Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನತಾ ನ್ಯಾಯಾಲಯದ ಮುಂದೆ ಸಂಸದೆ ಡೀಲ್ ಬಯಲು ಮಾಡ್ತೇನೆ


  • ಸುಮಲತಾ ಟೀಂನ ಡೀಲ್ ಅನ್ನು ಜನತಾ ನ್ಯಾಯಾಲಯದ ಮುಂದೆ ಬಿಡುಗಡೆ
  • ಏಟ್ರಿಯಾ ಹೋಟೆಲ್ ನಲ್ಲಿ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಅಧಿಕಾರಿ ಜೊತೆ ಮಾತಿನ ಬಳಿ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್
  • ಶ್ರೀರಂಗಪಟ್ಟಣ ತಾಲೂಕಿನ ಬಸ್ತೀಕೆರೆ ಗ್ರಾಮದಲ್ಲಿ ಶಾಲಾ ಕೊಠಡಿಯ ನಿರ್ಮಾಣ ಕಾಮಗಾರಿಗೆ ಚಾಲನೆ
  • ನೀವು ಮಂಡ್ಯ ಜಿಲ್ಲೆಗೆ ಏನೆಲ್ಲಾ ಅಭಿವೃದ್ಧಿ ಮಾಡಿದ್ದೀರಿ ಎಂಬ ಪಟ್ಟಿ ಮೊದಲು ಬಿಡುಗಡೆ ಮಾಡಿ

ದಿಲೀಪ್ ಬಿಲ್ಡ್ ಖಾನ್ ಅಧಿಕಾರಿಯ ಜೊತೆ ಬೆಂಗಳೂರಿನ ಏಟ್ರಿಯ ಹೋಟೆಲ್ ನಲ್ಲಿ ಎಷ್ಟು ಪರ್ಸೆಂಟೇಜ್ ಕೇಳಿದ್ರು,ಎಷ್ಟು ಕೋಟಿ ಕೇಳಿದ್ರು ಎಂಬ ವಿಡಿಯೋ ದಾಖಲೆ ನನ್ನ ಬಳಿ ಇದ್ದು,ಸಂಸದೆ ಸುಮಲತಾ ಟೀಂನ ಡೀಲ್ ಅನ್ನು ಜನತಾ ನ್ಯಾಯಾಲಯದ ಮುಂದೆ ಬಿಡುಗಡೆ ಮಾಡುತ್ತೇನೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು ಹಾಕಿದರು.

ಶ್ರೀರಂಗಪಟ್ಟಣ ತಾಲೂಕಿನ ಬಸ್ತೀಕೆರೆ ಗ್ರಾಮದಲ್ಲಿ ಶಾಲಾ ಕೊಠಡಿಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಂಸದೆ ಸುಮಲತಾ ಅವರು ರವೀಂದ್ರ ಶ್ರೀಕಂಠಯ್ಯನವರಿಗೆ ಏಟ್ರಿಯಾ ಹೋಟೆಲ್ ನಲ್ಲಿ ನಡೆದ ಯಾವ ವಿಡಿಯೋ ಬೇಕು ಅದನ್ನು ಪೆನ್ ಡ್ರೈವ್ಗೆ ಹಾಕಿ ಕೊಡುತ್ತೇನೆ ಎಂದು ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಸದೆ ಸುಮಲತಾ ಅವರ ಟೀಮ್ ಏಟ್ರಿಯಾ ಹೋಟೆಲ್ನಲ್ಲಿ ದಿಲೀಪ್ ಬಿಲ್ಡ್ ಕಾನ್ ಅಧಿಕಾರಿಯ ಜೊತೆ ಎಷ್ಟು ಪರ್ಸೆಂಟೇಜ್ ಕೇಳಿದ್ರು,ಯಾವ ರೀತಿಯ ಒತ್ತಡ ಹಾಕಿದ್ರು ಎಂಬ ಬಗೆಗಿನ ವಿಡಿಯೋ ಮೊದಲು ಕೊಡಲಿ.ನಾನು ಅದನ್ನು ನಮ್ಮ ಕ್ಷೇತ್ರದ ಜನರ ಮುಂದೆ ಇಡುತ್ತೇನೆ ಎಂದರು.

ಸುಮಲತಾ ಮತ್ತು ಅವರ ತಂಡ ಬೆಂಗಳೂರಿನ ಏಟ್ರಿಯಾ ಹೋಟೆಲ್ ನಲ್ಲಿ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಅಧಿಕಾರಿಯನ್ನು ಕರೆಸಿಕೊಂಡು ಏನು ಮಾತನಾಡಿದರು ಎಂಬ ಬಗ್ಗೆ ನಮ್ಮ ಬಳಿ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಇದೆ. ಅಧಿಕಾರಿಯ ಮೇಲೆ ಯಾವ ರೀತಿ ಒತ್ತಡ ಹೇರಿದರು,ಎಷ್ಟು ಪರ್ಸೆಂಟೇಜ್ ಕೇಳಿದರು ಎಂಬ ಬಗ್ಗೆಯೂ ವಿಡಿಯೋ ಇದ್ದು ಚುನಾವಣೆಯ ಸಂದರ್ಭದಲ್ಲಿ ಜನತಾ ನ್ಯಾಯಾಲಯದ ಮುಂದೆ ಇದನ್ನು ಹಾಜರಿ ಪಡಿಸುತ್ತೇವೆ. ನಂತರ ಜನರೇ ಅವರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

