Thursday, September 19, 2024

ಪ್ರಾಯೋಗಿಕ ಆವೃತ್ತಿ

N.P.S ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗೋದು ಶತಸಿದ್ಧ : ಮರಿತಿಬ್ಬೇಗೌಡ

ಸರ್ಕಾರಿ ನೌಕರರಿಗೆ ಮಾರಕವಾಗಿರುವ ಹೊಸ ಪಿಂಚಣಿ ಯೋಜನೆ (NPS) ಬಗ್ಗೆ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಗಂಭೀರವಾದ ಚರ್ಚೆಯಾಗೋದು ಶತಸಿದ್ಧ, ಈ ಬಗ್ಗೆ ನೌಕರರು ಯಾವುದೇ ಅನುಮಾನ ಇಟ್ಟುಕೊಳ್ಳಬಾರದು ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ, ಹಾಲಿ ಸದಸ್ಯ ಮರಿತಿಬ್ಬೇಗೌಡ ಭರವಸೆ ನೀಡಿದರು.

ಮಂಡ್ಯದ ರೈತಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ”ಓಟ್ ಫಾರ್ OPS” ಅಭಿಯಾನ ಹಾಗೂ ಹಳೇ ಪಿಂಚಣಿ ಜಾರಿಗಾಗಿ ನಡೆದ ಹಕ್ಕೊತ್ತಾಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಹಿಂದೆ ಇದ್ದ ಹಳೆ ಪಿಂಚಣಿ ಯೋಜನೆಯಡಿ ನಿವೃತ್ತ ನೌಕರರಿಗೆ ನಿರ್ದಿಷ್ಟವಾಗಿ ಇಷ್ಟೇ ಪಿಂಚಣಿ ಬರುತ್ತದೆ ಎಂದು ಹೇಳಬಹುದಿತ್ತು. ಆದರೆ NPS ನಲ್ಲಿ ನಿರ್ದಿಷ್ಟವಾಗಿ ಇಷ್ಟೆ ಪಿಂಚಣಿ ಬರುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ನೌಕರರಲ್ಲಿ ಅನುಮಾನ, ಆತಂಕ, ಸಂಶಯಗಳು ಮನೆ ಮಾಡಿವೆ, ಈ ಬಗ್ಗೆ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ನೌಕರರಿಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ ಎಂದು ದೂರಿದರು.

ಕಿಂಚಿತ್ತು ಸ್ಪಂದನೆ ಇಲ್ಲದ ಸರ್ಕಾರ 

NPS ಸಮಸ್ಯೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ, ಅಲ್ಲದೇ ರಾಜ್ಯದಾದ್ಯಂತ ನೌಕರರ ವಿವಿಧ ಬಗೆಯ ಹೋರಾಟ ನಡೆಸುತ್ತಿದ್ಧಾರೆ. ಆದರೆ ಇದಕ್ಕೆ ಸರ್ಕಾರ ಕಿಂಚಿತ್ತು ಸ್ಪಂದನೆ ಮಾಡುತ್ತಿಲ್ಲ ಎಂದು ದೂರಿದ ಅವರು, ಒಟ್ಟಾಗಿ ಹೋರಾಟ ನಡೆಸುವ  ನೌಕರರ ಸಮಸ್ಯೆ ಕೇಳದ ಸರ್ಕಾರ ಮತ್ತೊಂದೆಡೆ ನೌಕರರ ಸಂಘಟನೆಗಳನ್ನು ಒಡೆದು ಹೋರಾಟವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

nudikarnataka.com

ಈ ಹಿಂದೆ ಇದ್ದ ಸರ್ಕಾರಗಳು ಹೋರಾಟಗಳಿಗೆ ಬೆಲೆ ಕೊಟ್ಟು ಕನಿಷ್ಟ ನೌಕರರ ಕಷ್ಟಗಳನ್ನು ಕೇಳುವ ಕೆಲಸ ಮಾಡುತ್ತಿದ್ದವು ಆದರೆ ಈಗಿನ ಸರ್ಕಾರಗಳು ಹೋರಾಟಗಳಿಗೆ ಬೆಲೆ ಕೊಡ್ತಿಲ್ಲ, ಹಲವು ತಿಂಗಳುಗಳ ಕಾಲ ಹೋರಾಟ ನಡೆಸಿದರೂ ಅವರ ಸಮಸ್ಯೆಯನ್ನು ಆಲಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿಲ್ಲ ಎಂದು ದೂರಿದರು.

