Thursday, July 25, 2024

ಪ್ರಾಯೋಗಿಕ ಆವೃತ್ತಿ

ಟಿ-20 ವಿಶ್ವಕಪ್| ಭಾರತ – ಪಾಕಿಸ್ತಾನ‌ ಪಂದ್ಯಕ್ಕೆ ಸಿದ್ದವಾದ ನ್ಯೂಯಾರ್ಕ್

T20 ವಿಶ್ವಕಪ್ 2024 ರ ಬಹುನಿರೀಕ್ಷಿತ ಭಾರತ- ಪಾಕಿಸ್ತಾನ ತಂಡಗಳ A ಗುಂಪಿನ ಪಂದ್ಯವು ಅಮೆರಿಕಾ ದೇಶದ ನ್ಯೂಯಾರ್ಕ್ ನಗರದಲ್ಲಿ ಇಂದು (ಜೂ.9) ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.

ರೋಹಿತ್ ಶರ್ಮಾ ನೇತೃತ್ವದ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ತಂಡವನ್ನು ಎದುರಿಸಲಿದೆ.

ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಸೋಲಿಸಿತು, ಪಾಕಿಸ್ತಾನವು ಸಹ-ಆತಿಥೇಯ USA ವಿರುದ್ಧ ಸೋತಿತ್ತು. ಭಾರತ ಮತ್ತು ಪಾಕಿಸ್ತಾನವು ಈ ಬಾರಿ ಪರಿಚಿತವಲ್ಲದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಪಂದ್ಯವಾಡಲಿವೆ.

ಬ್ಯಾಸ್ಕೆಟ್‌ಬಾಲ್ ಮತ್ತು ಬೇಸ್‌ಬಾಲ್‌ಗೆ ಹೋಲಿಸಿದರೆ ಕ್ರಿಕೆಟ್ ಕ್ರೀಡೆಗಾಗಿ ಕೆಲವೇ ಕೆಲವು ಆಟಗಾರರಿರುವ ಈ ನಗರದಲ್ಲಿ ಭಾರತ ಮತ್ತು ಪಾಕಿಸ್ತಾನದ ತಂಡಗಳು ಆಡುವ ಕ್ರಿಕೆಟ್ ಪಂದ್ಯಕ್ಕೆ ಯಾವ ರೀತಿಯ ಸ್ಪಂದನೆ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹೊಸದಾಗಿ ನಿರ್ಮಿಸಲಾದ ಈ ಕ್ರೀಡಾಂಗಣದಲ್ಲಿ 34,000-ಆಸನಗಳಿದ್ದು, ಇಲ್ಲಿಯವರೆಗೆ ನಾಲ್ಕು ಪಂದ್ಯಗಳಷ್ಟೆ ನಡೆದಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!