ಸಂವೇದಿ ಸೂಚ್ಯಂಕವು ದಿನವಿಡೀ ಕರಡಿಯ ಹಿಡಿತದೊಂದಿಗೆ ಇದ್ದ ವಹಿವಾಟು ಅಂತಿಮವಾಗಿ ಕಳೆದ ಸೂಚ್ಯಂಕಕ್ಕಿಂತ 1172 ರಷ್ಟು ಕುಸಿಯಿತು, ಕ್ರಮವಾಗಿ ನಿಫ್ಟಿ ಸೂಚ್ಯಂಕವು 302 ರಷ್ಟು ಕುಸಿಯಿತು.
ಇಂದಿನ ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖವಾಗಿ ಇನ್ಫೋಸಿಸ್ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಎಚ್ ಡಿ ಎಫ್ ಸಿ ಷೇರುಗಳ ಇಳಿಮುಖವು ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖ ಕಾರಣವಾಯಿತು.
ನಿಫ್ಟಿಯ ಕುಸಿತ 300 ಪಾಯಿಂಟ್ ಗಳಾಗಿದ್ದರೂ ಇದರಲ್ಲಿ 200 ರಷ್ಟು ಪಾಯಿಂಟ್ ಬೀಳಲು ಇನ್ಫೋಸಿಸ್ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕಿನ ಷೇರಿನ ಕುಸಿತಗಳು ಮುಖ್ಯ ಪಾತ್ರವಹಿಸಿವೆ.
ಕಳೆದವಾರವಷ್ಟೆ ಎಚ್ ಡಿ ಎಫ್ ಸಿ ಬ್ಯಾಂಕು ಮತ್ತು ಎಚ್ ಡಿ ಎಫ್ ಸಿ ವಿಲೀನದ ಸುದ್ದಿಯ ಕಾರಣಕ್ಕೆ ಎಚ್ ಡಿ ಎಫ್ ಸಿಯ ಷೇರು 2950 ರಷ್ಟು ಮೇಲಕ್ಕೆ ಹೋಗಿದ್ದ ರಿಂದ ಮತ್ತೆ 2263 ಕ್ಕೆ ಅಂತ್ಯವನ್ನು ಕಂಡಿದೆ.
ಎಚ್ ಡಿ ಎಫ್ ಸಿ ಮತ್ತು ಇನ್ಫೋಸಿಸ್, ಹೆಚ್ ಡಿ ಎಫ್ ಸಿ ಬ್ಯಾಂಕಿನ ಷೇರುಗಳು ಮಾರುಕಟ್ಟೆಯ ಸ್ಥಿತಿಯನ್ನು ಅಸ್ಥಿರತೆ ಕಡೆಗೆ ದೂಡಿ ತುಂಬಾ ಏರಿಳಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ತ್ರೈಮಾಸಿಕ ಆರ್ಥಿಕ ವರದಿಯ ನಂತರ ಇನ್ಫೋಸಿಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್, ಟಿಸಿಎಸ್ ಷೇರುಗಳ ಬೆಲೆಯ ಗಣನೀಯವಾಗಿ ಇಳಿಮುಖವಾಗಿದೆ. ಇನ್ಪೋಸಿಸ್ ಷೇರಿನ ಬೆಲೆಯು ಕಳೆದ ಮೂರು ವಹಿವಾಟಿನ ದಿನದಲ್ಲಿ ಶೇ 12 ರಷ್ಟು ಇಳಿಮುಖವಾಗಿದೆ.
ಮಾರುಕಟ್ಟೆಯು ಎಚ್ ಡಿ ಎಫ್ ಸಿ ಯ ತ್ರೈಮಾಸಿಕ ವರದಿಯನ್ನು ಎದುರು ನೋಡುತ್ತಿದೆ. ತ್ರೈಮಾಸಿಕ ಫಲಿತಾಂಶ ಬರುವ ಮುಂಚೆಯೇ ಇಳಿಮುಖ ಕಂಡಿರುವುದು ಹೂಡಿಕೆ ದಾರರಲ್ಲಿ ಆತಂಕ ಹುಟ್ಟಿಸಿದೆ.
ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ತಮ್ಮಲ್ಲಿರುವ ಷೇರುಗಳನ್ನು ಮಾರುತ್ತಿರುವುದು, ಜಾಗತಿಕ ಮಾರುಕಟ್ಟೆಯ ಅಸ್ಥಿರತೆ ಇರುವುದು ಮತ್ತು ರಷ್ಯಾ-ಉಕ್ರೇನ್ ನಡುವಿನ ಯುದ್ದದ ಭೀತಿ ಇವಿಷ್ಟು ಮಾರುಕಟ್ಟೆಯು ಕುಸಿಯಲು ಕಾರಣವೆಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಈ ಮಧ್ಯೆ ಅಮೇರಿಕಾವು ಬ್ಯಾಂಕಿನ ಬಡ್ಡಿಯ ದರದ ಏರಿಕೆಯ ಬಗೆಗೆ ಮಾತನಾಡುತಿರುವುದು ಒಂದೆಡೆಯಾದರೆ, ಚಿನ್ನ ಮತ್ತು ಕಚ್ಚಾ ತೈಲದ ಏರಿಳಿತಗಳು ಇನ್ನೊಂದು ರೀತಿಯ ಆತಂಕವನ್ನು ಹೂಡಿಕೆದಾರರಲ್ಲಿ ಹುಟ್ಟಿಸಿದೆ.
ಈ ಎಲ್ಲಾ ಅಂಶಗಳು ಹೂಡಿಕೆದಾರರಲ್ಲಿ ಮಾರುಕಟ್ಟೆಯು ಮೇಲ್ಮಖವಾಗಿ ಚಲಿಸುತ್ತದೆಯಾ, ಕೆಳಮುಖದಲ್ಲಿ ಚಲಿಸುತ್ತದೆಯಾ ಎಂದು ಅಂದಾಜಿಸುವುದು ಕಠಿಣವಾಗುತ್ತಿದೆ.