ನಮ್ಮ ಗುರಿ ಒಲ್ಡ್ ಪೆನ್ಷನ್ ಬರಬೇಕು

ನಮ್ಮ ಗುರಿ ಒಲ್ಡ್ ಪೆನ್ಷನ್ ಬರಬೇಕು. ಸಂಘಟನೆ ಮಾಡುವುದು ಬಹಳ ಕಷ್ಟದ ಕೆಲಸ, ಎಲ್ಲರೂ ಒಗ್ಗೂಡಿ ನಾವು ಹೋರಾಟ ಮಾಡಬೇಕಾಗಿದೆ. ಈ ಸಮಸ್ಯೆ ಬಗೆಹರಿಸದ ಸರ್ಕಾರಕ್ಕೆ ಒತ್ತಡ ಸೃಷ್ಟಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಈ ಸಮಸ್ಯೆ ಬಗೆಹರಿಯದಿದ್ದರೆ ನಾವು ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಹುಟ್ಟಿಸಬೇಕು. ಎಲ್ಲಾ ಜಿಲ್ಲೆಯ ಮಂತ್ರಿಗಳಿಗೆ ಒತ್ತಾಯ ಮಾಡಬೇಕು. ಪ್ರತಿಭಟನೆಯ ಕಾವನ್ನು ಉಳಿಸಿಕೊಳ್ಳಬೇಕು. ಮುಖ್ಯಮಂತ್ರಿಗಳಿಗೆ ಬಲವಾದ ಒತ್ತಾಯ ಮಾಡದಿದ್ದರೆ, ಅಷ್ಟು ಸುಲಭವಾಗಿ ಸಮಸ್ಯೆ ಬಗೆಹರಿಯುವುದಿಲ್ಲ. ಈ ಚುನಾವಣೆಯೊಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ, ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಸರ್ಕಾರಕ್ಕೆ ಸ್ಪಷ್ಟಪಡಿಸಬೇಕು ಹೇಳಿದರು.

ಮುಖ್ಯವಾಗಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಲ್ಲಿ ನಾವು ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಸಂದೇಶವನ್ನು ತಲುಪಿಸಬೇಕು. ನಿಮ್ಮ ಸಂಕಷ್ಟವನ್ನು ಪರಿಹರಿಸೋದು, ನಿಮ್ಮ ಕಣ್ಣೀರು ಒರೆಸೋದು, ನಮ್ಮ ಕೆಲಸ. ನಿಮ್ಮ ಚಳವಳಿಯಲ್ಲಿ ನಾನು ಸದಾ ಇರುತ್ತೇನೆ, ಸದನದಲ್ಲಿ ನಾವು ನಿಮ್ಮ ಪರವಾಗಿ ದನಿಯೆತ್ತುತ್ತೇನೆ. ಇದು ನನ್ನ ಧರ್ಮ, ನಮ್ಮ ಶಾಸಕರ ಮೇಲೆ ನಂಬಿಕೆಯಿಡಿ ನಾವೆಲ್ಲ ಸದಾ ಜೊತೆಯಲ್ಲಿ ಇರುತ್ತೇವೆ ಭರವಸೆ ನೀಡಿದರು.

ಋಣ ತೀರಿಸುವ ಅವಕಾಶ ಸಿಕ್ಕಿದೆ

nudikarnataka.com

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಯಾವುದೇ ಸಂದರ್ಭದಲ್ಲೂ ನಿಮ್ಮ ಚಳವಳಿಯ ಜೊತೆಯಲ್ಲಿಯೇ ಇರುತ್ತೇನೆ, ಹೋರಾಟದಲ್ಲಿ ಭಾಗಿಯಾಗಿ ನನ್ಮ ಋಣ ತೀರಿಸುವ ಅವಕಾಶ ಸಿಕ್ಕಿದೆ ಎಂದು ಭಾವಿಸುತ್ತೆನೆ, ಎಲ್ಲ ಹಿರಿಯ ಮಾರ್ಗದರ್ಶನದಲ್ಲಿ ನಾನು ಮುಂದುವರೆಯುತ್ತೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿ ಈಗಾಗಲೇ ನಾನು ಮಾತನಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ ಎಂದರು.

ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಚುನಾವಣೆ ಬರುತ್ತಿದೆ. ಚುನಾವಣೆ ಮುಂಚಿತವಾಗಿ ಒತ್ತಡ ಮಾಡಿ, ಈ ಸಮಸ್ಯೆ ಬಗೆಹರಿಸಿದರೆ ಬಹಳ ಒಳ್ಳೆಯದು. ನನ್ನ ಕಡೆಯಿಂದ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂಬರುವ ಅಧಿವೇಶನದಲ್ಲಿ NPS ಗೆ ಸಂಬಂಧಪಟ್ಟ ಎಲ್ಲಾ ಪ್ರಶ್ನಾವಳಿಗಳನ್ನು ಮಾಡಿಕೊಂಡಿದ್ದೆವೆ. ಅಧಿವೇಶನದಲ್ಲಿ ಚರ್ಚಿಸುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನೌಕರರನ್ನದ್ದೇಶಿಸಿ ಮಾತನಾಡಿದರು. N.P.S ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಂ, ಜಿಲ್ಲಾಧ್ಯಕ್ಷ ಸಿದ್ದರಾಜು ಬಿ.ಬಿ., ಎಂ.ವಿ.ಪುರುಷೋತ್ತಮ್, ಎಂ.ಎಲ್. ಕೃಷ್ಣೇಗೌಡ, ರಘು, ಸಿದ್ದರಾಜು ಜಿ.ಎಸ್, ಕೆಂಚರಂಗಯ್ಯ, ನಾಗಣ್ಣ, ಪ್ರಮೀಳ, ಸರಸ್ವತಿ, ಮುತ್ತಾಲಯ್ಯ,‌ ನಾಗರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!