ಎಡಪಂಥೀಯ ಚಿಂತಕ ಮಾಜಿ ಶಾಸಕ ಕಮ್ಯುನಿಷ್ಟ್ ನೇತಾರ ಜಿ.ವಿ.ಶ್ರೀರಾಮರೆಡ್ಡಿ ಇಂದು ಬೆಳಿಗ್ಗೆ ತೀವ್ರ ಹೃದಯಘಾತದಿಂದ ಮೃತಪಟ್ಟಿರುತ್ತಾರೆ.
ಜಿ.ವಿ. ಶ್ರೀರಾಮರೆಡ್ಡಿಯವರು ಮಂಡ್ಯ ಜಿಲ್ಲೆಯ ರೈತ ಮತ್ತು ಪ್ರಗತಿಪರ ಚಳುವಳಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಚಳುವಳಿಗೆ ಮಾರ್ಗದರ್ಶಕರಾಗಿ, ನೇತಾರರಾಗಿ,ಚಳವಳಿಗಳ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದ ಚೇತನವಾಗಿದ್ದರು.
ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿಯಾಗಿದ್ದ ಶಾಸಕರಾಗಿ ಜನರ ದನಿಯಾಗಿ ಸಮರ್ಥವಾಗಿ ಕೆಲಸ ಮಾಡಿದ್ದ ಜನಾನುರಾಗಿ ನೇತಾರ ಜಿ.ವಿ.ಶ್ರೀರಾಮರೆಡ್ಡಿ ನಿಧನರಾಗಿರುವುದು ರಾಜ್ಯದ ಜನ ಚಳವಳಿ ತುಂಬಲಾರದ ನಷ್ಟ ಉಂಟು ಮಾಡಿದೆ.
ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಕಾರ್ಮಿಕರ ಹೋರಾಟ, ಶಾಂತಮ್ಮ ಅತ್ಯಾಚಾರ ಪ್ರಕರಣದ ವಿರುದ್ಧದ ಹೋರಾಟ, ಸೋಮನಹಳ್ಳಿ ಬಿಪಿಎಲ್ ಕಾರ್ಖಾನೆಯ ಹೋರಾಟ ಮುಂತಾದವುಗಳಲ್ಲಿ ಜಿ.ವಿ.ಶ್ರೀರಾಮರೆಡ್ಡಿಯವರು ಸಕ್ರಿಯವಾಗಿ ಭಾಗವಹಿಸಿದ್ದರು.
ಜಿ.ವಿ. ಶ್ರೀರಾಮರೆಡ್ಡಿಯವರ ನಿಧನ ಕಮ್ಯುನಿಷ್ಟ್ ಚಳುವಳಿಗೆ ಅಷ್ಟೇ ಅಲ್ಲದೆ, ರೈತ, ಕಾರ್ಮಿಕ ದಮನಿತ ವರ್ಗಗಳಿಗೆ ತುಂಬಲಾರದ ನಷ್ಟ.
– ಟಿ.ಯಶವಂತ. ಕರ್ನಾಟಕ ಪ್ರಾಂತ ರೈತ ಸಂಘ
ಜಿ.ವಿ.ಶ್ರೀರಾಮರೆಡ್ಡಿಯವರು ಶಾಸಕರಾಗಿ ವಿಧಾನಸಭೆಯಲ್ಲಿದ್ದ ಕಾಲಾವಧಿಯಲ್ಲಿಯೇ ಮಂಡ್ಯ ಜಿಲ್ಲೆಯ ಪಾಂಡವಪುರ ಕ್ಷೇತ್ರದಿಂದ ರೈತನಾಯಕ ಪುಟ್ಟಣ್ಣ್ಯನವರು ಸಹ ವಿಧಾನಸಭೆಯಲ್ಲಿದ್ದು ರೈತರು, ಕಾರ್ಮಿಕರು, ಜನಸಾಮಾನ್ಯರ ವಿಷಯಗಳ ಬಗ್ಗೆ ಇಡೀ ಸದನವನ್ನು ಮಂತ್ರಮುಗ್ಧವಾಗುವಂತೆ ಇಬ್ಬರು ಶಾಸಕರುಗಳು ಮಾತನಾಡುತ್ತಿದದ್ದು ಜಿ.ವಿ. ಶ್ರೀರಾಮರೆಡ್ಡಿ ಮರಣದೊಂದಿಗೆ ಇನ್ನು ಮುಂದೆ ಕೇವಲ ನೆನಪು ಮಾತ್ರ.
ಇದನ್ನೂ ಓದಿ : ಮಂಡ್ಯದ ಜಿಲ್ಲಾಡಳಿತ ಮತ್ತು ಶಾಸಕರು ಸ್ಲಂ ಜನರಿಗೆ ದ್ರೋಹ ಬಗೆದಿದ್ದಾರೆ : ಕರ್ನಾಟಕ ಜನಶಕ್ತಿ