Wednesday, November 18, 2026

ಪ್ರಾಯೋಗಿಕ ಆವೃತ್ತಿ

ವಿಧಾನ ಪರಿಷತ್ ಗೆ ಮದನ್ ಪಟೇಲ್ ನೇಮಕ ಮಾಡಲು ಆಗ್ರಹ

ಕನ್ನಡ ಚಿತ್ರರಂಗದ ನಟ, ಸಂಗೀತ ನಿರ್ದೇಶಕ ಮದನ್ ಪಟೇಲ್ ಅವರನ್ನು ನೂತನ ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಬೇಕೆಂದು ಮಂಡ್ಯ ಜಿಲ್ಲಾ ಮದನ್ ಪಟೇಲ್ ಅಭಿಮಾನಿ ಬಳಗದ ಗೊರವಾಲೆ ಚಂದ್ರಶೇಖರ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1980ರ ದಶಕದಿಂದ ಮದನ್ ಪಟೇಲ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಕೋಲಾರ ಮಂಗಳೂರು ಬೆಂಗಳೂರು ಉತ್ತರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತಿಯೊಂದು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದರು.

ಮದನ್ ಪಟೇಲ್ ಅವರು ಇಂದಿರಾಗಾಂಧಿಯವರ ಜನಪ್ರಿಯ ಸಾಲಮೇಳ ಕಾರ್ಯಕ್ರಮಗಳಲ್ಲಿ ಮತ್ತು ಸಾಧನ ಸಮಾವೇಶಗಳಲ್ಲಿ ತಮ್ಮ ತಂಡದೊಂದಿಗೆ ಪ್ರಚಾರ ಕಾರ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. 1991 ಮೇ 10ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುವವರೆಗೆ ಸುಮಾರು 7 ಗಂಟೆಗಳ ಕಾಲ ತಮ್ಮ ತಂಡದೊಂದಿಗೆ ಪ್ರಚಾರ ಗೀತೆ ಕಾರ್ಯಕ್ರಮ ನಡೆಸಿದ್ದು, ಅಂದು ಸತಃ ವಿ.ರಾಜೀವ ಗಾಧಿಯವರು ಇವರನ್ನು ಬೆನ್ನು ತಟ್ಟಿ ಶ್ಲಾಘನೆ ಮಾಡಿದ್ದರು. ಆದ್ದರಿಂದ ಮದನ್ ಪಟೇಲ್ ಅವರ ಪಕ್ಷದ ಸೇವೆಯನ್ನು ಪರಿಗಣಿಸಿ ಅವರನ್ನು ಸರ್ಕಾರ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಬಳಗದ ಪದಾಧಿಕಾರಿಗಳಾದ ಎನ್.ಶೇಖರ್, ಬಸವರಾಜು, ರಾಮಕೃಷ್ಣ, ವೈರಮುಡಿ ಹಾಗೂ ರುದ್ರೇಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