Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ನಾಲೆಗೆ ಬಾರದ ನೀರು; ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಕಾವೇರಿ ನೀರಾವರಿ ಇಲಾಖೆಯ ಎಸ್.ಇ. ಇಇ ಹಾಗೂ ಎ ಇಇ ರವರು ರೈತರಿಗೆ ಸಮರ್ಪಕವಾಗಿ ನೀರು ಬಿಡದೆ ವಂಚಿಸುತ್ತಿದ್ದಾರೆಂದು ಆರೋಪಿಸಿ ಮಳವಳ್ಳಿ ತಾಲ್ಲೂಕಿನ ಕಾಗೆಪುರದ ಕಾವೇರಿ ನೀರಾವರಿ ಇಲಾಖೆಯ ಕಛೇರಿಗೆ ಬೀಗ ಜಡಿದು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್ ಎಲ್ ಭರತ್ ರಾಜ್, ಸರ್ಕಾರಿ ಅಧಿಕಾರಿಗಳಿಗೆ ಕಾಮಗಾರಿಗಳ ಮೇಲೆ ಇರುವ ಪ್ರೀತಿ ರೈತರ ಬೆಳೆಗಳಿಗೆ ನೀರು ಕೊಡಲು ಇಲ್ಲ, ಮಂಡ್ಯ ಜಿಲ್ಲೆ ಎಂದರೆ ನೀರಾವರಿ ಜಿಲ್ಲೆ ಎಂಬ ಪ್ರತೀತಿ ಇದೆ. ಆದರೆ ದೀಪದ ಕೇಳಗೆ ಕತ್ತಲೆ ಎಂಬಂತೆ ನಮಗೆ ಕುಡಿಯುವ ನೀರು ಇಲ್ಲ, ನಾಲ್ವಡಿ ಕೃಷ್ಣರಾಜ ಒಡೆಯರ್ ರೈತರಿಗೆ ಕೃಷಿ ಮಾಡಲು ಕೆ ಅರ್ ಎಸ್ ಅಣೆಕಟ್ಟು ಕಟ್ಟಿದ್ದರು, ಆದರೆ ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿಗಳಿಗೆ ಕುಡಿಯಲು ನೀರು ಹೋಗುತ್ತಿದೆ ಆ.ದರೆ ನಮ್ಮ ಕಾವೇರಿ ನದಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯಲು ನೀರಿಲ್ಲದೆ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ದನಕರುಗಳಿಗೆ ನೀರಿಲ್ಲ, ಕೆರೆ ಕಟ್ಟೆಗಳಿಗೂ ನೀರಿಲ್ಲದಾಗಿದೆ, ಮಳೆಗಾಲದಲ್ಲೆ ಸಮರ್ಪಕವಾಗಿ ನೀರು ಕೊಡಲು ಯೋಗ್ಯತೆ ಇಲ್ಲದವರು, ಇನ್ನೂ ಬೇಸಿಗೆಯಲ್ಲಿ ನೀರು ಕೊಡ ಲ್ಲರೆ ಎಂದು ಪ್ರಶ್ನಿಸಿದರು. ತಮಿಳುನಾಡಿಗೆ ಹೇರಳವಾಗಿ ನೀರು ಹೋಗುತ್ತಿದೆ, ಆದರೆ ನಮ್ಮ ಬೆಳೆಗಳಿಗೆ ಮತ್ತು ಜೂನ್ ಕೊನೆಯಲ್ಲಿ ಧೀರ್ಘಾವಧಿ ಬೆಳೆ ಜುಲೈನಲ್ಲಿ ಮದ್ಯಮಾವಧಿ ಬೆಳೆಗೆ ಭತ್ತದ ಒಟ್ಟಲು ಹಾಕಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಇಲ್ಲಿಯತನಕ ಭತ್ತದ ಒಟ್ಟಲು ಹಾಕಲು ನೀರು ಬಿಡುತ್ತಿಲ್ಲ, ನೀರು ಬಿಡಲು ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ, ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಲು ಜನಪ್ರತಿನಿಧಿಗಳಿಗೂ ಕಾಳಜಿ ಇಲ್ಲ ಎಂದು ದೂರಿದರು.

ಕಳೆದ ಸೋಮವಾರ ರೈತರು ಪ್ರತಿಭಟನೆ ನಡೆಸಿದಾಗ ಬೆಳಿಗ್ಗೆಯಿಂದಲೇ ನೀರು ಬಿಡುವ ಭರವಸೆ ನೀಡಿ ಹೋರಾಟಗಾರರನ್ನ ದಾರಿ ತಪ್ಪಿಸಿ ವಂಚಿಸಿದ್ದಾರೆ, ಇವರ ಮೇಲೆ ವಂಚನೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು, ಸ್ಥಳಕ್ಕೆ ಆಗಮಿಸಿದ ಇಇ ಬಾಬುಕೃಷ್ಣದೇವ, ಎಇಇ ಭರತೇಶ್, ತಾಲೂಕು ಪಂಚಾಯತಿ ಇಓ ಶ್ರೀನಿವಾಸ್, ಬರುವ ಭಾನುವಾರದಂದು ನೀರ ಬಿಡುವ ಭರವಸೆ ನೀಡಿದರು. ಆರಕ್ಷಕ ಉಪ ನಿರೀಕ್ಷಕ ಶ್ರವಣರೆಡ್ಡ ಶಿವಾನಂದ ಬಂದೋಬಸ್ತ್ ನೀಡಿದ್ದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದರಾಜ್, ಅರ್.ಸತೀಶ್, ವಿಜೇಂದ್ರ, ಪ್ರಸನ್ನ, ಶಿವಕುಮಾರ್, ಮಲ್ಲೇಶ, ನಾಗಮಣಿ ಮರಿಲಿಂಗೇಗೌಡ, ಅನಿಲ್ ಹಾಗೂ ಜಗದೀಶ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!