Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ವಾಭಿಮಾನದ ಮೇಲೆ ಚುನಾವಣೆ ಎದುರಿಸುತ್ತೇನೆ : ಎಲ್.ಆರ್. ಶಿವರಾಮೇಗೌಡ

ಈ ಬಾರಿಯ ನಾಗಮಂಗಲ ವಿಧಾನಸಭಾ ಚುನಾವಣೆಯನ್ನು ಪಕ್ಷೇತರವಾಗಿ ಸ್ವಾಭಿಮಾನದ ಮೇಲೆ ಎದುರಿಸುತ್ತೇನೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಹೋಬಳಿ ಯಲ್ಲಿ ಭಾನುವಾರ ನಡೆದ ಎಲ್ ಆರ್ ಎಸ್ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಹಣೆ ಬರಹನಾ ನಾನೇ ನೋಡ್ಕೋ ಬೇಕು. ಹಿಂದಿನ ಚುನಾವಣೆಯಲ್ಲಿ ಕೊಪ್ಪ ಹೋಬಳಿಯ ಬಗ್ಗೆ ಭಯವಿತ್ತು. ಈಗ ನಾನು ಹೋಬಳಿಯಾದ್ಯಂತ ಪ್ರವಾಸ ಮಾಡಿದ್ದೇನೆ. ಜನ ಬೆಂಬಲ ದೊರಕಿದೆ. ಈ ಹೋಬಳಿಯನ್ನು 42 ಸಾವಿರ ಮತಗಳಿವೆ, ಇದರಿಂದ ನನಗೆ ವಿಶ್ವಾಸ ಬಂದಿದೆ ಎಂದರು.

ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಎನ್.ಚಲುವರಾಯಸ್ವಾಮಿ ಅವರೊಂದಿಗೆ  ಸ್ನೇಹವಿದೆ, ಆದಕ್ಕಾಗಿ ಇಂದಿಗೂ ಅವರೊಂದಿಗೆ ಮಾತನಾಡುತ್ತೇನೆ, ಆದರೆ ಅದಕ್ಕಾಗಿ ಇಲ್ಲದ ಊಹಪೋಹಗಳನ್ನು ಕಲ್ಪಿಸುವುದು ಬೇಡ, ಈ ಹಿಂದೆ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ನಾವೇ ಚಲುವರಾಯಸ್ವಾಮಿ ಅವರಿಗೆ ಕೆರೆ ಮಾಡಿ ಮಾತನಾಡಿದ್ದೆ, ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಎಪ್ಪತೈದು ಸಾವಿರ ಮತಗಳು ನಾಗಮಂಗಲ ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬರುವ ಆಗೇ ಮಾಡಿದ್ದು ನಾನು, ನಾನು ಮಾಡಿದ ಅಡಿಗೆಗೆ ಟೆಕೆಟ್ ಕೊಡದೆ ಇದ್ದಂಥ ಸಂದರ್ಭದಲ್ಲಿ ಸುರೇಶ್ ಗೌಡ ಅನ್ನೋನಿಗೆ ಟಿಕೆಟ್  ಕೊಟ್ಟರು. ನನ್ನ ಅಭಿಮಾನಿಗಳು ನನ್ನ ಮನೆಗೆ ಬಂದು ನೀವು ಪಕ್ಷೇತರ ಅಭ್ಯರ್ಥಿ ಯಾಗಿ ನೀವು ಸ್ಪರ್ಧಿಸಬೇಕು ಎಂದು ಬಂದು ಹೇಳಿದ್ದಂತ ಸಂದರ್ಭದಲ್ಲಿ ನಾನು ಚುನಾವಣೆಗೇ ಸ್ಪರ್ದಿಸಬೇಕು ಎಂದು ತೀರ್ಮಾನ ಮಾಡಿ ಬಂದಿದ್ದೇನೆ ಎಂದರು.

