ಇಂದು ಶ್ರೀ ಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜದವರು ಮಂಡ್ಯದಲ್ಲಿ 1008ನೇ ಮಹಾವೀರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದರು.
ನಗರದ ಜೈನರ ಬೀದಿಯಿಂದ ಹೊರಟ ಅದ್ದೂರಿ ಮೆರವಣಿಗೆಯು ವಿ.ವಿ. ರಸ್ತೆಯ ಮೂಲಕ ಸಾಗಿ ನಗರದ ಹಲವು ಮುಖ್ಯ ರಸ್ತೆಗಳಲ್ಲಿ ಸಾಗಿತು. ಹೂವಿನ ಪಲ್ಲಕ್ಕಿಯಲ್ಲಿದ ಭಗವಾನ್ ಮಹಾವೀರರ ಪ್ರತಿಮೆಗೆ ವಿವಿಧ ಪುಪ್ಷಗಳಿಂದ ಆಲಂಕಾರ ಮಾಡಲಾಗಿತ್ತು. ಮೆರವಣಿಗೆಯು ಮಹಾವೀರ ವೃತ್ತಕ್ಕೆ ಬಂದಾಗ ರೇಷ್ಮೆ, ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಕೆ.ಸಿ.ನಾರಾಯಣಗೌಡ, ಶಾಸಕ ಎಂ.ಶ್ರೀನಿವಾಸ್, ನಗರಸಭೆಯ ಅಧ್ಯಕ್ಷ ಎಚ್. ಎಸ್. ಮಂಜು, ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಸೇರಿದಂತೆ ಹಲವು ಗಣ್ಯರು ಭಗವಾನ್ ಮಹಾವೀರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.


ಡೊಳ್ಳು ಕುಣಿತ, ಪಟ ಕುಣಿತ, ಗಾರುಡಿಗೊಂಬೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಜನರ ಮನಸೆಳೆಯಿತು. ಡೊಳ್ಳು ಕುಣಿತದ ಶಬ್ದಕ್ಕೆ ಮಹಿಳೆಯರು, ಮಕ್ಕಳು ಸಂಭ್ರಮದಿಂದ ಹೆಜ್ಜೆ ಹಾಕಿದರು. ಇದೇ ಸಂದರ್ಭದಲ್ಲಿ ಪದ್ಮಾಂಭ ಟ್ರೇಡರ್‍ಸ್ ಬಿ.ಎಸ್. ಪದ್ಮಾನಾಭಯ್ಯ ಸ್ವರಣಾರ್ಥ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.


ಜೈನ ಸಮಾಜದ ಅಧ್ಯಕ್ಷ ಶಾಂತಿಪ್ರಸಾದ್, ಕಾರ್ಯದರ್ಶಿ ರವಿ, ರಾಕೇಶ್ ಜೈನ್, ಧರಣೇಂದ್ರಯ್ಯ, ವಿನಯ್, ಸುದರ್ಶನ್, ಶಯನ್ ಪದ್ಮಪ್ರಸಾದ್, ಸುಧೀರ್, ಪದ್ಮನಾಭ್ ಸೇರಿದಂತೆ ಹಲವರಿದ್ದರು.