Thursday, September 19, 2024

ಪ್ರಾಯೋಗಿಕ ಆವೃತ್ತಿ

₹590 ಕೋಟಿ ವೆಚ್ಚದ ಹನಿನೀರಾವರಿ ಯೋಜನೆ ಶೀಘ್ರ ಉದ್ಘಾಟನೆ: ನರೇಂದ್ರಸ್ವಾಮಿ

ಮಳವಳ್ಳಿ ಕ್ಷೇತ್ರದ ರೈತರ ಹೊಲಗಳಿಗೆ ನೀರುಣಿಸುವ ಸುಮಾರು ₹ 590ಕೋಟಿ ವೆಚ್ಚದ ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಜುಲೈನಲ್ಲಿ ಉದ್ಘಾಟನೆ ಮಾಡಲು ಸಿದ್ದರಾಮಯ್ಯನವರೇ ಬರಲಿದ್ದಾರೆ ಎಂದು ಶಾಸಕ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿಯಲ್ಲಿ ನಡೆದ ಬೃಹತ್ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಮಳವಳ್ಳಿ ತಾಲೂಕಿನಲ್ಲಿ ಗಾರ್ಮೆಂಟ್ಸ್ ಉದ್ಯಮಕ್ಕೆ ಅವಕಾಶ ಕೊಡಬೇಕು. ಗಗನಚುಕ್ಕಿಗೆ ರೋಪ್ ವೇ ಕೊಡಬೇಕು. ರೈತರಿಗೆ ನೀರಿನ ನೆರವು ಬೇಕಾಗಿದೆ ಎಂದು ಸಿಎಂಗೆ ಮನವಿ ಮಾಡಿದರು.

ದೇಶದಲ್ಲಿ ವಿರೋಧ ಪಕ್ಷಗಳು ಸುಳ್ಳಿನ ಸಾಮ್ರಾಜ್ಯ ಕಟ್ಟಿದ್ದಾರೆ. ಸತ್ಯವನ್ನು ಮರೆಮಾಚಿ ಕೋಮುಗಲಭೆ ಸೃಷ್ಠಿಸಿದ್ದಾರೆ. ಆದರೆ ನಮ್ಮ ಸರ್ಕಾರ ಜವಾಬ್ದಾರಿಯುವ ಕೆಲಸ ಮಾಡಿ 5ಗ್ಯಾರಂಟಿಗಳನ್ನ ಕೊಟ್ಟಿದೆ.
ನುಡಿದಂತೆ ನಡೆದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಬಣ್ಣಿಸಿದರು.

ದೇಶದ ಯಾವ ರಾಜ್ಯದಲ್ಲೂ ಸ್ತ್ರೀಗೆ ರಕ್ಷಣೆ, ಗೌರವ ಸಿಗ್ತಿಲ್ಲ. ಆದ್ರೆ ನಮ್ಮ ರಾಜ್ಯದಲ್ಲಿ ಸ್ತ್ರೀಯರಿಗೆ ಎಲ್ಲಾ ರೀತಿಯ ಯೋಜನೆ ನೀಡಲಾಗಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿಯೋಜನಗಳು ಮಹಿಳೆಯರಿಗೆ ಅನುಕೂಲ ಆಗಿವೆ. ಮಂಡ್ಯಕ್ಕೆ ನಮ್ಮ ಸರ್ಕಾರ ಹೆಚ್ಚು ಅನುದಾನ ನೀಡಿದೆ ಎಂದರು.

ಮೈಷುಗರ್ ಸಕ್ಕರೆ ಕಾರ್ಖಾನೆ ಹೊಸದಾಗಿ ನಿರ್ಮಾಣ ಮಾಡಲು ಅನುದಾನ ಕೊಟ್ಟಿದೆ. ನಾಲೆಗಳ ಅಭಿವೃದ್ಧಿಗೆ ಅನುದಾನ ಕೊಟ್ಟಿದೆ. ಮಳವಳ್ಳಿಯ ವಿದ್ಯುತ್ ಬವಣೆ, ಕಡಿಯುವ ನೀರಿನ ಬವಣೆಗೆ ಸರ್ಕಾರ ಸ್ಪಂದಿಸಿದೆ. ಮಂಡ್ಯದಲ್ಲಿ ಕೆಲವರು ಸುಳ್ಳನ್ನ ಮನೆದೇವರು ಮಾಡಿಕೊಂಡಿದ್ದಾರೆ. ಅವರು ಮಂಡ್ಯದ ಜನರ ಕಷ್ಟ ಕೇಳಲಿಲ್ಲ. ಆದ್ರೆ ನಮ್ಮ ಸರ್ಕಾರ ಬಡವರ ಕಷ್ಟ ಕೇಳುತ್ತಿದೆ ಎಂದು ನುಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!