Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು| ಲಾಲ್ ಬಾಗ್ ನಲ್ಲಿ ಅರಳಿ ನಿಂತ ‘ಅನುಭವ ಮಂಟಪ’; ಫಲಪುಷ್ಪ ಪ್ರದರ್ಶನ

ರಾಜ್ಯ ರಾಜಧಾನಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಜನವರಿ 18ರಿಂದ ಜನವರಿ 28ರವರೆಗೆ 215ನೇ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರದರ್ಶನಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, “ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ ಫಲ ಪುಷ್ಪ ಪ್ರದರ್ಶನ 2024ವನ್ನು ನಾನು, ಡಿಸಿಎಂ ಡಿ ಕೆ ಶಿವಕುಮಾರ್, ರಾಮಲಿಂಗಾರೆಡ್ಡಿ ಉದ್ಘಾಟಿಸಿದ್ದೇವೆ. ಕಾಕತಾಳೀಯ ಎಂಬಂತೆ ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಬಸವಣ್ಣ ಸಾಂಸ್ಕೃತಿಕ ರಾಯಭಾರಿಯನ್ನಾಗಿ ತೀರ್ಮಾನ ತೆಗೆದುಕೊಂಡಿದ್ದೇವೆ” ಎಂದು ತಿಳಿಸಿದರು.

“ಶಿವಮೊಗ್ಗ ನಗರದ ಹಳೆ ಜೈಲು ಆವರಣದ ಸಾರ್ವಜನಿಕ ಪ್ರದೇಶಕ್ಕೆ ಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ, ವಚನ ಸಾಹಿತ್ಯದ ಮೂಲಕ ಸಮಸಮಾಜಕ್ಕೆ ಮುನ್ನುಡಿ ಬರೆದ ಶರಣ ಅಲ್ಲಮಪ್ರಭು ಉದ್ಯಾನ ಎಂದು ಮರುನಾಮಕರಣ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇವರಿಬ್ಬರ ಹೆಸರು ಕೂಡ ಚಿರಸ್ಥಾಯಿಯಾಗಿರಲಿದೆ” ಎಂದು ತಿಳಿಸಿದರು.

10 ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನ

ಗಣರಾಜ್ಯೋತ್ಸವದ ನಿಮಿತ್ತ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನ ಬೆಂಗಳೂರಿನ ಆಕರ್ಷಣೆಯ ಕೇಂದ್ರ ಬಿಂದುಗಳಲ್ಲಿ ಒಂದಾಗಿದೆ. ಬರೋಬ್ಬರಿ 10 ದಿನಗಳ ಕಾಲ ಈ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಜಗಜ್ಯೋತಿ ಬಸವೇಶ್ವರರ ಥೀಮ್‌ನಲ್ಲಿ ಈ ವರ್ಷದ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಬಸವಣ್ಣ ಮತ್ತು ವಚನ ಸಾಹಿತ್ಯವನ್ನು ಆಧರಿಸಿದೆ.

ಸಮಾಜ ಸುಧಾರಕ ಬಸವಣ್ಣ, ಅವರ ಪರಂಪರೆ ಮತ್ತು ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಕೇಂದ್ರೀಕರಿಸಿ ನಾನಾ ಹೂವಿನ ಪ್ರತಿಕೃತಿಗಳನ್ನು ರಚಿಸಲಾಗಿದೆ. ಲಾಲ್‌ಬಾಗ್ ಗಾಜಿನ ಮನೆಗೆ ಪ್ರವೇಶಿಸಿದಾಗ ಮೊದಲು ಬಸವಣ್ಣನವರ ಪ್ರತಿಮೆ ಎದುರಾಗಲಿದೆ. ಗಾಜಿನ ಮನೆಯ ಒಳಗಡೆ 12ನೇ ಶತಮಾನದ ‘ಅನುಭವ ಮಂಟಪ’ ಹೂವುಗಳಲ್ಲಿ ಅರಳಲಿದೆ. ಇದು ಈ ಬಾರಿಯ ವಿಶೇಷತೆಗಳಲ್ಲಿ ಒಂದಾಗಿದೆ.

ಪ್ರವೇಶ ಶುಲ್ಕ

ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ ₹80, ರಜಾ ದಿನಗಳಲ್ಲಿ ₹100, 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲಿ ₹30 ನಿಗದಿ ಮಾಡಲಾಗಿದೆ. ಶಾಲಾ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ (1- 10ನೇ ತರಗತಿ ಮಕ್ಕಳಿಗೆ) ರಜಾ ದಿನ ಹೊರತು ಪಡಿಸಿ ಉಚಿತ ಪ್ರವೇಶವಿರುತ್ತದೆ. ಪ್ರದರ್ಶನದ ಸಮಯ ಬೆಳಿಗ್ಗೆ 6ರಿಂದ ಸಂಜೆ 6.30ರವರೆಗೆ ಇರಲಿದೆ.

ಟಿಕೆಟ್ ಎಲ್ಲಿ ಲಭ್ಯ?

ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ದೊರೆಯಲಿದೆ. ತೋಟಗಾರಿಕೆ ಇಲಾಖೆಯ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿಯೂ ಟಿಕೆಟ್ ಪಡೆಯುವ ಅವಕಾಶ ನೀಡಲಾಗಿದೆ.

ಕೃಪೆ: ಈ ದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!