Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಂತರರಾಷ್ಟ್ರೀಯ ಸೆಮಿನಾರ್ ಗೆ ಸಾಕ್ಷಿಯಾದ ಪಿಇಎಸ್ ಕಾಲೇಜು : ಭಾಗವಹಿಸಿದ 400 ಮಂದಿ


  • ಸೆಮಿನಾರ್ ಗೆ ಚಾಲನೆ ನೀಡಿದ ಆಸ್ಟ್ರೇಲಿಯಾ ಯುನಿವರ್ಸಿಟಿಯ ಪ್ರೊ. ಡಾ.ಸುಭಾಷ್ ಚಂದ್ರ

  • ಎಮರ್ಜಿಂಗ್ ರಿಸರ್ಚ್ ಇನ್ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ – ತಂತ್ರಜ್ಞಾನ ಕುರಿತ ಸಮ್ಮೇಳನ

ನಾಲ್ಕನೇ ಅಂತರರಾಷ್ಟ್ರೀಯ ಮಟ್ಟದ 2 ದಿನಗಳ ಎಮರ್ಜಿಂಗ್ ರಿಸರ್ಚ್ ಇನ್ ಎಲೆಕ್ಟ್ರಾನಿಕ್ಸ್ , ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ [ICERECT-2022] ಸಮ್ಮೇಳನವು ಮಂಡ್ಯ ನಗರದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಚಾಲನೆಗೊಂಡಿತು.

ಕಾಲೇಜಿನ ನಿತ್ಯ ಸಚಿವ ಕೆ.ವಿ.ಶಂಕರೇಗೌಡ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ದ ಕಾರ್ಯಕ್ರಮವನ್ನು ಆಸ್ಟ್ರೇಲಿಯಾ ಯುನಿವರ್ಸಿಟಿಯ ಮೆಕಾನಿಕಲ್ ವಿಭಾಗದ ಪ್ರೊ. ಡಾ.ಸುಭಾಷ್ ಚಂದ್ರ ಮುಖ್ಯೋಪಾಧ್ಯಾಯ ಉದ್ಘಾಟಿಸಿದರು.

ಪಿ.ಇ.ಟಿ.ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ಇಂದು ಪಿ ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಅಂತರಾಷ್ಟ್ರೀಯ ಕಾನ್ಫರೆನ್ಸ್ ಹಮ್ಮಿಕೊಳ್ಳಲಾಗಿದೆ.

ಎಮರ್ಜಿಂಗ್ ರಿಸರ್ಚ್ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ ಎಂಬ ಕೋರ್ ಸಬ್ಜೆಕ್ಟ್ ಮೇಲೆ ಸೆಮಿನಾರ್  ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಪ್ರೊಫೆಸರ್ ಸುಭಾಷ್ ಉದ್ಘಾಟನೆ ಮಾಡಿದ್ದಾರೆ.

ಮೈಸೂರು ವಿಭಾಗದ ಐಇಇಇ ಮುಖ್ಯಸ್ಥ ಪರಮೇಶ್ ಆಚಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯ ಕ್ರಮದಲ್ಲಿ ಸುಮಾರು 4 ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಹಲವರು ನೇರವಾಗಿ ಭಾಗವಹಿಸಿದ್ದರೆ, ಕೆಲವರು ಆನ್ಲೈನ್ ಮೂಲಕ ಕಾನ್ಫರೆನ್ಸ್ ಅಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಪ್ರಾಂಶುಪಾಲ ಆರ್.ಎಮ್.ಮಹಾಲಿಂಗೇಗೌಡ, ಡಾ.ಇಮ್ಯಾನುವೆಲ್ ಎಸ್ ಗ್ರಾಂಟ್, ಡಾ.ಸತೀಶ್ ಕುಮಾರ್ ಪೆಡ್ಡೋಜು, ಡಾ.ಪಿ.ದೀಪ ಶೆಣೈ, ಡಾ.ಬಿ.ಡಿ ಪರಮೇಶಚಾರಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!