Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿಗೆ 6 ತಿಂಗಳ ಜೈಲು ಶಿಕ್ಷೆ

2016 ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪ್ರತಿಭಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ನ್ಯಾಯಾಲಯವು ಶುಕ್ರವಾರ, ಸೆಪ್ಟೆಂಬರ್ 16 ರಂದು ದಲಿತ ಹೋರಾಟಗಾರ ಹಾಗು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ 18 ಜನರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಗಲಭೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಮೇವಾನಿ ಮತ್ತು ಅವರ ಸಹಚರರನ್ನು ಬಂಧಿಸಲಾಯಿತು.

ಗುಜರಾತಿನ ಅಹಮದಬಾದ್ ಜಿಲ್ಲೆಯವರಾದ ಜಿಗ್ನೇಶ್ ಮೆವಾನಿ’ದಲಿತ್ ಅಧಿಕಾರ್ ಮಂಚ್’ಎಂಬ ಸಂಘಟನೆಯೊಂದಿಗೆ ದಲಿತ ಪರ ಹೋರಾಟಗಳಿಲ್ಲಿ ಮುಂಚುಣಿಯಲ್ಲಿದ್ದ ಅವರು 2017 ರಲ್ಲಿ
ವಡ್ಗಾಂವ್ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದರು ನಂತರ 2021ರಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸಕ್ರೀಯವಾಗಿ ಗುಜರಾತಿನಲ್ಲಿ ಪಕ್ಷವನ್ನು ಸಂಘಟಿಸುತ್ತಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!