Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಗನ್ನಾಥ ಶೆಟ್ಟಿಯ ಪ್ರಕರಣ : ಸಮಗ್ರ ತನಿಖೆಗೆ ಆಗ್ರಹ

ಮಂಡ್ಯದ ಪ್ರತಿಷ್ಠಿತ ಶ್ರೀನಿಧಿ ಗೋಲ್ಡ್ ಮಾಲೀಕ ಜಗನ್ನಾಥ ಶೆಟ್ಟಿಯ ಮಾನ  ರಾಜ್ಯದ ಹಾದಿ-ಬೀದಿಗಳಲ್ಲಿ ಹರಾಜಾಗುತ್ತಿದೆ. ಬಿಜೆಪಿ,ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಜಗನ್ನಾಥ ಶೆಟ್ಟಿ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷನಾಗಿ ಚಾಲ್ತಿಯಲ್ಲಿದ್ದ. ತನ್ನ ಲೋಲುಪ ಜೀವನಕ್ಕಾಗಿ ಇದ್ದ ಅಲ್ಪಸ್ವಲ್ಪ ಮರ್ಯಾದೆಯನ್ನು ಬೀದಿಗೆ ತಂದುಕೊಂಡು,ಹೆಸರು ಕೆಡಿಸಿಕೊಂಡಿದ್ದಾನೆ.

ಈ ಪ್ರಕರಣದಲ್ಲಿ ಜಗನ್ನಾಥ ಶೆಟ್ಟಿ ತಾನು ಸಾಚಾ ಎಂದು ತೋರಿಸಲು ಹೋಗಿ ಈಗ ಜನರೆದುರು ಸಂಪೂರ್ಣವಾಗಿ ಬೆತ್ತಲಾಗಿದ್ದಾನೆ. ಪ್ರತಿಷ್ಠಿತ ವ್ಯಕ್ತಿಯಾಗಿದ್ದ ಜಗನ್ನಾಥ್ ಶೆಟ್ಟಿ ಈ ಪ್ರಕರಣದಿಂದ ಆತನ ಕುಟುಂಬದವರು, ಪರಮಾಪ್ತ ಸ್ನೇಹಿತರು ತಲೆ ಎತ್ತಿ ಓಡಾಡದಂತೆ ಮಾಡಿದ್ದಾನೆ.

ಜಗನ್ನಾಥ ಶೆಟ್ಟಿ ತನ್ನನ್ನು ಹನಿ ಟ್ರ್ಯಾಪ್ ನಲ್ಲಿ ಸಿಲುಕಿಸಲಾಗಿದೆ ಎಂದು ದೂರು ನೀಡಿದ ದಿನವೇ ಈತ ಸಖತ್ ಸುಳ್ಳು ಹೇಳಿದ ಬಗ್ಗೆ ಜನರೇ ಮಾತನಾಡುತ್ತಿದ್ದರು. ಆಗ ನಾನು ಸಾಚಾ ಎಂದು ದೂರಿನಲ್ಲಿ ಹೇಳಿಕೊಂಡಿದ್ದ ಜಗನ್ನಾಥ ಶೆಟ್ಟಿಯ ಅಸಲಿ ಮುಖ ಆಡಿಯೋ, ವಿಡಿಯೋ ಮೂಲಕ ಬಹಿರಂಗವಾಗಿದೆ. ಬೆಳೆದ ಮಕ್ಕಳಿದ್ದರೂ ಜಗನ್ನಾಥ ಶೆಟ್ಟಿಗೆ ಈ ವಯಸ್ಸಿನಲ್ಲಿ ಇವೆಲ್ಲ ಬೇಕಿತ್ತೇ ಎಂದು ಮಂಡ್ಯದ ಜನ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ : ಹನಿಟ್ರ್ಯಾಪ್: ಮಂಡ್ಯದ ಚಿನ್ನದ ವ್ಯಾಪಾರಿಯಿಂದ 50 ಲಕ್ಷ ದೋಚಿದ್ರು

