ಫೆಬ್ರವರಿ 1965) ಭಾರತದ ದಂತ ಚಿಕಿತ್ಸೆಯ ಪಿತಾಮಹಾ. ಒಬ್ಬ ಭಾರತೀಯ ದಂತವೈದ್ಯರಾಗಿ ಶಿಕ್ಷಣತಜ್ಞರಾಗಿ ಪಶ್ಚಿಮ ಬಂಗಾಳದ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದರು. ಇವರು ಭಾರತದಲ್ಲಿ ಮೊದಲ ದಂತ ಕಾಲೇಜನ್ನು ಸ್ಥಾಪಿಸಿದರು.

ಡಾ.ಆರ್.ಅಹ್ಮದ್ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ‘ ಕಲ್ಕತ್ತಾ ಡೆಂಟಲ್ ಕಾಲೇಜ್’, ಸ್ಥಾಪಿಸಿದ ಅವರು, 1950ರವರೆಗೆ ಅದರ ಪ್ರಾಂಶುಪಾಲರಾಗಿದ್ದರು. ಅವರು 1925 ರಲ್ಲಿ ಇಂಡಿಯನ್ ಡೆಂಟಲ್ ಜರ್ನಲ್ ಅನ್ನು ಸ್ಥಾಪಿಸಿದರು. 1939 ರಲ್ಲಿ ಬೆಂಗಾಲ್ ಡೆಂಟಿಸ್ಟ್ ಆಕ್ಟ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.  1946 ರಲ್ಲಿ ಅವರು ಬೆಂಗಾಲ್ ಡೆಂಟಲ್ ಅಸೋಸಿಯೇಷನ್ ಅನ್ನು ಸ್ಥಾಪಿಸಿದರು.

ಇವರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು 1964 ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತು. ಭಾರತದಲ್ಲಿ ಆಧುನಿಕ ದಂತಚಿಕಿತ್ಸೆಯ ಪಿತಾಮಹ ಈಗಲೂ ಅವರು ಸ್ಮರಿಸಲ್ಪಡುತ್ತಾರೆ, 2016 ರಲ್ಲಿ ಭಾರತೀಯ ದಂತ ಸಂಘವು ಅವರ ಗೌರವಾರ್ಥವಾಗಿ ಡಿಸೆಂಬರ್ 24 ಅನ್ನು ರಾಷ್ಟ್ರೀಯ ದಂತವೈದ್ಯರ ದಿನವೆಂದು ಘೋಷಿಸಿತು.

ಬಂಗಾಳದಲ್ಲಿ ಜನಿಸಿದ ಡಾ.ಅಹ್ಮದ್

ಡಾ.ರಫಿಯುದ್ದೀನ್ ಅಹ್ಮದ್ ಅವರು 24 ಡಿಸೆಂಬರ್ 1890 ರಂದು ಬ್ರಿಟಿಷ್ ಇಂಡಿಯಾದ ಪೂರ್ವ ಬಂಗಾಳದ ಬರ್ಧನಪಾರಾದಲ್ಲಿ ಜನಿಸಿದರು. ಮೌಲ್ವಿ ಸಫಿಯುದ್ದೀನ್ ಅಹಮದ್ ಮತ್ತು ಫೈಝುನ್ನೇಶಾ ದಂಪತಿಯ ಎರಡನೇ ಮಗುವಾಗಿ ಜನಿಸಿದ ಇವರಿಗೆ ನಾಲ್ಕು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದರು.

ಢಾಕಾ ಮದ್ರಸಾದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು, ನಂತರ ಕಾಲೇಜಿಯೇಟ್ ಶಾಲೆ,  1908ರಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.

1909 ರಲ್ಲಿ ಅವರ ತಂದೆಯ ಮರಣದ ನಂತರ, ಅಹ್ಮದ್ ಮೊದಲಿಗೆ ಬಾಂಬೆ (ಈಗ ಮುಂಬೈ), ನಂತರ ಯುನೈಟೆಡ್ ಸ್ಟೇಟ್ಸ್‌ ಗೆ ಪ್ರಯಾಣಿಸಿದರು, ಅಲ್ಲಿ ಅವರು ಅಯೋವಾ ಕಾಲೇಜ್ ಆಫ್ ಡೆಂಟಿಸ್ಟ್ರಿಗೆ ಪ್ರವೇಶ ಪಡೆದರು. 1915 ರಲ್ಲಿ ಅವರು ತಮ್ಮ ದಂತ ವೈದ್ಯಕೀಯ (D.D.S) ಪದವಿಯನ್ನು ಪಡೆದರು. 1918 ರವರೆಗೆ, ಮೊದಲ ವಿಶ್ವಯುದ್ಧದ ಸಮಯದಲ್ಲಿ ಅವರು ಬೋಸ್ಟನ್, ಮ್ಯಾಸಚೂಸೆಟ್ಸ್‌ನಲ್ಲಿರುವ  ಫಾರ್ಸಿತ್ ಡೆಂಟಲ್ ಇನ್‌ಫರ್ಮರಿಯಲ್ಲಿ ಅಭ್ಯಾಸ ಮಾಡಿದರು. 1919ರ ಮೊದಲನೆಯ ಮಹಾಯುದ್ಧದ ಕೊನೆಯಲ್ಲಿ ಅವರು ಭಾರತಕ್ಕೆ ಮರಳಿದರು.

