Friday, September 20, 2024

ಪ್ರಾಯೋಗಿಕ ಆವೃತ್ತಿ

127 ದಿನಕ್ಕೆ ಕಾವೇರಿ ಹೋರಾಟ| ‘ಕಾವೇರಿ ನದಿ ನೀರು ನಮ್ಮ ಹಕ್ಕು’; ಪೋಸ್ಟರ್ ಅಭಿಯಾನ

ಕಾವೇರಿ ನೀರಿಗಾಗಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಮಂಡ್ಯನಗರದಲ್ಲಿ ನಡೆಸಯುತ್ತಿರುವ ಹೋರಾಟ ಬುಧವಾರ (ಜ.10)ಕ್ಕೆ 127 ದಿನ ಪೂರೈಸಿದೆ. ಈ ಸಂದರ್ಭದಲ್ಲಿ ಹೋರಾಟಗಾರರು ‘ಕಾವೇರಿ ನದಿ ನೀರು ನಮ್ಮ ಹಕ್ಕು’ ; ‘ಕಾವೇರಿ ನಮ್ಮದು ರಕ್ಷಿಸೋಣ ಬನ್ನಿ’ ಘೋಷವಾಕ್ಯದ ಭಿತ್ತಿ ಪತ್ರಗಳನ್ನು ವಾಹನಗಳ ಮೇಲೆ ಅಂಟಿಸುವ ಮೂಲಕ ಪೋಸ್ಟರ್ ಅಭಿಯಾನ ನಡೆಸಿದರು.

ಮಂಡ್ಯನಗರದಲ್ಲಿ ಮೆರವಣಿಗೆ ನಡೆಸಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ಗಳ ಮೇಲೆ ಬಿತ್ತಿ ಪತ್ರ ಅಂಟಿಸಿದರು. ಖಾಸಗಿ ಬಸ್, ವಾಹನಗಳು ಹಾಗೂ ಗೋಡೆಗಳ ಮೇಲೆ ಆಂಟಿಸಿ ಕಾವೇರಿ ವಿಚಾರದಲ್ಲಿ ನ್ಯಾಯಕ್ಕೆ ಆಗ್ರಹಿಸಿದರು.

nudikarnataka.com

ಈ ಸಂದರ್ಭದಲ್ಲಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ, ಸಂಕಷ್ಟಕಾಲದಲ್ಲಿ ನೀರು ಬಿಡುವ ಆದೇಶ ಮಾಡುತ್ತಿರುವ ಪ್ರಾಧಿಕಾರದ ವಿರುದ್ಧ ಹೋರಾಟ ಮಾಡುತ್ತಾ ಕಾವೇರಿ ನೀರನ್ನು ಉಳಿಸಲು ಆಳುವ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ, ಚಳವಳಿ ಬೇಕಿತ್ತಾ ಎಂದು ಕುಹಕದ ಮಾತನ್ನ ಆಡುವವರು ಧರಣಿ ಸ್ಥಳಕ್ಕೆ ಬಂದಿದ್ದಾರಾ ? ಸರ್ಕಾರವನ್ನ ರಾಜಕಾರಣಿಗಳನ್ನ ಪ್ರಶ್ನಿಸಿದ್ದಾರಾ ? ಎಲ್ಲಿ ಸಿಗುತ್ತಾರೋ ಅಲ್ಲೇ ಪ್ರಶ್ನೆ ಮಾಡಬಹುದಿತ್ತಲ್ಲ, ರಾಜಕಾರಣಿಗಳನ್ನು ಸನ್ಮಾನಿಸಿ ಗೌರವಿಸುವವರು ಇಲ್ಲಿ ಚಳವಳಿ ಬಗ್ಗೆ ಕುಹಕದ ಮಾತು ಆಡುತ್ತಾರೆ, ಇವರಿಗೆ ನೈತಿಕತೆ ಇದೆಯಾ ? ಎಂದು ಕಿಡಿಕಾರಿದರು.

ಯಾರನ್ನು ಮೆಚ್ಚಿಸಲು ಅಥವಾ ಯಾರಿಗೂ ಹೆದರಿ ಚಳವಳಿ ಮಾಡುತ್ತಿಲ್ಲ, ಕಾವೇರಿ ನದಿ ನೀರು ನಮ್ಮದು, ರೈತರ ಹಿತರಕ್ಷಣೆ ಮುಖ್ಯ ಹಾಗಾಗಿ ನಿರಂತರ ಹೋರಾಟ ನಡೆಯುತ್ತಿದೆ, ಯಾರನ್ನು ಕೇಳಿ ಚಳವಳಿ ಮಾಡಬೇಕಾಗಿಲ್ಲ,ನಿಲ್ಲಿಸಬೇಕಾಗಿಲ್ಲ, ಹೋರಾಟಕ್ಕೆ ಬರಲಿ ಇಲ್ಲದಿದ್ದರೆ ಸುಮ್ಮನಿರಿ, ಹೋರಾಟ ಮಾಡೋದು ಬಿಡೋದು ನನಗೆ ಸೇರಿದ್ದು ಎಂದು ಕಾವೇರಿ ಚಳವಳಿ ಟೀಕಾಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಬೋರಯ್ಯ, ರೈತಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ.ವಿ ಕೃಷ್ಣ, ಜೈ ಕರ್ನಾಟಕ ಪರಿಷತ್ ಎಸ್.ನಾರಾಯಣ, ಮುಖಂಡರಾದ ಸುಜಾತ ಕೃಷ್ಣ, ಸುಶೀಲ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!