ಚಿನ್ನದ ಉದ್ಯಮದಲ್ಲಿ ಚೆನ್ನಾಗಿ ಹಣ ಸಂಪಾದಿಸಿದ ಜಗನ್ನಾಥ ಶೆಟ್ಟಿ, ಸಮಾಜದಲ್ಲಿ ಪ್ರತಿಷ್ಠಿತನಂತೆ ಓಡಾಡಿಕೊಂಡಿದ್ದ. ಈಗ ವಿಲಾಸ ಜೀವನಕ್ಕೆ ಸಿಲುಕಿ ಹಣ,ಮಾನ ಎರಡನ್ನು ಕಳೆದುಕೊಂಡಿರುವುದು ನಾಚಿಕೆಗೇಡು ಎಂದು ಮಂಡ್ಯದ ಜನರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಆಡಿಕೊಳ್ಳುತ್ತಿದ್ದಾರೆ.
ಜಗನ್ನಾಥ ಶೆಟ್ಟಿಯ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಸಾಕಷ್ಟು ಸುಳ್ಳು ಹೇಳಿರುವ ಬಗ್ಗೆ ಪ್ರಗತಿಪರ ಸಂಘಟನೆಗಳ ಮುಖಂಡರು ಖಂಡಿಸಿದ್ದರು.

ಸಮಗ್ರ ತನಿಖೆಗೆ ಒತ್ತಾಯ : ಅಖಿಲ ಭಾರತ ಲಾಯರ್‍ಸ್ ಯೂನಿಯನ್

 

ಪ್ರಗತಿಪರ ಸಂಘಟನೆಯ ಮುಖಂಡರಾದ ಸಿ. ಕುಮಾರಿ, ವಕೀಲ ಬಿ.ಟಿ. ವಿಶ್ವನಾಥ್ ಸೇರಿದಂತೆ ಹಲವರು ಎಸ್ಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಜಗನ್ನಾಥ್ ಶೆಟ್ಟಿ ಬಂಧಿಸಿ ಸೂಕ್ತ ತನಿಖೆ ಮಾಡುವಂತೆ ಕೂಡ ಒತ್ತಾಯಿಸಿದ್ದರು.

(ಜಗನ್ನಾಥ ಶೆಟ್ಟಿಯ ಪ್ರಕರಣ : ಸಮಗ್ರ ತನಿಖೆಗೆ ಆಗ್ರಹ : CITU ಸಿ.ಕುಮಾರಿ)

ಬಿಜೆಪಿ ಮುಖಂಡನಾಗಿದ್ದರಿಂದ ಈತ ಧಾರ್ಮಿಕ ಪರಿಷತ್ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದ. ಇಂದು ಜಗನ್ನಾಥ ಶೆಟ್ಟಿಯ ವಿರುದ್ಧ ಜಿಲ್ಲೆಯ ಅರ್ಚಕರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈತ ಎಂತಹ ಕೀಳುಮಟ್ಟದ ಮನುಷ್ಯ ಎಂಬುದು ಸಾಬೀತಾಗಿದೆ. ಕೆಟ್ಟ ಕೆಲಸ ಮಾಡುವ ಇಂತಹ ವ್ಯಕ್ತಿ ಧಾರ್ಮಿಕ ಸಂಸತ್ ಸದಸ್ಯನಾಗಿರಬಾರದು, ಕೂಡಲೇ ಆತನನ್ನು ಸರ್ಕಾರ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.

(ಪೋಲೀಸರು ಸತ್ಯಾಂಶ ಹೊರತರಲಿ ಎಂದು ಕರ್ನಾಟಕ ಜನಶಕ್ತಿ ಕಾರ್ಯದರ್ಶಿ ಪೂರ್ಣಿಮರವರು ಮಾತನಾಡಿದರು.)

ಇನ್ನು ಶ್ರೀನಿಧಿ ಗೋಲ್ಡ್ ಅಂಗಡಿಯಲ್ಲಿ ಹಲವು ಗೌರವಸ್ಥ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಹನಿಟ್ರ್ಯಾಪ್ ಪ್ರಕರಣದಿಂದ ಈತನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಕೂಡ ಮುಜುಗರಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಪ್ರಕರಣದಲ್ಲಿ ಮಂಡ್ಯ ಪೊಲೀಸರು ಜಗನ್ನಾಥ ಶೆಟ್ಟಿಯನ್ನು ಬಂಧಿಸಿ ಸೂಕ್ತವಾದ ತನಿಖೆ ಮಾಡಿ ನಿಜಾಂಶವನ್ನು ಮಂಡ್ಯ ಜನರಿಗೆ ತಿಳಿಸಬೇಕಿದೆ.

ಇದನ್ನೂ ಓದಿ: ಶ್ರೀನಿಧಿ ಗೋಲ್ಡ್ ಜಗನ್ನಾಥ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!