Monday, May 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಮಾನವ ಸರಪಳಿ ನಿರ್ಮಿಸಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ವತಿಯಿಂದ ಕೆ.ಆರ್.ಪೇಟೆ ಪಟ್ಟಣದ ಟಿ.ಬಿ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಹೆಚ್.ಟಿ ಮಂಜು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ,ಡಿ.ಕೆ ಶಿವಕುಮಾರ್, ಎಲ್.ಆರ್ ಶಿವರಾಮೇಗೌಡ ಇವರೆಲ್ಲರೂ ಸೇರಿ ಲೋಕಸಭಾ ಚುನಾವಣೆಗಳ ಸೋಲಿನ ಹತಾಶೆಯಿಂದ ಪೆನ್ ಡ್ರೈವ್ ಹಂಚುವ ಮೂಲಕ ಹೆಣ್ಣಿನ ಮಾನವನ್ನು ಹರಾಜು ಹಾಕಿದ್ದಾರೆ ಎಂದು ಕಿಡಿಕಾರಿದರು.

ರಾಜಕೀಯ ಲಾಭಕ್ಕಾಗಿ ಇದಕ್ಕೆ ತನಿಖೆ ನೆಪದಲ್ಲಿ ರಚಿಸಿರುವ ಎಸ್.ಐ.ಟಿ ಎಂಬ ತಂಡ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಅವರ ಅಣಿತಿಯಂತೆ ನಡೆಯುವ ತಂಡವಾಗಿದೆ. ಈ ತಂಡ ಎಸ್.ಐ.ಟಿ ಎಂದರೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಇನ್ವೆಸ್ಟಿಗೇಷನ್ ಟೀಮ್, ಇದರಿಂದ ಯಾವುದೇ ನ್ಯಾಯ ಸಿಗುವುದಿಲ್ಲ. ಕೂಡಲೇ ಈ ಹಗರಣವನ ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದರು.ಇವರು ದೇವೆಗೌಡರ ಕುಟುಂಬವನ್ನ ಆರೋಪಿಗಳನ್ನಾಗಿ ಮಾಡಲು ಸಂಚುರೂಪಿಸುವ ತಂಡವಾಗಿದೆ. ಈ ತಪ್ಪನ್ನ ಮಾಡಿದವರು ಯಾರೇ ಆದರೂ ನೇಣಿಗೇರಿಸಲಿ ಅದಕ್ಕಿಂತ ಮೊದಲು ಹೆಣ್ಣಿನ ಮಾನ ಹರಣ ಮಾಡಿದ ಪೆನ್ ಡ್ರೈವ್ ವಿತರಿಸಿದ ಎಲ್ಲರನ್ನು ಹಿಡಿದು ಅವರನ್ನು ನೇಣಿಗಿರಿಸಲಿ ಎಂದು ಒತ್ತಾಯಿಸಿದರು.

ಮನೆಯಲ್ಲಿ ಇದ್ದಂತಹ ಹೆಣ್ಣು ಮಕ್ಕಳ ಮಾನವನ್ನು ಬೀದಿಗೆಳೆದು ಅವರು ಕುಟುಂಬ, ಗಂಡನಿಂದ ದೂರವಾಗುವಂತೆ ಮಾಡಿದ್ದಾರೆ. ಇಂತಹ ನೀಚ ಕೃತ್ಯ ಮಾಡುವಲ್ಲಿ ಶಿವರಾಮೇಗೌಡ, ಡಿ.ಕೆ ಶಿವಕುಮಾರ್ ನಿಸೀಮರು . ಕೂಡಲೇ ಡಿ.ಕೆ ಶಿವಕುಮಾರ್ ಶಿವರಾಮೇಗೌಡರ ವಿರುದ್ಧ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು.ಹೆಣ್ಣಿನ ಮಾನ ಹರಣ ಮಾಡಿದ ಕಾಂಗ್ರೆಸ್ ಸರ್ಕಾರ ಅದರ ನಾಯಕರುಗಳನ್ನು ಕೂಡಲೇ ಅಧಿಕಾರದಿಂದ ಇಳಿಸಿ ನ್ಯಾಯಯುತ ತನಿಖೆ ನಡೆಸುವಂತೆ ಒಕ್ಕರಳಿನಿಂದ ಆಗ್ರಹಿಸಿದರು.

ಮಾತಿನ ಚಕಮಕಿ

ಡಿಸಿಎಂ ಡಿಕೆ ಶಿವಕುಮಾರ್ ಪ್ರತಿ ಕೃತಿ ದಹನಕ್ಕೆ ಪೊಲೀಸರು ಅಡ್ಡಿ ಪಡಿಸಿದರು, ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಪೊಲೀಸರು ಕಾಂಗ್ರೆಸ್ ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದಂತಹ ಜೆಡಿಎಸ್ ಕಾರ್ಯಕರ್ತರು ಎಲ್.ಆರ್ ಶಿವರಾಮೇಗೌಡ ,ಡಿ.ಕೆ ಶಿವಕುಮಾರ್, ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಕಾಂಗ್ರೆಸ್ ಸರ್ಕಾರವನ್ನ ಕಿತ್ತೊಗೆಯಿರಿ ಎಂದು ಆಗ್ರಹಿಸಿದ್ದರು.

ಪ್ರತಿಭಟನೆಯ ವೇಳೆಯಲ್ಲಿ ಪ್ರತಿಭಟನಾಕಾರರು ಎಲ್ ಆರ್ ಶಿವರಾಮೇಗೌಡ, ಡಿಸಿಎಂ ಡಿಕೆ ಶಿವಕುಮಾರ್ ರವರ ಪ್ರತಿಕೃತಿಗೆ ಚಪ್ಪಲಿ ಪೊರಕೆಗಳಿಂದ ಒಡೆಯುತ್ತಾ ಅವರುಗಳ ವಿರುದ್ಧ ದಿಕ್ಕಾರವನ್ನು ಕೂಗಿದರು.

ಡಿ.ವೈ.ಎಸ್.ಪಿ ಡಾ.ಸುಮಿತ್ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಆನಂದೇಗೌಡ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್,ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ ಅಶೋಕ್, ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನೆಗೋಳ ಬಿ. ಎಂ ಕಿರಣ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!