Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಕಾಲಕ್ಕೆ ತಕ್ಕಂತೆ ಮಳೆಯಾದರೆ ರೈತ ಹಸನ್ಮುಖಿ – ಜಯರಾಮ್

ರೈತರಿಗೆ ಮುಂಗಾರು ಹಂಗಾಮಿನಲ್ಲಿ ಕಾಲಕ್ಕೆ ತಕ್ಕಂತೆ ಮಳೆಯು ಆದಲ್ಲಿ ರೈತರ ಕೃಷಿ ಜೀವನ ಹಸನ್ಮುಖ ವಾಗಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜಯರಾಮ್ ತಿಳಿಸಿದರು.

ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದ ಬಳಿ ನಾಗಮಂಗಲ ತಾಲೂಕು, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ರೈತರೊಂದಿಗೆ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಗಮಂಗಲ ತಾಲೂಕಿನಲ್ಲಿ ಪ್ರಸ್ತುತ ಐದು ಹೋಬಳಿಗಳಿದ್ದು, 367 ಗ್ರಾಮ 27 ಗ್ರಾಮ ಪಂಚಾಯಿತಿಗಳು ಒಳಪಟ್ಟಿದ್ದು, ರೈತರ ಕೃಷಿ ಕಾರ್ಯ ಚಟುವಟಿಕೆ ಪ್ರತಿ ಹೋಬಳಿಗಳಲ್ಲಿಯೂ ರೈತ ಸಂಪರ್ಕ ಕೇಂದ್ರ ರೈತರೊಂದಿಗೆ ಕಾರ್ಯ ಚಟುವಟಿಕೆ ಕೈಗೊಂಡಿದೆ.

ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನ ಗುರಿ 3821 ಎಕ್ಟರ್ ಇದ್ದು ಪ್ರಮುಖವಾದ ರಾಗಿ ಬೆಳೆಯಾಗಿದ್ದು ಮಳೆಗೆ ತಕ್ಕಂತೆ ಹಾಗೂ ನೀರಾವರಿ ಪ್ರದೇಶವಿದ್ದಲ್ಲಿ ಭತ್ತದ ಬೆಳೆ ಮಾಡುವುದು ವಾಡಿಕೆಯಾಗಿದೆ.

ನಾಗಮಂಗಲ ತಾಲೂಕಿನಲ್ಲಿ ಮಳೆಗನ್ಗುಣವಾಗಿ ಬಿತ್ತನೆ ಬೀಜಗಳನ್ನ ಪೂರೈಸುತ್ತಿದ್ದು, ರೈತರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಕೃಷಿ ಮಾಹಿತಿಗಳನ್ನ ಪಡೆದುಕೊಳ್ಳುವ ಮುಖಾಂತರ ಸರ್ಕಾರದ ಕೃಷಿ ಇಲಾಖೆಯ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ತಿಳಿಸಿದರು.

ತಾಲೂಕಿನಲ್ಲಿ ಕೃಷಿ ಇಲಾಖೆಯ ಯೋಜನೆಗಳನ್ನು ಅತಿ ಹೆಚ್ಚು ಪ್ರಚಾರದ ಕೊರತೆಯಿದ್ದು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಣೆ ಮಾಡಿಸುವ ಮುಖಾಂತರ ಗ್ರಾಮೀಣ ಪ್ರದೇಶಗಳಿಗೆ ತಿಳಿಸುವ ಉದ್ದೇಶವಾಗಿಲಿ ಎಂದು ಗೋಪಿಕೃಷ್ಣ ಅವರ ಗೋಪಿ ಕೃಷ್ಣರವರ ಅಭಿಪ್ರಾಯ ತಿಳಿಸಿದರು.

ಮಾಧ್ಯಮ ಮತ್ತು ಕೃಷಿ ಇಲಾಖೆಯ ಬಹು ಮುಖ್ಯ ಸಂವಾದ ಕಾರ್ಯಕ್ರಮ ರೈತರಿಗೆ ಸದುಪಯೋಗವಾಗಿದ್ದು ಈ ಸಂದರ್ಭದಲ್ಲಿ ರೈತರಿಗೆ ರಾತ್ರಿಯ ವೇಳೆಯಲ್ಲಿ ವಿದ್ಯುತ್ ಪೂರೈಸುವ ಬದಲು ಹಗಲು ವೇಳೆ ನೀಡುವುದು ಒಳಿತು ಎಂಬುದು ಪ್ರಗತಿಪರ ರೈತರದ ರಾಮ ನಂಜಯ್ಯನವರು ಅಭಿಮತ ವ್ಯಕ್ತಪಡಿಸಿದರು.

ರೈತರ ಬಹು ಮುಖ್ಯ ಬೇಡಿಕೆಯಾಗಿರುವ ಪೌತಿ ಖಾತೆಗಳ ವಿವಾದವು ಸಮಸ್ಯೆಯಾಗಿಯೇ ಉಳಿದಿದ್ದು ರೈತರಿಗೆ ಸಿಗಬೇಕಾದ ಸೌಲಭ್ಯಗಳು ದೊರೆತೆಯಿದ್ದು ಖಾತೆ ಮಾಡಿಸಲು ಬೇಡಿಕೆ ಇಡುವುದು ಅಸಮಂಜಸವಾಗಿದ್ದು ಈ ಒಂದು ಸಮಸ್ಯೆಗೆ ಮಾಧ್ಯಮದವರು ಕೈ ಜೋಡಿಸುವ ಮುಖಾಂತರ ರೈತರಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಬೇಕೆಂದು ತಮ್ಮ ಅಹವಾಲವನ್ನ ರೈತ ಸಂಘದ ಸತೀಶ್ ಮಂಡಿಸಿದರು.

ತಾಲೂಕಿನಲ್ಲಿ ಕೃಷಿಯನ್ನು ನಂಬಿ ಬದುಕುತ್ತಿರುವ ರೈತರಿಗೆ ಬಹುದಿನದ ಸಮಸ್ಯೆಗಳನ್ನು ಸರಿದೂಗಿಸುವ ವೇದಿಕೆ ಕೃಷಿ ಸಂವಾದ ಪತ್ರಕರ್ತರು ರೈತ ರೊಟ್ಟಿಗೆ ಕೈಜೋಡಿಸುವ ಈ ಕಾರ್ಯಕ್ರಮ ಅನುಕೂಲವಾಗಿದೆ ಎಂದು ರೈತ ಮುಖಂಡರಾದ ವಿರೂಪಾಕ್ಷರವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ ಜೆ ಜಯರಾಮ್ ವಹಿಸಿದ್ದರು, ಕೃಷಿ ಇಲಾಖೆ ಸಿಬ್ಬಂದಿಯವರು ಹಾಜರಿದ್ದರು. ಕೃಷಿ ಸಂವಾದದಲ್ಲಿ ಭಾಗವಹಿಸಿದ ಪ್ರಗತಿಪರ ರೈತರಿಗೆ ಗೌರಾರ್ಪಣೆ ಮಾಡಲಾಯಿತು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!