Thursday, September 19, 2024

ಪ್ರಾಯೋಗಿಕ ಆವೃತ್ತಿ

ಫುಲ್ ಟೈಮ್ ರಾಜಕಾರಣಿಯಾಗಿ ಮುಂದುವರೆಯುತ್ತೇನೆ: ನಿಖಿಲ್ ಕುಮಾರಸ್ವಾಮಿ

“ನಾನು ಸಿನಿಮಾ ಮಾಡೋದನ್ನ ನಿಲ್ಲಿಸಿದ್ದೇನೆ. ಪಕ್ಷ ಕಟ್ಟುವ ಜವಾಬ್ದಾರಿ ನನಗೆ ನೀಡಿದ್ದಾರೆ. ಹಾಗಾಗಿ, ಇನ್ನು ಮುಂದೆ ನಾನು ಫುಲ್ ಟೈಮ್ ರಾಜಕಾರಣಿಯಾಗಿ ಮುಂದುವರೆಯುತ್ತೇನೆ” ಎಂದು ನಟ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇನ್ನುಮುಂದೆ ರಾಜಕಾರಣಿಯಾಗಿ ಕೆಲಸ ಮಾಡುತ್ತೇನೆ. ಸಿನಿಮಾ ಮಾಡೋದನ್ನ ನಿಲ್ಲಿಸಿದ್ದೇನೆ. ಪಕ್ಷ ಕಟ್ಟುವ ಜವಾಬ್ದಾರಿ ನನ್ನ ಮೇಲಿದೆ. ನಾನು ಇನ್ಮುಂದೆ ಪಕ್ಷ ಕಟ್ಟುವ ಕಡೆ ಗಮನ ಕೋಡುತ್ತೇನೆ. ನಾನು ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ನಾನು ಈಗ ಫುಲ್‌ ಟೈಮ್‌ ರಾಜಕಾರಣಿ” ಎಂದು ನಿಖಿಲ್‌ ಘೋಷಿಸಿದ್ದಾರೆ.

“2019ರ ನನ್ನ ಸೋಲು ಸೋಲಾಗಿರಲಿಲ್ಲ. ನಮ್ಮಲ್ಲಾದ ತಪ್ಪುಗಳಿಂದ ಹಿನ್ನಡೆ ಆಯಿತು. ಮಂಡ್ಯ ಜನ ನನಗೆ ಹೃದಯದಲ್ಲಿ ಸ್ಥಾನ ನೀಡಿದ್ದಾರೆ. ಕುಮಾರಣ್ಣ ಸಿಎಂ ಆಗಿದ್ದಾಗ ರಾಜ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಕುಮಾರಣ್ಣ ಸ್ಪರ್ಧೆಗೆ ಕಾರ್ಯಕರ್ತರ‌ ಅಪೇಕ್ಷೆ ಇತ್ತು. ಮಹಿಳೆಯರು, ರೈತರು, ಹಿರಿಯರು ಎಲ್ಲ ವರ್ಗದವರು ಕುಮಾರಣ್ಣ ಅವರನ್ನು ಹೆಚ್ಚಿನ ಅಂತರದಲ್ಲಿ ಆಯ್ಕೆ ಮಾಡಿದ್ದಾರೆ. ಮುಂದಿನ 5 ವರ್ಷ‌ ಮಂಡ್ಯ ಸಂಸದರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಕುಮಾರಣ್ಣ ಅವರ ಮೇಲೆ ಇಟ್ಟಿರುವ ಗೌರವ ಪ್ರೀತಿ, ವಿಶ್ವಾಸ ಉಳಿಸಿಕೊಳುತ್ತೀವಿ‌. ಕಾಂಗ್ರೆಸ್ಸಿಗರ ಟೀಕೆಗಳಿಗೆ ಮಂಡ್ಯ ಜನ ಉತ್ತರ ಕೊಟ್ಟಿದ್ದಾರೆ” ಎಂದಿದ್ದಾರೆ.

ಜೆಡಿಎಸ್‌ ಯುವ ಘಟಕದ ಅಧಕ್ಷ ಹಾಗೂ ನಟ ನಿಖಿಲ್‌ ಕುಮಾರಸ್ವಾಮಿ ಅವರು ರಾಜಕೀಯ ಹಾಗೂ ಸಿನಿಮಾ ರಂಗ ಎರಡರಲ್ಲೂ ತೊಡಗಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ರಾಜಕೀಯದಲ್ಲಿ ಹೆಚ್ಚು ಒಲುವು ತೋರಿಸಿ, ಎರಡು ಚುನಾವಣೆಗಳನ್ನು ಎದುರಿಸಿದ್ದರು. ಆದರೆ, ಆ ಚುನಾವಣೆಗಳು ಅವರ ಕೈಹಿಡಿಯಲಿಲ್ಲ.

ಹೀಗಾಗಿ, ನಿಖಿಲ್‌ ಸಿನಿಮಾ ರಂಗಕ್ಕೆ ಹೋಗುತ್ತಾರೆ ಅಥವಾ ರಾಜಕೀಯದಲ್ಲೇ ಉಳಿದುಕೊಳ್ಳುತ್ತಾರಾ ಎನ್ನುವ ಅನುಮಾನವಿತ್ತು. ಈ ಬಗ್ಗೆ ನಿಖಿಲ್‌ ಅವರೇ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಜಾಗ್ವಾರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ, ಸೀತಾರಾಮ ಕಲ್ಯಾಣ, ರೈಡರ್ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ದರ್ಶನ್ ನಾಯಕ ನಟನೆಯ ಕುರುಕ್ಷೇತ್ರ ಸಿನಿಮಾದಲ್ಲಿ ʻಅಭಿಮನ್ಯುʼ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ನಿಖಿಲ್ ಅವರ ಕೈಯಲ್ಲಿ ಯದುವೀರ ಎಂಬ ಸಿನಿಮಾ ಸಹ ಇತ್ತು. ಇದೀಗ ನಿಖಿಲ್ ಸಿನಿಮಾ ಕ್ಷೇತ್ರದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!