ಸಚಿವರ ಭ್ರಷ್ಟಾಚಾರ ಒದರಿದ್ದೇವೆ
ಹೀಗೆ ಬಿಜೆಪಿಯ ಸಚಿವರೊಬ್ಬರು ಜೆಡಿಎಸ್ ವರಿಷ್ಠ ಕುಮಾರಸ್ವಾಮಿಯ ಬಗ್ಗೆ ಮಾತನಾಡಿದ್ದಕ್ಕೆ ಅವರು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿ ಒದರಿದ್ದಾರೆ‌.ಇದಾದ ನಂತರ ಬಿಜೆಪಿಯ ನಾಯಕರೊಬ್ಬರು ಕುಮಾರಸ್ವಾಮಿಯವರ ಮುಂದೆ ಬಂದು ಉನ್ನತ ಶಿಕ್ಷಣ ಸಚಿವರ ಭ್ರಷ್ಟಾಚಾರದಿಂದ ಬಿಜೆಪಿ ಪಕ್ಷ ತಲೆತಗ್ಗಿಸುವಂತೆ ಎಂದಿದ್ದಾರೆ.ಸುಮಲತಾ ಅವರ ಭ್ರಷ್ಟಾಚಾರವನ್ನು ಸಮಯ ಬಂದಾಗ ಜನತಾ ನ್ಯಾಯಾಲಯದಲ್ಲಿ ಹಾಜರು ಪಡಿಸುವುದು ಗ್ಯಾರಂಟಿ ಎಂದರು.

ಜನ ತೀರ್ಮಾನಿಸುತ್ತಾರೆ
ಶ್ರೀಕಂಠಯ್ಯನವರಿಗೆ ಮೈ ತುಂಬಾ ದುರಂಕಾರ ತುಂಬಿದೆ ಎಂಬ  ಸುಮಲತಾ ಅಂಬರೀಶ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಬಗ್ಗೆ ನನ್ನ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ. ರವೀಂದ್ರ ಬಂದಾಗ ಕ್ಷೇತ್ರ ಹೇಗಿತ್ತು ನಂತರ ಏನಾಗಿದೆ ಎಂಬುದು ಜನರಿಗೂ ಗೊತ್ತಿದೆ. ಸಂಸದೆ ಅವರಿಂದ ನಾನು ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ.ಮೊದಲು ಜನರು ನಿಮಗೆ ಮುಂದಿನ ಚುನಾವಣೆ ಸರ್ಟಿಫಿಕೇಟ್ ಕೊಡ್ತಾರೆ ಎಂಬುದು ಮುಂದಿನ ಚುನಾವಣೆಯಲ್ಲಿ ತಿಳಿಯುತ್ತದೆ. ಅಧಿಕಾರಿಗಳು ಜನರ ಬಳಿ ನೀವು ಹೇಗೆ ನಡೆದುಕೊಂಡಿದ್ದೀರಿ. ನಿಮ್ಮ ದುರಂಕಾರದ ಬಗ್ಗೆ ಮೊದಲು ನೀವು ಪ್ರಶ್ನೆ ಮಾಡಿಕೊಳ್ಳಿ ಎಂದು ಕಿಡಿಕಾರಿದರು‌.

ಅಭಿವೃದ್ಧಿ ಪಟ್ಟಿ ಬಿಡುಗಡೆ ಮಾಡಿ
1952 ರಿಂದ ನನ್ನ ಕುಟುಂಬ ರಾಜ್ಯ ರಾಜಕಾರಣದಲ್ಲಿ ಇದೆ ಎಂಬ ಬಗ್ಗೆ ಸಂಸದೆ ಅವರು ಮೊದಲು ಇತಿಹಾಸ ತಿಳಿದುಕೊಳ್ಳಲಿ. ನನ್ನ ಅಭಿವೃದ್ಧಿ ಬಗ್ಗೆ ಮಾತನಾಡುವ ನೀವು ಮಂಡ್ಯ ಜಿಲ್ಲೆಗೆ ಏನೆಲ್ಲಾ ಅಭಿವೃದ್ಧಿ ಮಾಡಿದ್ದೀರಿ ಎಂಬ ಪಟ್ಟಿ ಮೊದಲು ಬಿಡುಗಡೆ ಮಾಡಿ. ಕೇಂದ್ರ ಸರ್ಕಾರದ ರೈಲು ಶ್ರೀರಂಗಪಟ್ಟಣದ ನಿಲ್ಲಿಸಿ ಕೊಡಿ ಎಂದು ಕೇಳಿದರೂ ಅದನ್ನು ಮಾಡಿಸುವ ದಕ್ಷತೆ ನಿಮಗಿಲ್ಲ‌‌. ನನ್ನ ಬಗ್ಗೆ ಮಾತನಾಡುವುದು ನಿಮಗೆ ಅಗೌರವ ತರುತ್ತದೆ‌‌. ಆಣೆ ಪ್ರಮಾಣ ಮಾಡುವ ಮೊದಲು ನೀವು ದಿಲೀಪ್ ಬಿಲ್ಡ್ ಕಾನ್ ಅಧಿಕಾರಿಯ ಬಳಿ ಏಟ್ರಿಯಾ ಹೋಟೆಲ್ ನಲ್ಲಿ ಏನು ಕೇಳಿದ್ರು,ಎಷ್ಟು ಪರ್ಸೆಂಟೇಜ್ ಕೇಳಿದ್ರು,ಎಷ್ಟು ಕೋಟಿ ಕೇಳಿದ್ರಿ ಎಂಬ ಬಗ್ಗೆ ವಿವರಣೆ ಕೊಟ್ಟು ನಂತರ ಅವರು ಆಣೆ, ಪ್ರಮಾಣಕ್ಕೆ ಬರಲಿ. ಮೊದಲೇ ಹೇಳಿದಂತೆ ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಸಂಸದೆ ಹೇಳಿದಂತೆ ನಾನು ಕೇಳಲು ತಯಾರಿಲ್ಲ ಎಂದು ಕಿಡಿಕಾರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!