Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕನ್ನಡ ಸೇನೆ ಮಂಜುನಾಥ್ ಗೆ ಕನ್ನಡಾಂಬೆ ಪ್ರಶಸ್ತಿ ಪ್ರದಾನ

ಮಂಡ್ಯ ಪ್ರವಾಸಿ ಮಂದಿರದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ನಡೆದ ಸಮಾರಂಭದಲ್ಲಿ ಕನ್ನಡ ಸೇನೆ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಅವರಿಗೆ ಕನ್ನಡಾಂಬೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಂಜನಾಥ್ ಅವರು ಸಮಾಜಕ್ಕೆ ತನ್ನದೇ ಆದಂತ ಸೇವೆಯನ್ನ ಕಳೆದ 22 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ, ಪ್ರಸ್ತುತ ನಾನು ಒಂದುವರೆ ವರ್ಷಗಳಿಂದ ಮಂಜುನಾಥ್ ಅವರನ್ನು ನೋಡಿಕೊಂಡು ಬಂದಿದ್ದೇನೆ, ನಿರಂತರವಾಗಿ ಸಾಮಾಜಿಕ ಕೆಲಸಗಳನ್ನು ಮಾಡುವುದರ ಜೊತೆಗೆ ಕನ್ನಡದ ಪ್ರೇಮವನ್ನು ಅಪ್ಪಿಕೊಂಡಿದ್ದಾರೆ. ಬಹಳಷ್ಟು ವಿಷಯಗಳಲ್ಲಿ ಹೋರಾಟ ಮಾಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದಾರೆ ಇಂತಹ ಸಾಮಾಜಿಕ ಕಳಕಳಿಯ ವ್ಯಕ್ತಿಯನ್ನು ಕನ್ನಡಾಂಬೆ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಬಾಳ ಸಂತೋಷದ ವಿಷಯ ಎಂದು ಹೇಳಿದರು.
.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ್ ಬಾಲದಂಡಿ, ಮಾತನಾಡಿ ಹಲವಾರು ಜನರು ಸಮಾಜದಲ್ಲಿ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಿಂದನು ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಹಲವಾರು ಸಾಮಾಜಿಕ ಮತ್ತು ರೈತರ ಪರವಾದ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸುತ್ತಾ ಇರುತ್ತಾರೆ, ಇಂತಹವರಿಗೆ ಪ್ರಶಸ್ತಿಗಳ ಮೌಲ್ಯ ಸಂಘಟನೆಗೆ ಹೆಚ್ಚು ಸ್ಥಾನವನ್ನು ತಂದುಕೊಡುತ್ತದೆ . ಮಂಜುನಾಥ್ ಅವರಂತ ವ್ಯಕ್ತಿಗಳನ್ನ ಪ್ರಶಸ್ತಿಗೆ ಆಯ್ಕೆ ಬಹಳ ಸಂತೋಷದ ವಿಷಯ. ಸಮಾಜದ ಅಂಕು ಡೊಂಕು ಗೊತ್ತಿರುವ ವ್ಯಕ್ತಿಗಳು ಮುಖಪುಟಕ್ಕೆ ಬಂದರೆ ಸಮಾಜ ಸುಧಾರಣೆ ಆಗುತ್ತದೆ ಎಂದು ಹೇಳಿದರು.

ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಕೆ.ಟಿ ಶ್ರೀ ಕಂಠೇಗೌಡ ಮಾತನಾಡಿ, ಮಂಜಣ್ಣ ಕಳೆದ ಬಹಳಷ್ಟು ಹೋರಾಟಗಳಲ್ಲಿ ನನ್ನ ಜೊತೆ ಪ್ರಕ್ರಿಯವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ ಮಳವಳ್ಳಿ ತಾಲೂಕು ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಿಂದ ಬಂದು ಕಳೆದ ಕಾವೇರಿ ಹೋರಾಟದಲ್ಲಿ 150 ದಿನವು ನಮ್ಮ ಜೊತೆಯಲ್ಲಿದ್ದು ಹೋರಾಟವನ್ನು ಮಾಡಿದ್ದಾರೆ. ಮಂಜಣ್ಣ ನಾವು ಹಲವಾರು ಪ್ರಗತಿಪರ ಸಂಘಟನೆಗಳ ನಾಯಕರು ಬಹಳಷ್ಟು ವಿಷಯಗಳ ಕುರಿತು ಸಮಾಜದ ಹೋರಾಟಗಳನ್ನು ಮಾಡಿದ್ದೇವೆ. ಮಂಜಣ್ಣ ಅವರಂತ ಯುವ ಹೋರಾಟಗಾರರನ್ನು ಗುರುತಿಸಿ ಕನ್ನಡಾಂಬೆ ರಾಜ್ಯ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಇಂತಹ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿರುವುದು ಖುಷಿ ತಂದಿದೆ ಎಂದರು.

ಸಮಾರಂಭದಲ್ಲಿ ಮಂಡ್ಯ ನಗರಸಭಾ ಅಧ್ಯಕ್ಷ ನಾಗೇಶ್, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್, ವರಪ್ರಸಾದ್ ಮಾತನಾಡಿದರು. ಸಮಾರಂಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ರಾಜಶೇಖರ್, ಹಿರಿಯ ಪತ್ರಕರ್ತ ಬಸವೇಗೌಡ, ಕನ್ನಡ ಸೇನೆಯ ಜಿ ಮಹಾಂತಪ್ಪ, ಪವಿತ್ರ , ಲಂಕೇಶ್, ಭರತ್ ರಾಜ್, ಕೀರ್ತಿರಾಜ್ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