Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಒಳೇಟು ಕಾಂಗ್ರೆಸ್ ಅಧಿಕಾರಕ್ಕೆ

ಇದೇ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಕೆ.ಆರ್.ರಮೇಶ್ 10 ಮತ ಪಡೆದು ಮಲ್ಲನಕುಪ್ಪೆ ಗ್ರಾ.ಪಂ‌ ಅಧ್ಯಕ್ಷರಾಗಿ ಆಯ್ಕೆಯಾದರು.

ಜೆಡಿಎಸ್ ಪಕ್ಷದ ಇಂದ್ರಮ್ಮ ಅವರು ರಾಜೀನಾಮೆ ನೀಡಿದ್ದರಿಂದ ಇಂದು ಚುನಾವಣೆ ನಡೆಯಿತು. ಜೆಡಿಎಸ್ ಒಳ ಜಗಳದ ಲಾಭ ಪಡೆದ ಕಾಂಗ್ರೆಸ್ ಪಕ್ಷದ ರಮೇಶ್ ಅಧ್ಯಕ್ಷ ರಾಗಿ ಆಯ್ಕೆಯಾದರು.

ಜೆಡಿಎಸ್ ಪಕ್ಷದ ಒಂದು ಗುಂಪು ಕಾಂಗ್ರೆಸ್ ಪಕ್ಷದ ರಮೇಶ್ ಅವರಿಗೆ ಬೆಂಬಲ ನೀಡಿದ್ದರಿಂದ 10 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜೆಡಿಎಸ್ ಬೆಂಬಲ ಪಡೆದು ನಿಂತಿದ್ದ ಗಂಗರಾಜು ಅವರು 9 ಮತಪಡೆದು ಪರಾಭವಗೊಂಡಿದ್ದಾರೆ.

ನೂತನವಾಗಿ ಆಯ್ಕೆಯಾದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಧ್ಯಕ್ಷ ರಮೇಶ್ ಅವರಿಗೆ ಎರಡು ಗುಂಪುಗಳ ಸದಸ್ಯರು ಕೂಡಿ ಅಭಿನಂದನೆ ಸಲ್ಲಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ,ಹೂವಿನ ಹಾರ ಹಾಕಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ರಮೇಶ್ ಮಾತನಾಡಿ,ನನಗೆ ಪಕ್ಷಾತೀತವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ಬೆಂಬಲ ನೀಡಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಪಂಚಾಯಿತಿ ಅಭಿವೃದ್ಧಿಗೆ ಎಲ್ಲಾ ಸದಸ್ಯರನ್ನು ಒಗ್ಗೂಡಿ ಹಗಲಿರಳು ಶ್ರಮಿಸಿ ಅಭಿವೃದ್ಧಿ ಪಡಿಸುತ್ತೇನೆ ಎಂದು ತಿಳಿಸಿದರು.

ಚುನಾವಣಾ ಅಧಿಕಾರಿಯಾಗಿ ಇ.ಓ ಪ್ರದೀಪ್ ಅವರು ಚುನಾವಣೆ ನಡೆಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ನ ಮುಖಂಡರಾದ ಚಾಕನಕೆರೆ ಕುಮಾರ್. ಮಲ್ಲನಕುಪ್ಪೆ ರವಿ.ದುಂಡನಹಳ್ಳಿ ಯೋಗೇಶ. ಪ್ರಸಾದ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ. ಕೆ.ಟಿ.ರಾಜಣ್ಣ,ನಾಗೇಗೌಡ, ಶಂಕರ ಲಿಂಗಯ್ಯ, ಪುಟ್ಟಣ್ಣ,ರಾಜೇಂದ್ರ,ಟಿವಿ9 ಕುಮಾರ,ಮಧು, ರಂಜು,ರಾಜು ಹಾಜರಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಬಣಗಳ ನಡುವೆ ಭಾರೀ ತಿಕ್ಕಾಟ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಚುನಾವಣೆಗೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!