Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಹಲವು ಮುಖಂಡರು

ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ ಮೆಚ್ಚಿ ಹಲವು ಜೆಡಿಎಸ್ ಮುಖಂಡರು, ಇಂದು ಭಾನುವಾರ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಯವರ ನೇತೃತ್ವದಲ್ಲಿ ಸೇರ್ಪಡೆಯಾದರು.

ಮಂಡ್ಯ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕೊಪ್ಪ ಹೋಬಳಿಯ ಜೆಡಿಎಸ್ ನಾಯಕರುಗಳಾದ ಮನ್ ಮುಲ್ ಮಾಜಿ ಅಧ್ಯಕ್ಷ ಸಿ.ತಮ್ಮಯ್ಯ ,ಒಕ್ಕಲಿಗರ ಸಂಘದ ನಿರ್ದೇಶಕ ಮೂಡ್ಯ ಚಂದ್ರು, ಮಾಜಿ ತಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಜಯರಾಮು,ರಾಮಚಂದ್ರು,ಮಾಜಿ ತಾಪಂ.ಉಪಾಧ್ಯಕ್ಷರು
ತಮ್ಮಣ್ಣ ನಾಯಕ,ಹುರುಗಲವಾಡಿ ಯೋಗೇಶ್, ಹರೀಶ್, ಯೋಗಾನಂದ್,ಹಳೆಹಳ್ಳಿ ರಾಮಕೃಷ್ಣ, ನಂಬಿನಾಯಕನಹಳ್ಳಿ ಸುರೇಶ್.
ಹೊಸಗಾವಿ ಶಿವರಾಮು ಚಿಕ್ಕಹೊಸಗಾವಿಯ ಎಪಿಎಂಸಿ ಮಾಜಿ ಸದಸ್ಯ
ಬಾರ್ ಸುರೇಶ್ ನಂಬಿನಾಯಕನಹಳ್ಳಿ,ಬಂಡಹಳ್ಳಿ ಕುಮಾರ್,
ತರಮನಕಟ್ಟೆಯ ಗ್ರಾ.ಪಂ. ಮಾಜಿ ಅಧ್ಯಕ್ಷ ತಮ್ಮೇಗೌಡ ಮಗ ಟಿ ರಮೇಶ್,ಕೊಪ್ಪ ಶ್ರೀಕಾಂತ್,ನಂಜೇಶ್ ಅರಳಕೆರೆ ಜ್ಯೋತಿ ಶಂಕರ್ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದವರು.

ಚಲುವರಾಯಸ್ವಾಮಿ ಅವರು ಎಲ್ಲರಿಗೂ ಪಕ್ಷದ ಶಾಲು ಹೊದೆಸಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.ಎಲ್ಲರೂ ಚಲುವರಾಯಸ್ವಾಮಿ ನಾಯಕತ್ವ ಬೆಂಬಲಿಸಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಲುವರಾಯಸ್ವಾಮಿ,
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರಿದ್ದು,ಪಕ್ಷಕ್ಕೆ ಬಲ ತಂದಿದೆ.ಎರಡೂ ಪಕ್ಷಗಳು ಮುಖಂಡರನ್ನು ಕಡೆಗಣಿಸಿದ ಪರಿಣಾಮ ಅವರೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ ಎಂದರು.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದೆ..ರಾಜ್ಯ ಸರ್ಕಾರ ಶೇ.40 ರಷ್ಷು ಕಮೀಷನ್ ಹೊಡೆದಿದೆ‌.ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುವಂತೆ ಮಾಡಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಸಿ.ಡಿ.ಗಂಗಾಧರ್, ನಾಗಮಂಗಲ ಕ್ಷೇತ್ರದ ಗ್ರಾಮಾಂತರ ಅಧ್ಯಕ್ಷ ದಿವಾಕರ್,ಜೋಗಿಗೌಡ, ಸುರೇಶ್ ಕಂಠಿ,ಎ.ಟಿ. ಕರೀಗೌಡ,ದವಲನ ರಾಮಕೃಷ್ಣ,ಡಿ.ಕೃಷ್ಣೇಗೌಡ, ಜವರೇಗೌಡ, ಅಂಜನ ಶ್ರೀಕಾಂತ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!