ಹಲವಾರು ಕುತಂತ್ರಗಳಿಂದ ಇಂದು ಜೆಡಿಎಸ್ ಪಕ್ಷದಿಂದ ಹೊರಬಂದಿದ್ದೇನೆ, ಆದರೇ ನನ್ನ ಜನ ಎಂದು ಸ್ವಾಭಿಮಾನ ಉಳ್ಳ ಜನ ಅಂಬರೀಷ್ ಹೆಂಡತಿ ಸುಮಲತಾ ಸ್ವಾಭಿಮಾನದ ಸೇರಗನ್ನ ಹೊಡ್ದಿ ಮತ ಪಡೆದು ವಿಜಯ ಶೀಲರಾದರು. ಮಂಡ್ಯ ಜಿಲ್ಲೆಯ ಜನ ಸ್ವಾಭಿಮಾನ ಉಳ್ಳವರು ಎಂದು ಕೂಡ ಅನ್ಯಾಯ ಮಾಡುವವರಿಗೆ ಅವಕಾಶ ಕೊಡುವುದಿಲ್ಲ, ಇಂದು ಕೊಪ್ಪದಲ್ಲಿ ಎಲ್ ಆರ್ ಎಸ್ ಪರ್ವ ಸಮಾವೇಶಕ್ಕೆ ಆಗಮಿಸಿರುವ ಜನರೇ ಸಾಕ್ಷಿ ಮಂಡ್ಯ ದಲ್ಲಿ ಸ್ವಾಭಿಮಾನ ಇನ್ನು ಜೀವಂತವಾಗಿದೆ ಎಂಬುದು ಖಚಿತವಾಗಿದೆ ದಯಮಾಡಿ ನನಗೊಂದು ಅವಕಾಶ ಕೊಡಿ ನಿಮ್ಮ ಸೇವೆ ಮಾಡಲು ನಾನು ಅಧಿಕಾರಕ್ಕೆ ಬಂದ ಒಂದು ತಿಂಗಳಿನಲ್ಲಿ ನಿಮಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

 

ಯುವ ಮುಖಂಡ ಚೇತನ್ ಗೌಡ ಮಾತನಾಡಿ, ಸುಮಾರು ನಲವತ್ತು ವರ್ಷಗಳ ರಾಜಕೀಯದಲ್ಲಿ ಶಿವರಾಮೇಗೌಡರು ಜಿಲ್ಲಾ ಪಂಚಾಯತ್ ಹಾಗೂ ಎರಡು ಬಾರಿ ಶಾಸಕರು ಆಗಿದ್ದವರು, ಅಧಿಕಾರಕ್ಕೆ ಎಂದು ಆಸೆ ಪಟ್ಟವರಲ್ಲ, ಅಂಥವರು ಇಂದು ಸ್ವಾಭಿಮಾನಿ ಪರ್ವ ಬಣ ಕಟ್ಟಿಕೊಂಡು ತಾಲೂಕಿನಾದ್ಯಂತ ಸಂಚರಿಸಿ ಜನರ ಸಮಸ್ಯೆಗೇ ಸ್ಪಂದಿಸುತ್ತಿದಾರೆ, ಪಕ್ಷಕ್ಕಾಗಿ ದುಡಿದ ಅವರನ್ನ ಜೆ ಡಿ ಎಸ್ ನವರು ಯಾವುದೋ ತುಣುಕು ಆಡಿಯೋವನ್ನ ಮುಂದಿಟ್ಟುಕೊಂಡು ಪಕ್ಷದಿಂದ ಹೊರ ಹಾಕಿದ್ದಾರೆ. ಅಂದಮೇಲೆ ನಮ್ಮದೇ ಆದ ಎಲ್ ಆರ್ ಎಸ್ ಪರ್ವ ಎಂಬ ಹೊಸ ಪಕ್ಷವನ್ನ ನಾವಿಂದು ಕಟ್ಟಿಕೊಂಡು ಗೆಲುವಿನತ್ತ ಮುಖ ಮಾಡುತ್ತಿದ್ದೇವೆ ಎಂದರು.

ಕೊಪ್ಪ ಹೋಬಳಿ ಯಲ್ಲಿ ನಡೆದ ಎಲ್ ಆರ್ ಎಸ್ ಪರ್ವ ಕಾರ್ಯಕ್ರಮದಲ್ಲಿ ತೆರೆದ ವಾಹನದಲ್ಲಿ ಶಿವರಾಮೇಗೌಡ ಹಾಗೂ ಚೇತನ್ ಗೌಡ ರವರನ್ನು ವಾದ್ಯ ತಮಟೆ ಕಂಸಾಳೆ, ವೀರಗಾಸೆ ವಿವಿಧ ರೀತಿಯ ಜಾನಪದ ತಂಡಗಳ ಸಂಭ್ರಮಾಚರಣೆಯೊಂದಿಗೆ ಕೊಪ್ಪ ಜನತೆ ಸ್ವಾಗತಿಸಿ ಹೂ ಮಳೆ ಸುರಿಸಿ, ಬೃಹತ್ ಗಾತ್ರದ ಹೂ ಮಾಲೆಯನ್ನ ಹಾಕುವ ಮೂಲಕ ಬಹಳ ವಿಜೃಂಭಣೆಯಿಂದ ಸ್ವಾಗತಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!