Thursday, September 19, 2024

ಪ್ರಾಯೋಗಿಕ ಆವೃತ್ತಿ

”ಕನ್ನಡ ಬಾವುಟ ನಮ್ಮ ಗುರುತು”| ಅಧಿಕೃತ ಮಾನ್ಯತೆಗಾಗಿ ಕರವೇ ಟ್ವಿಟರ್ ಅಭಿಯಾನ

ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಇದೇ ಶನಿವಾರ ಸಂಜೆ 5 ಗಂಟೆಯಿಂದ ಎಕ್ಸ್‌ (ಟ್ವಿಟರ್) ನಲ್ಲಿ ಅಭಿಯಾನ ಹಮ್ಮಿಕೊಂಡಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ”ಕನ್ನಡಬಾವುಟ_ನಮ್ಮಗುರುತು #KannadaFlag_MyPride” ಎಂಬ ಹ್ಯಾಶ್ ಟ್ಯಾಗ್‌ಗಳ ಅಡಿಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದ್ದು, ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಕರ್ನಾಟಕ ಸರ್ಕಾರ ಈಗಾಗಲೇ ಭಾರತ ಒಕ್ಕೂಟ ಸರ್ಕಾರಕ್ಕೆ ನೀಡಿರುವ ಪ್ರಸ್ತಾವನೆಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಲಿದ್ದೇವೆ ಎಂದು ತಿಳಿಸಿದ್ದಾರೆ.

”ಕನ್ನಡಿಗರಿಗೆ ಕನ್ನಡ ಬಾವುಟ ಮೊದಲ ಗುರುತು. ಭಾರತ ಒಕ್ಕೂಟದ ಭಾಗವಾಗಿ ನಮ್ಮದೇ ಆದ ಬಾವುಟವೊಂದನ್ನು ಹೊಂದುವುದಕ್ಕೆ ಅವಕಾಶ ಇರಬೇಕು‌. ಈಗಾಗಲೇ ಕೋಟ್ಯಂತರ ಕನ್ನಡಿಗರು ಕನ್ನಡ ಬಾವುಟವನ್ನು ಆರಾಧಿಸುತ್ತಾರೆ. ಹೀಗಾಗಿ ಒಕ್ಕೂಟ ಸರ್ಕಾರ ಕೂಡಲೇ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

”ಶನಿವಾರ ಸಂಜೆ ಸಾವಿರಾರು ಕರವೇ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ಕನ್ನಡ ಬಾವುಟಕ್ಕೆ ಮಾನ್ಯತೆ ಕೊಡಿಸುವ ಈ ಹೋರಾಟಕ್ಕೆ ಎಲ್ಲ ಕನ್ನಡಿಗರೂ ಬೆಂಬಲ ನೀಡಬೇಕು” ಎಂದು ಕೋರಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!