Friday, September 20, 2024

ಪ್ರಾಯೋಗಿಕ ಆವೃತ್ತಿ

ಅಸ್ಸಾಂ| ಕಾಂಗ್ರೆಸ್ ನಾಯಕ ಜೈರಾಂ ರಮೇಶ್‌ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ

ಭಾರತ್‌ ಜೋಡೋ ನ್ಯಾಯ ಯಾತ್ರೆ 8ನೇ ದಿನವಾದ ಇಂದು ಅಸ್ಸಾಂನಲ್ಲಿ ಮುಂದುವರಿದಿದ್ದು, ಸುನೀತ್‌ಪುರದ ಜುಮುಗುರಿಹತ್‌ನಲ್ಲಿ ನನ್ನ ವಾಹನದ ಮೇಲೆ ಬಿಜೆಪಿ ಗುಂಪು ದಾಳಿ ಮಾಡಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಆರೋಪಿಸಿದ್ದಾರೆ.

ಅವರು ಕಾರನ್ನು ಅಡ್ಡಗಟ್ಟಿದ್ದರು. ಭಾರತ್ ಜೋಡೋ ನ್ಯಾಯ ಯಾತ್ರೆಯ ಸ್ಟಿಕ್ಕರ್‌ಗಳನ್ನು ವಿಂಡ್‌ಶೀಲ್ಡ್‌ನಿಂದ ಹರಿದು ಹಾಕಿದ್ದಾರೆ. ನೀರು ಎಸೆದು ಘೋಷಣೆಗಳನ್ನು ಕೂಗಿದ್ದಾರೆ. ಆದರೆ ನಾವು ನಮ್ಮ ಸಂಯಮವನ್ನು ಕಾಯ್ದುಕೊಂಡು, ಪುಂಡ ಪೋಕರಿಗಳಿಗೆ ಕೈ ಬೀಸಿ ಮುಂದೆ ಸಾಗಿದ್ದೇವೆ. ಇದು ನಿಸ್ಸಂದೇಹವಾಗಿ ಅಸ್ಸಾಂ ಸಿಎಂ
ಹಿಮಂತ ಬಿಸ್ವಾ ಶರ್ಮಾ ಮಾಡಿಸುತ್ತಿರುವುದು, ಇದಕ್ಕೆ ನಾವು ಬೆದರುವುದಿಲ್ಲ ಮತ್ತು ಸೈನಿಕರಾಗಿ ಮುಂದುವರಿಯುತ್ತೇವೆ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

“>

ಭಾರತ್‌ ಜೋಡೋ ನ್ಯಾಯ ಯಾತ್ರೆ ಇಂದು ನಾಗಾನ್ ಜಿಲ್ಲೆಯ ಕಡೆಗೆ ಸಾಗುತ್ತಿದೆ. ಈ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ನಾನು ಮತ್ತು ಅಸ್ಸಾಂನ ಜನರು ಸಿಎಂಗೆ ಹೆದರುವುದಿಲ್ಲ, ಭಾರತದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಯಾರು? ಉತ್ತರ ಹಿಮಂತ ಬಿಸ್ವಾ ಶರ್ಮಾ, ಇದು ಅಸ್ಸಾಂನ ಜನರು ಮತ್ತು ಇಡೀ ದೇಶಕ್ಕೆ ತಿಳಿದಿದೆ. ಇದು ರಾಹುಲ್ ಗಾಂಧಿಯ ಪ್ರಯಾಣವಲ್ಲ, ಅಸ್ಸಾಂನ ಜನರ ಪ್ರಯಾಣ ಎಂದು ನಮಗೆ ಬೆದರಿಕೆ ಹಾಕುತ್ತಿರುವವರು ತಿಳಿದುಕೊಳ್ಳಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಸ್ಸಾಂನ ಯುವಕರು ಮತ್ತು ರೈತರಿಗೆ ಅನ್ಯಾಯವಾಗುತ್ತಿದೆ. ಇಲ್ಲಿನ ಯುವಕರು ಲಕ್ಷಗಟ್ಟಲೆ ಖರ್ಚು ಮಾಡಿ ಶಾಲಾ-ಕಾಲೇಜಿಗೆ ಹೋಗುತ್ತಾರೆ, ಆದರೆ ಅಸ್ಸಾಂನಲ್ಲಿ ಅವರಿಗೆ ಉದ್ಯೋಗ ಸಿಗುವುದಿಲ್ಲ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಸಣ್ಣ ಪುಟ್ಟ ವ್ಯಾಪಾರಗಳು ಕೂಡ ಹಾಳಾಗಿದೆ. ಆಯ್ದ ಕೈಗಾರಿಕೋದ್ಯಮಿಗಳಿಗಾಗಿ ಇಡೀ ದೇಶದ ಸರ್ಕಾರ ನಡೆಯುತ್ತದೆ. ಇದರ ವಿರುದ್ಧ ನಾವು ಭಾರತ್ ಜೋಡೋ ನ್ಯಾಯ ಯಾತ್ರೆ ಕೈಗೊಂಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!