Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಲಬುರ್ಗಿ ಕನಸು

✍️ಹರೀಶ್ ಗಂಗಾಧರ್

ಕೋವಿಯಿಡಿದು ನಸುಗತ್ತಲಲಿ
ಕದತಟ್ಟಿದ ಕಟುಕರನ್ನ
ಕಲಬುರ್ಗಿ ಕೇಳಿದರು:
“ದ್ವೇಷದ ದಳ್ಳುರಿಯಲಿ ಬೇಯಲೇಕೆ?
ಹಗೆಯ ಅಟ್ಟಕ್ಕೇರಿ ಕೊಲ್ಲಲೇಕೆ?
ನಾವು ಕುಳಿತು ಮಾತನಾಡಬಾರದೇಕೆ?”

ಕಟುಕರ ಕಲ್ಲು ಹೃದಯ ಕರಗಿ
ಖುಷಿಯಿಂದ ಕೈ ಕುಲುಕಿ,
ಚಹಾ ಹೀರುತ್ತಾ ಮಾತಿಗೆ ಕೂತರು….

ಬಹುಶಃ ಪೆರುಮಾಳ್ ಮುರುಗನ್ ಬರೆದ ಪದ್ಯನುವಾದ ಇದು. ಚರ್ಚೆ ಸಂವಾದಗಳಿಂದ ವಿವಾದ ಬಗೆಹರಿಸಿಕೊಳ್ಳುವ ಜಿಜ್ಞಾಸ ಭಾರತ ನಮ್ಮದಲ್ಲ ಎಂಬುದು ಗೌರಿ, ಕಲಬುರ್ಗಿಯವರ ಹತ್ಯೆಯಿಂದ ಸಾಬೀತಾಗಿದೆ. ಇಂದು ಎಂ ಎಂ ಕಲಬುರ್ಗಿಯವರು ಹತ್ಯೆಯಾದ ದಿನ.

ಭಾರತದಲ್ಲಿ ಲಿಬೆರಲ್ ಎಂಬ ಹಣೆಪಟ್ಟಿಯಡಿಯಲ್ಲಿ ಪ್ರಗತಿಪರರು ಮತ್ತು ವಿಚಾರವಾದಿಗಳನ್ನ ಒಂದೇ ತಕ್ಕಡಿಯಲ್ಲಿ ತೂಗಿಬಿಡುವುದು ಸಾಮಾನ್ಯ. ಆದರೆ ಪ್ರಗತಿಪರರು ಮತ್ತು ವಿಚಾರವಾದಿಗಳ ನಡುವಿನ ವ್ಯತ್ಯಾಸವೇನೆಂದು ನೋಡುವುದು ಒಳ್ಳೆಯದು. ವಿಚಾರವಾದಿಗಳೇ ಯಾಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಹತ್ಯೆಗೊಳಗಾಗುತ್ತಾರೆ ಎಂಬುದು ಯೋಚಿಸಬೇಕಾದ ವಿಷಯ ಕೂಡ.

ಪ್ರಗತಿಪರರು (progressive) ಮತ್ತು ಆಧುನಿಕವಾದಿಗಳಿಗಿಂತ (modernist) ವಿಭಿನ್ನವಾಗಿ ಒಂದು ಹೆಜ್ಜೆ ಮುಂದೆ ಹೋಗಿ ವಿಚಾರವಾದಿಗಳು ಸಮಾಜದ ಮಡಿವಂತಿಗೆ ಹಾಗೂ ಮೂಲಭೂತವಾದದ ಬೇರುಗಳನ್ನ ಬಯಲಿಗೆಳೆಯುತ್ತಾರೆ. ಪ್ರಗತಿಪರರು ಒಂದು ಪೊಲಿಟಿಕಲ್ ಪ್ರಾಜೆಕ್ಟ್ ನಲ್ಲಿ ಎಲ್ಲರನ್ನು (ಮುಖ್ಯವಾಗಿ ಮತದಾರನ್ನ) ಕಾಡುವ ವಿಷಯಗಳಿಗೆ ಮಾತ್ರ ತಲೆಗೆಡಿಸಿಕೊಳ್ಳಬಹುದು. (ಉದಾಹರಣೆಗೆ ಇಂಧನ ಬೆಲೆ ಏರಿಕೆ, ಹಣದುಬ್ಬರ etc) ಅದರೆ ವಿಚಾರವಾದಿಗಳು ಒಂದು ಸಮಾಜದಲ್ಲಿ ಎಲ್ಲರನ್ನೂ ಆಳವಾಗಿ ಹಿಂಸಿಸುವ, ಹಿತವಲ್ಲದ ವಿಷಯಗಳ ಕೈಗೆತ್ತಿಕೊಳ್ಳುತ್ತಾರೆ. (ಜಾತಿ ಪದ್ಧತಿ, ಅಸ್ಪೃಶ್ಯತೆ, ಮಲ ಹೊರುವ ಪದ್ದತಿ, ಲಿಂಗ ತಾರತಮ್ಯ etc)
ವಿಚಾರವಾದಿಗಳು ಬರಿಯ ರಾಜಕೀಯ, ಆರ್ಥಿಕ ಬದಲಾವಣೆಗಳನ್ನಷ್ಟೇ ಬಯಸದೆ ಸಾಮಾಜಿಕ ಬದಲಾವಣೆಯ ಹರಿಕಾರರಾಗಿರುತ್ತಾರೆ. ಸಂಪ್ರದಾಯವಾದಿಗಳ, ಮಡಿವಂತರ ಶಕ್ತಿ ಕುಗ್ಗುವುದು ವಿಚಾರವಾದಿಗಳಿಂದಲೇ ಹೊರತು ಪ್ರಗತಿಪರರಿಂದಲ್ಲ. ವಿಚಾರವಾದಿಗಳೇ ಮಂಡಿವಂತರ ನಿದ್ದೆ ಹಾಳು ಮಾಡುವುದು ಕೂಡ.