1925 ರಲ್ಲಿ ಅವರು ಇಂಡಿಯನ್ ಡೆಂಟಲ್ ಜರ್ನಲ್ ಅನ್ನು ಸ್ಥಾಪಿಸಿದರು ಮತ್ತು 1946ರವರೆಗೆ ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. 1928 ರ ಹೊತ್ತಿಗೆ ಕಾಲೇಜನ್ನು ದಂತ ಅಧ್ಯಯನದ ಶಿಕ್ಷಣಕ್ಕಾಗಿ ಸಂಘಟಿತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಆ ವರ್ಷದಲ್ಲಿ, ಅವರು ಆಪರೇಟಿವ್ ಡೆಂಟಿಸ್ಟ್ರಿಯಲ್ಲಿ ಮೊದಲ ವಿದ್ಯಾರ್ಥಿ ಕೈಪಿಡಿಯನ್ನು ಪ್ರಕಟಿಸಿದರು.

ಅಂದಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಡಾ.ಬಿ.ಸಿ.ರಾಯ್ ಅವರು ಪಶ್ಚಿಮ ಬಂಗಾಳದ ಸಂಪುಟದಲ್ಲಿ ಸೇವೆ ಸಲ್ಲಿಸಲು ಅಹ್ಮದ್ ಅವರನ್ನು ಆಹ್ವಾನಿಸಿದರು. ಆಗ ಅವರು ಕೃಷಿ, ಸಮುದಾಯ ಅಭಿವೃದ್ಧಿ, ಸಹಕಾರ, ಪರಿಹಾರ ಮತ್ತು ಪುನರ್ವಸತಿ ಸಚಿವರಾಗಿ 1962 ರವರೆಗೆ ಸೇವೆ ಸಲ್ಲಿಸಿದರು.

ಡಾ.ಅಹ್ಮದ್ ಅವರಿಗೆ ಸಂದ ಗೌರವ ಪ್ರಶಸ್ತಿಗಳು 

1977 ರ ವಾರ್ಷಿಕ ಭಾರತೀಯ ದಂತ ಸಮ್ಮೇಳನದಲ್ಲಿ ಡಾ.ಪಿಯರೆ ಫೌಚರ್ಡ್ ಅಕಾಡೆಮಿ (PFA) ತನ್ನ 1987 ರ ತ್ರೈಮಾಸಿಕ PFA ಜರ್ನಲ್ ಅನ್ನು ಅಹ್ಮದ್ ಅವರ ಸ್ಮರಣಾರ್ಥವಾಗಿ ಸಮರ್ಪಿಸಿತು. ಯೂನಿವರ್ಸಿಟಿ ಆಫ್ ಅಯೋವಾ ಕಾಲೇಜ್ ಆಫ್ ಡೆಂಟಿಸ್ಟ್ರಿ ಅಲುಮ್ನಿ ಅಸೋಸಿಯೇಷನ್ 1989 ರಲ್ಲಿ ಅವರಿಗೆ ತಮ್ಮ ಮೊದಲ ವಿಶಿಷ್ಟ ಅಂತರರಾಷ್ಟ್ರೀಯ ಹಳೆಯ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಿತು.

ನಿಧನ 

ಬಂಗಾಳದ ಡಾ.ಆರ್.ಅಹ್ಮದ್ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹಳೆಯ ಕ್ಯಾಂಪಸ್‌ನಲ್ಲಿ ಅಹ್ಮದ್ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ. ಅಹ್ಮದ್ ಅವರು 9 ಫೆಬ್ರವರಿ 1965 ರಂದು ನಿಧನರಾದರು. ಅವರನ್ನು ಕಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿರುವ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!