Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಮಾನ ನಿಲ್ದಾಣ- ಸೇತುವೆಗಳ ಕುಸಿತದ ಬೆನ್ನಲ್ಲೇ 1200 ಕೋಟಿ ರೂ. ವೆಚ್ಚದ ಹೊಸಸಂಸತ್‌ ಭವನದಲ್ಲೂ ಸೋರಿಕೆ!

ಕಳೆದ 10 ವರ್ಷಗಳ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡ ವಿಮಾನನಿಲ್ದಾಣಗಳು, ರಸ್ತೆ-ಸುರಂಗ ಮಾರ್ಗಗಳು ಹಾಗೂ ಸೇತುವೆಗಳು ಕುಸಿದು ವಿಶ್ವದಾದ್ಯಂತ ಭಾರತದ ಇಮೇಜಿಗೆ ಧಕ್ಕಯುಂಟಾಗಿತ್ತು. ಈಗ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾ 1200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಹೊಸ ಸಂಸತ್ ಭವನದಲ್ಲೂ ಸೋರಿಕೆ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಹೊಸದಾಗಿ ನಿರ್ಮಿಸಲಾದ ಸಂಸತ್‌ ಭವನದಲ್ಲಿ ಮಳೆ ನೀರು ನಿಂತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾ ಆಗಿದ್ದ ಸಂಚಲನ ಮೂಡಿಸಿವೆ. ಹೊಸ ಸಂಸತ್‌ ಭವನ ನಿರ್ಮಾಣವಾಗಿ ಉದ್ಘಾಟನೆಗೊಂಡು ವರ್ಷ ಕಳೆದಿಲ್ಲವಾದರೂ ಆಗಲೇ ಸೋರಿಕೆ ಕಾಣಿಸಿಕೊಂಡಿರುವುದು ಸಂಸತ್ ಭವನದ ಗುಣಮಟ್ಟವನ್ನು ಪ್ರಶ್ನೆ ಮಾಡುವಂತೆ ಮಾಡಿದೆ.

“>

 

ಈ ದೃಶ್ಯವನ್ನು ತಮಿಳುನಾಡಿನ ವಿರುದುನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌‍ ಸಂಸದ ಮಾಣಿಕ್ಕಂ ಠಾಗೋರ್‌ ಬಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಮಾರ 1200 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ನೂತನ ಸಂಸತ್‌ ಭವನದಲ್ಲಿ ನೀರು ಜಿನುಗುತ್ತಿದ್ದು, ಅದನ್ನು ಸಂಗ್ರಹಿಸಲು ಬಕೆಟ್‌ ಅನ್ನು ಇಡಲಾಗಿದೆ ಎಂದು ಅವರು ವ್ಯಂಗ್ಯವಾಡಿದ್ಧಾರೆ.

“>ಅಧಿಕಾರಿಗಳ ಹಣದಾಸೆಗೆ ಕಳಪೆ ಕಾಮಗಾರಿಯಿಂದ ನೂತನ ಸಂಸತ್‌ ಭವನ ಸೋರಿಕೆಯಾಗುತ್ತಿದೆ. ಇದು ನಿಜಕ್ಕೂ ವಿಪರ್ಯಾಸ. ಸಂಸತ್‌ ಭವನದ ಕತೆ ಹೀಗಾದರೆ ಜನಸಾಮಾನ್ಯರ ಗತಿ ಏನು ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಈ ನೀರಿನ ಸೋರಿಕೆಯು ಹೊಸ ಕಟ್ಟಡದಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದೆ. ನಿರ್ಮಾಣಗೊಂಡ ಕೇವಲ ಒಂದು ವರ್ಷದ ನಂತರ ಸಂಸತ್‌ ಭವನ ಮಳೆ ನೀರಿನಿಂದ ತುಂಬಿ ಹೋಗಿದೆ. ಇದರಿಂದಾಗಿ ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಮಂಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮೋದಿ ಸರ್ಕಾರ 1200 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹೊಸ ಸಂಸತ್‌ ಕಟ್ಟಡದಲ್ಲಿ ಭಾರಿ ನೀರು ತುಂಬಿಕೊಂಡಿದೆ. ಕಾರಿನಲ್ಲಿ ಬಂದ ಜನಪ್ರತಿನಿಧಿಗಳು ಛತ್ರಿ ಹಿಡಿದು ಒಳಗಡೆ ಪ್ರವೇಶ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಅಲ್ಲದೆ ಮಳೆ ನೀರಿನಲ್ಲಿ ನಡೆದುಕೊಂಡು ಹೋಗುವ ಸ್ಥಿತಿ ನೂತನ ಸಂಸತ್‌ ಭವನದ ಮುಂದೆ ಕಂಡು ಬಂದಿದೆ. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌‍ ಕಿಡಿಕಾರಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!