ಜ್ಞಾನವಾಹಿನಿ ಶಿಕ್ಷಣ ಸಂಸ್ಥೆಯ ಮೈಸೂರು ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ (ಮೈಸೆಮ್) ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಪ್ರಾಂಶುಪಾಲ ಎಂ.ಎಸ್. ಪ್ರಭುಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರದಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಏಳು ಕೋರ್ಸ್ಗಳು ಇದ್ದು ಸುಮಾರು 550 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು,ಶೇ. 90 ರಷ್ಟು ಸೀಟುಗಳು ಭರ್ತಿಯಾಗಿರುತ್ತದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪಾಠ ಪ್ರವಚನಗಳ ಜೊತೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಡಿಪ್ಲೋಮೋ ಮುಗಿಸಿ ಇಂಜಿನಿಯರಿಂಗ್ ಸೇರಲು ಬರುವ ವಿದ್ಯಾರ್ಥಿಗಳಿಗೆ ಮೊದಲನೇ ವರ್ಷ 30,000 ರೂ ಹಣ ಹಾಗೂ ಎರಡು ಮತ್ತು ಮೂರನೇ ವರ್ಷ ತಲಾ 65,000 ರೂ.ಹಣವನ್ನು ಮಾತ್ರ ಕಟ್ಟಬೇಕಿದೆ. ಸಿಇಟಿ ಮತ್ತು ಕಾಮೆಡ್ ಕೆ ಮೂಲಕ ಬರುವ ವಿದ್ಯಾರ್ಥಿಗಳು ಮೊದಲನೇ ವರ್ಷ 30,00೦ ರೂ ಹಣವನ್ನು ಕಟ್ಟಬೇಕು.ನಂತರ ಸರ್ಕಾರ ನಿಗದಿ ಪಡಿಸಿದಂತೆ ಎರಡು ಮೂರು ಮತ್ತು ನಾಲ್ಕನೇ ವರ್ಷ 93,000 ರೂ.ಗಳನ್ನು ಕಟ್ಟಬೇಕು.ಕಟ್ಟಿರುವ ಅಷ್ಟು ಹಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಮೂಲಕ ಸಿಗಲಿದ್ದು ವಿದ್ಯಾರ್ಥಿಗಳು ಯಾವುದೇ ಖರ್ಚಿಲ್ಲದೆ ವಿದ್ಯಾಭ್ಯಾಸ ಮುಗಿಸಬಹುದು ಎಂದು ತಿಳಿದರು.
ಪ್ರತಿಭಾ ಪುರಸ್ಕಾರ ಸಹಾಯಕ ಪ್ರಾಧಾಪ್ಯಕ ಜಯಾಮ್ ಮಾತನಾಡಿ,ಮೈಸೆಮ್ ಆಡಳಿತ ಮಂಡಳಿಯು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ 100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಮಾಡಲು ನಿರ್ಧರಿಸಿದ್ದು,ಜುಲೈ 16 ರ ಒಳಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿಗಾಗಿ www.mysem.edu.in ಹಾಗೂ ಚೇತನ್ 9743 349 231 ಸಂಪರ್ಕಿಸಬಹುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಎಜುಕೇಶನ್ ಡೈರೆಕ್ಟರ್ ಚೇತನ್,ಗ್ರಂಥ ಪಾಲಕ ಮಹದೇವಸ್ವಾಮಿ ಉಪಸ್ಥಿತರಿದ್ದರು.