Friday, September 20, 2024

ಪ್ರಾಯೋಗಿಕ ಆವೃತ್ತಿ

ದೇಶದಾದ್ಯಂತ ಸ್ವಚ್ಛ ಭಾರತ್ 2.0 ಕಾರ್ಯಕ್ರಮಕ್ಕೆ ಚಾಲನೆ

ಯುವಜನ ವ್ಯವಹಾರಗಳ ಮತ್ತು ಕ್ರೀಡಾ ಸಚಿವ  ಅನುರಾಗ್ ಸಿಂಗ್ ಠಾಕೂರ್ ಅವರು ಕಳೆದ ಅ.1ರಿಂದ ಚಾಲನೆ ನೀಡಲಾಗಿದ್ದು, ಅ.31ರವರೆಗೆ ದೇಶದಾದ್ಯಂತ ಒಂದು ತಿಂಗಳ ಅವಧಿಯ ‘ಸ್ವಚ್ಛ ಭಾರತ್ 2.0′ ಕಾರ್ಯಕ್ರಮ ಆರಂಭವಾಗಿದೆ ಎಂದು ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸಹಭಾಗಿತ್ವದೊಂದಿಗೆ ನಾಗರಿಕರ ಸಹಕಾರ ಮತ್ತು ಸ್ವಯಂಪ್ರೇರಿತ ಭಾಗವಹಿಸುವಿಕೆಯೊಂದಿಗೆ 1 ಕೋಟಿ ಕೆ.ಜಿ. ತ್ಯಾಜ್ಯವನ್ನು ಮುಖ್ಯವಾಗಿ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗುವುದು ಎಂದು ವಿವರಿಸಿದರು.

ನೆಹರು ಯುವ ಕೇಂದ್ರ ಸಂಘಟನೆ (ಎನ್ –ಕೆಎಸ್), ಅಂಗಸಂಸ್ಥೆ, ಯುವ ಕ್ಲಬ್‌ಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಗೆ ಸಂಯೋಜಿತವಾಗಿರುವ ಸಂಸ್ಥೆಗಳ ಸಹಕಾರದಿಂದ ದೇಶದಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಳೆದ ವರ್ಷದ ಸ್ವಚ್ಚ ಭಾರತ ಅಭಿಯಾನ’ದ ಯಶಸ್ಸಿನ ನಂತರ ಈ ವರ್ಷ 10 ಮಿಲಿಯನ್ ಕೆಜಿ ತ್ಯಾಜ್ಯವನ್ನು (ಪ್ಲಾಸ್ಟಿಕ್, ಇ-ತ್ಯಾಜ್ಯ) ಸಂಗ್ರಹಿಸಿ ವಿಲೇವಾರಿ ಮಾಡಲಾಗುವುದು. ಹಾಟ್‌ ಸ್ಪಾಟ್‌ಗಳು, ಪ್ರವಾಸಿ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ಬಸ್ ನಿಲ್ದಾಣಗಳು , ರೈಲು ನಿಲ್ದಾಣಗಳು ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳು, ರಾಷ್ಟ್ರೀಯ ಹೆಬ್ಬಾರಿಗಳು, ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡಗಳು, ಧಾರ್ಮಿಕ ಸ್ಥಳಗಳು ಮತ್ತು ಅವುಗಳ ಸುತ್ತಲಿನ ಸ್ಥಳಗಳು ಆಸ್ಪತ್ರೆಗಳು ಮತ್ತು ನೀರಿನ ಮೂಲಗಳನ್ನು ಸಚ್ಚಗೊಳಿಸಲಾಗುವುದು ಎಂದರು.

ನಾಗರಿಕ ಸಮಾಜ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು, ಅಥವಾ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಕಸ ಮುಕ್ತವಾಗಿಡಲು ನಾಗರಿಕರಲ್ಲಿ, ಅರಿವು ಮತ್ತು ಹೆಮ್ಮೆಯ ಭಾವವನ್ನು ಮೂಡಿಸುವುದು, ಇದರೊಂದಿಗೆ ಈ ಅಭಿಯಾನವು ಸಚ್ಚ, ಕಾಲ ನಮ್ಮ ಕಾಲ’ ಎಂಬ ಮೂಲ ಮಂತ್ರವನ್ನು ನೀಡಲಿದ್ದು, ಸಾರ್ವಜನಿಕ ಸಹಭಾಗಿತ್ವದ ಮೂಲಕ ಈ ಕಾರ್ಯಕ್ರಮಕ್ಕೆ, ಜನಾಂದೋಲನದ ಸ್ವರೂಪ ನೀಡಲಿದೆ ಎಂದು ನುಡಿದರು.

ಈ ಕಾರ್ಯಕ್ರಮದ ಅನ್ವಯ ದೇಶದಾದ್ಯಂತ 1 ಕೋಟಿ ಕೆ.ಜಿ. ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಗುರಿಯನ್ನು ಹೊಂದಲಾಗಿದೆ. ಅವರಂತೆ ಕರ್ನಾಟಕ ರಾಜ್ಯದ 11 ಜಿಲ್ಲೆಗಳಲ್ಲಿ ನಾಲ್ಕು ಲಕ್ಷದ ಹತ್ತು ಸಾವಿರ ಕೆ.ಜಿ. ಪ್ಲಾಸಿಕ್‌ ತ್ಯಾಜ್ಯವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಯುವಕ,ಯುವತಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗುರಿ ಇದೆ ಎಂದು ಹೇಳಿದರು.

ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಅಧಿಕಾರಿಗಳು, ಭಾರತ್ ಸೈಟ್ & ಗೈಡ್, ಸಮಾಜದ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಲು ಮನವಿ ಮಾಡಿದರು.

ಗೋಷ್ಠಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಾದ ಲೋಕೇಶ್, ಉಮೇಶ್ ಹಾಗೂ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!