Thursday, October 10, 2024

ಪ್ರಾಯೋಗಿಕ ಆವೃತ್ತಿ

ಕಸಾಪ ಸದಸ್ಯರಿಂದ ಉಪವಾಸ ಸತ್ಯಾಗ್ರಹ

ಮಂಡ್ಯ ಎಸ್ಪಿ ಕಚೇರಿ ಬಳಿ ಇರುವ ಗ್ರಂಥಾಲಯ ಕಟ್ಟಡವನ್ನು ಕನ್ನಡ ಸಾಹಿತ್ಯ ಪರಿಷತ್ ಸುಪರ್ದಿಗೆ ನೀಡದಿದ್ದರೆ ಸದಸ್ಯರೆಲ್ಲರೂ ಸೇರಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಕಸಾಪ ತಾಲೂಕು ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್ ಎಚ್ಚರಿಕೆ ನೀಡಿದರು.

ಶ್ರೀರಂಗಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆಲ ವರ್ಷಗಳ ಹಿಂದೆ ಇದ್ದ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು ಈ ಕಟ್ಟಡವನ್ನು ಜಿಲ್ಲಾ ಕಸಾಪಕ್ಕೆ ನೀಡಿದ್ದು ಇದನ್ನು ಅಭಿವೃದ್ದಿ ಪಡಿಸಿ ನೌಕರರು, ಪರಿಷತ್ತಿನ ಸದಸ್ಯರು,ಸಾರ್ವಜನಿಕರಿಗಾಗಿ ಗ್ರಂಥಾಲಯವನ್ನು ನಿರ್ಮಿಸಿ ಕಟ್ಟಡವನ್ನು ಸದೃಢ ಗೊಳಿಸಲಾಗಿದೆ.

ಇದೀಗ ಪೊಲೀಸ್ ಇಲಾಖೆಯ ನಿವೃತ್ತ ನೌಕರರು ನಮಗೆ ಸೇರಿದೆ ಎಂದು ನಮ್ಮ ಕಟ್ಟಡವನ್ನು ಅತಿ ಕ್ರಮ ಪ್ರವೇಶ ಮಾಡಿದ್ದಾರೆ. ದೂರು ಸಹ ನೀಡಿದ್ದು ಕಟ್ಟಡದ ಸುತ್ತಲೂ ಬ್ಯಾರಿಕೇಡ್ ನಿರ್ಮಿಸಿ ಪೋಲೀಸರನ್ನು ನಿಯೋಜಿಸಿರುವುದು ಸರಿಯಲ್ಲ ಎಂದರು.

ಕೂಡಲೇ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು, ಜಿಲ್ಲೆಯ ಸಚಿವರು ಮಧ್ಯ ಪ್ರವೇಶ ಮಾಡಿ ನಮ್ಮ ಸಾಹಿತ್ಯ ಪರಿಷತ್ತಿನ ಕಟ್ಟಡ ವನ್ನು ನಮ್ಮಲ್ಲೇ ಉಳಿಸಿಕೊಡಬೇಕು ಇಲ್ಲದಿದ್ದರೆ ಕಟ್ಟಡದ ಮುಂಭಾಗದಲ್ಲಿ ಸದಸ್ಯರೆಲ್ಲರೂ ಸೇರಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಸಾಪ ಮಾಜಿ ಅಧ್ಯಕ್ಷ ಚಿಕ್ಕಪಾಳ್ಯ ಪುರುಷೋತ್ತಮ, ಕೋಶಾದ್ಯಕ್ಷ ಕೆ.ಬಿ. ಬಸವರಾಜು, ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ದೇವರಾಜು, ನಗರಾಧ್ಯಕ್ಷೆ ಸರಸ್ವತಮ್ಮ, ಶಂಕರ್ ಚಂದಗಾಲು, ದರಸಗುಪ್ಪೆ ಲೋಕೇಶ್ ಇತರರು ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!