ಪ್ರಗತಿಪರರು ಆಧುನಿಕ ಮೌಲ್ಯಗಳಿಗೆ ಮತ್ತು ಅಮೂರ್ತ ಸ್ವಾತಂತ್ರ್ಯಗಳಿಗೆ ಹೋರಾಟ ಮಾಡುತ್ತಾರೆ. ಆದರೆ ಪ್ರಗತಿಪರರ ಕೆಲಸಗಳು ವಿಚಾರವಾದಿಗಳ ಕೆಲಸಗಳಂತೆ ಸಮಾಜದ ಎಲ್ಲರನ್ನೂ ಪ್ರಭಾವಿಸಲಾರದು. ವಿಚಾರ ವಾದಿಗಳ ಪ್ರಭಾವಕ್ಕೆ ಕಾಲದ ಮಿತಿಯಿಲ್ಲ. ದೇಶ ಗಡಿಗಳ ಬಂಧನವಿಲ್ಲ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳು ಎಲ್ಲೆಡೆ ಎಲ್ಲಾ ಕಾಲಕ್ಕೂ ಜೀವಂತವಲ್ಲವೇ?

ವಿಚಾರವಾದಿಗಳು ನಮ್ಮ ಮೂಲ “ಪವಿತ್ರ, ಪರಿಶುದ್ಧ, ಪೂಜ್ಯ” ನಂಬಿಕೆಗಳನ್ನ ಪ್ರಶ್ನಿಸುತ್ತಾರೆ. ಅನಾದಿಕಾಲದಿಂದಲೂ ಧಾರ್ಮಿಕ ಮಡಿವಂತರು ಪಸರಿಸಿದ, ಕಾನೂನುಸಮ್ಮತಿಯಿತ್ತ ನಂಬಿಕೆಗಳಿಗೆ, ಕಟ್ಟುಕತೆಗಳಿಗೆ, ಡಂಬಾಚಾರಗಳಿಗೆ, ಅಂಧಾಚರಣೆ ಮತ್ತು ಪದ್ಧತಿಗಳ ಬೇರುಗಳಿಗೆ ಕೊಡಲಿಪೆಟ್ಟು ನೀಡುತ್ತಾರೆ. ಈ ಕಾರಣಗಳಿಂದಲೇ ಮೂಲಭೂತವಾದಿಗಳು ವಿಚಾರವಾದಿಗಳನ್ನ ಪ್ರಗತಿಪರರಗಿಂತ ಅತಿದೊಡ್ಡ ವೈರಿಗಳೆಂದು ಪರಿಗಣಿಸುತ್ತಾರೆ. ಹೀಗೆ ವಿಚಾರವಾದಿಗಳನ್ನ/ವೈರಿಗಳನ್ನ ಹೇಗಾದರೂ ಮಾಡಿ ಸುಮ್ಮನಾಗಿಸಿಬಿಡುವ ತುರ್ತು ಮಡಿವಂತರಲ್ಲಿ ಹುಟ್ಟಿಕೊಳ್ಳುತ್ತದೆ. ಈ ತುರ್ತಿನಿಂದಲೇ ದಾಬೋಲ್ಕರ್, ಕಲಬುರ್ಗಿ, ಪನೇಸರ್ ಹಾಗೂ ಗೌರಿ ಲಂಕೇಶ್ ಅಂತವರ ಕೊಲೆಗಳಾಗಿಬಿಡುತ್ತವೆ….

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!