Wednesday, July 24, 2024

ಪ್ರಾಯೋಗಿಕ ಆವೃತ್ತಿ

ಜುಲೈ 10 ರಂದು ‘ಕಂದನೂರಿನ ಹಾಡು’ ಕವನ ಸಂಕಲನ ಬಿಡುಗಡೆ

ಪ್ರಜಾವಾಣಿ ವರದಿಗಾರ ಗಣಂಗೂರು ನಂಜೇಗೌಡ ಅವರ ‘ಕಂದನೂರಿನ ಹಾಡು’ ಕವನ ಸಂಕಲನ ಬಿಡುಗಡೆ, ಪ್ರತಿಭಾ ಪುರಸ್ಕಾರ ಹಾಗೂ ಕವಿಗೋಷ್ಠಿ ಜುಲೈ 10 ರಂದು ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ನಡೆಯಲಿದೆ.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶಗೌಡರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು,ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣರವರು ಉದ್ಘಾಟನೆ ಮಾಡಲಿದ್ದಾರೆ.

ಪ್ರಸಿದ್ಧ ಸಾಹಿತಿ ಸಿ.ಪಿ.ಕೆ.ರವರು ಕವನ ಸಂಕಲನ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ಪ್ರಜಾವಾಣಿ ಹಿರಿಯ ವರದಿಗಾರ ಎಂ.ಎನ್. ಯೋಗೇಶ್‌ ಮಾತನಾಡಲಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ವಿದ್ಯಾರ್ಥಿಗಳಾದ ಹೆಚ್.ಎಸ್.ಅಪೂರ್ವ,ಎಂ.ಎನ್.ಸೂರಜ್ ಗೌಡ ಕೆ.ಎಂ.ಗಗನ್,ಹೆಚ್.ವಿ.ವಿಕಾಸ್ ಅವರಿಗೆ ಯುವನಾಯಕ ಇಂಡುವಾಳು ಸಚ್ಚಿದಾನಂದ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ.
ಪತ್ರಕರ್ತರಾದ ಮತ್ತೀಕೆರೆ ಜಯರಾಮ್, ಕೆ.ಸಿ.ಮಂಜುನಾಥ್,ಐಡಿಯಲ್ ಶಿವಪ್ರಕಾಶ್, ಸತೀಶ್ ಜವರೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!