Thursday, September 19, 2024

ಪ್ರಾಯೋಗಿಕ ಆವೃತ್ತಿ

” ಬುದ್ದಿಜೀವಿಗಳ ವೇಶ್ಯಾವಾಟಿಕೆ ” : ಜಾನ್ ಸ್ಟಾಂಟನ್

ಜಾನ್ ಸ್ಟಾಂಟನ್ ಜಗತ್ತಿನ ಪ್ರತಿಷ್ಠಿತ ಮತ್ತು ಪ್ರಭಾವಿ ಸುದ್ದಿ ಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ್’ ನ ಮುಖ್ಯಸ್ಥರು. ‘ಮುಕ್ತ ಪತ್ರಿಕೋದ್ಯ’ಮವನ್ನು ಹುರಿಗೊಳಿಸಲು ಆಶಯ ನುಡಿ ಆಡಬೇಕೆಂದು ನ್ಯೂಯಾರ್ಕ್ ಪ್ರೆಸ್ ಕ್ಲಬ್ ಅವರಲ್ಲಿ ಮನವಿ ಮಾಡಿತು.

ಅವರ ಆಶಯ ನುಡಿಗಳು ಹೀಗಿವೆ .

ಇವತ್ತಿನ ಜಗತ್ತಿನ ಇತಿಹಾಸದಲ್ಲಿ, ಅಮೇರಿಕಾದ ಪತ್ರಿಕೋದ್ಯಮದಲ್ಲಿ ‘ಮುಕ್ತ ಪತ್ರಿಕೋದ್ಯಮ’ ಅನ್ನುವಂತದ್ದು ಏನೂ ಇಲ್ಲ. ಅದು ನಿಮಗೂ ಗೊತ್ತು. ನನಗೂ ಗೊತ್ತು.

ತಮ್ಮ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಬರೆಯುವ ಧೈರ್ಯ ಯಾರೊಬ್ಬರಿಗೂ ಇಲ್ಲ. ಹಾಗೇನಾದರೂ ಬರೆದರೆ ಅದು ಪ್ರಕಟವಾಗುವುದಿಲ್ಲ ಅನ್ನುವುದೂ ನಿಮಗೆ ಗೊತ್ತು.

ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಪತ್ರಿಕೆಯಲ್ಲಿ ಬರೆಯದೇ ಇರಲು ಪ್ರತಿ ವಾರ ನನಗೆ ಸಂಬಳ ನೀಡುತ್ತಿದ್ದಾರೆ. ನನ್ನಂತೆಯೇ ನಿಮಗೂ ಕೂಡಾ ಇದೇ ರೀತಿಯ ಸಂಬಳ ಸಿಗುತ್ತಿದೆ. ನಾವು ಯಾರೂ ನಮ್ಮ ಪ್ರಾಮಾಣಿಕ ಅಭಿಪ್ರಾಯ ಬರೆದು ಪತ್ರಿಕೆಯಿಂದ ಹೊರಗೆ ಹಾಕಿಸಿ ಕೊಂಡು ಬೀದಿಗೆ ಬಿದ್ದು ಇನ್ನೊಂದು ಕೆಲಸಕ್ಕಾಗಿ ಹುಡುಕಾಡುವ ಮೂರ್ಖರಲ್ಲ.

ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ನನ್ನ ಪತ್ರಿಕೆಯಲ್ಲಿ ಪ್ರಕಟಿಸಲೇ ಬೇಕೆನ್ನುವ ಹಠಕ್ಕೆ ಬಿದ್ದರೆ ಇಪ್ಪತ್ನಾಲ್ಕು ಗಂಟೆಗೆ ಮುಂಚೆಯೇ ನನ್ನ ಕೆಲಸ ಹೋಗುತ್ತದೆ.

ಇಂಥ ಸನ್ನಿವೇಶದಲ್ಲಿ ಸತ್ಯವನ್ನು ನಾಶಪಡಿಸುವ, ಸುಳ್ಳು ಹೇಳುವ, ವಿಕೃತಿಗೊಳಿಸುವ, ನಿಂದಿಸುವ, ಹಾಗೂ ಬಲಾಢ್ಯರ ಪಾದದ ಅಡಿಯಲ್ಲಿ ದಾಳಗಳಾಗಿ ನಮ್ಮ ದೇಶ ಮತ್ತು ಜನಾಂಗವನ್ನು ಮಾರಾಟ ಮಾಡುವ ಕೆಲಸ ಮಾಡಿ ಹೊಟ್ಟೆ ಹೊರೆದು ಕೊಳ್ಳುವ ಕೆಲಸ ನಮ್ಮ ಪತ್ರಕರ್ತರದ್ದಾಗಿದೆ. ಇದು ನಮ್ಮಿಬ್ಬರಿಗೂ ಗೊತ್ತು.

ಇಂಥ ಸ್ಥಿತಿಯಲ್ಲಿ ಸ್ವತಂತ್ರ ಪತ್ರಿಕೋದ್ಯಮವನ್ನು ಹುರಿಗೊಳಿಸುವ ಬಗೆ ಹೇಗೆ? ನಾವು, ಈ ಎಲ್ಲ ಹುನ್ನಾರಗಳ ಹಿಂದೆ ಇರುವ ಶ್ರೀಮಂತರ ಕೈ ಉಪಕರಣಗಳಾಗಿದ್ದೇವೆ. ಅವರ ತಾಳಕ್ಕೆ ಕುಣಿಯುವ ಕೈಗೊಂಬೆಗಳಾಗಿದ್ದೇವೆ. ಅವರು ಸೂತ್ರ ಎಳೆಯುತ್ತಾರೆ ನಾವು ಕುಣಿಯುತ್ತೇವೆ . ನಮ್ಮ ಪ್ರತಿಭೆ, ನಮ್ಮ ಸಾಧ್ಯತೆಗಳು, ನಮ್ಮ ಜೀವ ಎಲ್ಲವೂ ಬೇರೆಯವರ ಆಸ್ತಿಗಳಾಗಿವೆ.

ಈಗ ನಾವು ಬುದ್ದಿಜೀವಿ ಬೆಲೆವೆಣ್ಣುಗಳು.

~ ನಿಮ್ಮವನು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!